70 ಲಕ್ಷಕ್ಕೂ ಅಧಿಕ ಡೆಟಿಬ್, ಕ್ರೆಡಿಟ್ ಕಾರ್ಡ್ ಮಾಹಿತಿ ಸೋರಿಕೆ
ಬೆಂಗಳೂರು, ಡಿ. 9: ಸುಮಾರು 70 ಲಕ್ಷ ಅಧಿಕ ಭಾರತೀಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮಾಹಿತಿ ಡಾರ್ಕ್ ವೆಬ್ ನಲ್ಲಿ ಸೋರಿಕೆಯಾಗಿದೆ ಎಂದು ಇಂಟರ್ನೆಟ್ ಸೆಕ್ಯುರಿಟಿ ಸಂಶೋಧಕರೊಬ್ಬರು ಹೇಳಿದ್ದಾರೆ.
ಕಾರ್ಡ್ ಮಾಹಿತಿಯಲ್ಲಿ ವೈಯಕ್ತಿಕ ವಿವರ, ಫೋನ್ ನಂಬರ್, ಹಲವು ಸಂಸ್ಥೆಗಳ ವಾರ್ಷಿಕ ಆದಾಯ ವಿವರ ಕೂಡಾ ಸೇರಿದೆ, ಈ ಮಾಹಿತಿ ಸದ್ಯ ಡಾರ್ಕ್ ವೆಬ್ ನಲ್ಲಿ ಹರಿದಾಡುತ್ತಿದೆ ಎಂದು ಭದ್ರತಾ ಸಂಶೋಧಕ ರಾಜಶೇಖರ್ ರಾಜಹರಿಯಾ ಹೇಳಿದ್ದಾರೆ.
ಸೋರಿಕೆಯಾದ ಮಾಹಿತಿಯ ಪ್ರಮಾಣ ಸುಮಾರು 2ಜಿಬಿಯಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ಖಾತೆ ವಿವರಗಳ ಜೊತೆಗೆ ಮೊಬೈಲ್ ಅಲರ್ಟ್ ಪಡೆಯುತ್ತಿರುವ ಬಗ್ಗೆ ಕೂಡಾ ಮಾಹಿತಿ ಸೋರಿಕೆಯಾಗಿದೆ. 2010ರಿಂದ 2019ರ ಅವಧಿಯಲ್ಲಿ ಹ್ಯಾಕರ್ಸ್ ಕೈ ಸೇರಿರುವ ಈ ಮಾಹಿತಿ ಈಗ ಡಾರ್ಕ್ ವೆಬ್ ನಲ್ಲಿ ಮಾರಾಟಕ್ಕೆ ಲಭ್ಯವಾಗಿದೆ.

ಆದರೆ, ಕಾರ್ಡ್ ನಂಬರ್ ಮಾತ್ರ ಸೋರಿಕೆಯಾಗಿಲ್ಲ, ಈ ಮಾಹಿತಿಯನ್ನು ಮಾರ್ಕೆಟಿಂಗ್ ಗಾಗಿ ಬಳಸಲು ಸೇವಾದಾರರು ಹ್ಯಾಕರ್ಸ್ ಗಳಿಂದ ಪಡೆದುಕೊಂಡಿರಬಹುದು, ಈ ಮಾಹಿತಿಯನ್ನು ದುಪ್ಪಟ್ಟು ಬೆಲೆಗೆ ಮಾರಲು ಬಳಸಬಹುದು ಎಂದಿದ್ದಾರೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಲ್ಲದೆ, 5 ಲಕ್ಷಕ್ಕೂ ಅಧಿಕ ಮಂದಿಯ ಪ್ಯಾನ್ ಕಾರ್ಡ್ ಸೋರಿಕೆಯಾಗಿದೆ ಎಂದು ಸಂಶೋಧಕ ಹೇಳಿದ್ದಾರೆ.












Click it and Unblock the Notifications