• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುವ ತಂದೆ-ತಾಯಿ ಮಾಡುವ 4 ಆರ್ಥಿಕ ತಪ್ಪುಗಳು

|

ಮನೆಗೆ ಪುಟ್ಟ ಮಗುವಿನ ಆಗಮನ ಆಗುತ್ತಿದೆ ಅಂದರೆ ಅದರಿಂದ ಸಂತೋಷವೇ ಉಕ್ಕಿಹರಿಯುತ್ತದೆ. ಆದರೆ ಮಗು ಸಂತೋಷದ ಜತೆಗೆ ಹೊಸ ಜವಾಬ್ದಾರಿಗಳನ್ನು ಸಹ ತರುತ್ತದೆ. ಮಗುವನ್ನು ಚೆನ್ನಾಗಿ ನೋಡಿಕೊಳ್ಳುವ ವಿಚಾರದಲ್ಲಿ ರಾಜೀ ಆಗುವುದು ಖಂಡಿತ ಆಯ್ಕೆಯಲ್ಲ. ಅದರರ್ಥ ಏನೆಂದರೆ, ನಿಮ್ಮ ಆರ್ಥಿಕ ಸ್ಥಿತಿಯಂತೆಯೂ ಮಗು ಬಗ್ಗೆಯೂ ಗಮನ ಇರಬೇಕು.

ಆದರೆ, ಹಲವು ಹೊಸ ಪೋಷಕರು ತಮ್ಮ ದೀರ್ಘಾವಧಿ ಆರ್ಥಿಕ ವಿಚಾರಗಳನ್ನು ಸಂಪೂರ್ಣ ಕೈ ಬಿಡುತ್ತಾರೆ. ಮತ್ತು ಅದು ಅತಿ ದೊಡ್ಡ ತಪ್ಪಿಗೆ ಕಾರಣವಾಗುತ್ತದೆ.

ಯುವ ತಂದೆ-ತಾಯಿಗಳು ಮಾಡುವ ನಾಲ್ಕು ಅತಿ ಡೊಡ್ಡ ತಪ್ಪುಗಳು ನೋಡಿ.

ನಿವೃತ್ತಿಗಾಗಿ ಉಳಿತಾಯ ಮಾಡುವುದನ್ನು ನಿಲ್ಲಿಸಿ ಬಿಡ್ತಾರೆ: ಹೊಸದಾದ ಸದಸ್ಯನಾಗಿ ಬಂದ ಮಗು ಎಲ್ಲರ ಆಕರ್ಷಣೆಯ ಕೇಂದ್ರವಾಗಿರುತ್ತದೆ. ನಿಮ್ಮೆಲ್ಲ ಮುಖ್ಯ ನಿರ್ಧಾರ, ಅದರಲ್ಲೂ ಆರ್ಥಿಕ ವಿಚಾರ ಆ ಪುಟ್ಟ ಕಂದಮ್ಮನ ಸುತ್ತವೇ ಗಿರಗಿಟ್ಲೆ ಆಡುತ್ತದೆ. ಹಾಗಂತ ನಿಮ್ಮ ಭವಿಷ್ಯಕ್ಕೆ ಕೂಡ್ಡಿಡುವುದನ್ನು ಮರೆಯಬೇಡಿ.

ನಿಮ್ಮ ನಿವೃತ್ತ ಜೀವನಕ್ಕೆ ಇಂದು ಉಳಿತಾಯ ಮಾಡದಿದ್ದರೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತೀರಿ. ನಿಮ್ಮ ಮಗುವಿನ ಮೇಲೆ ಅವಲಂಬನೆ ಆಗಿ, ವೃದ್ಧಾಪ್ಯ ಕಳೆಯೋಣ ಅಂದುಕೊಳ್ಳುವುದು ಅಂಥ ಒಳ್ಳೆ ಯೋಜನೆ ಅಲ್ಲ.

4 financial mistakes new parents make

ಬೇರೇನೂ ಅಲ್ಲದಿದ್ದರೂ ಒಂದಷ್ಟು ಮೊತ್ತವನ್ನು ದೀರ್ಘಾವಧಿಗಾಗಿ ಮಕ್ಕಳ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡಿ. ಆ ನಂತರ ಅದರಿಂದ ಬರುವ ಮೊತ್ತವನ್ನು ಮತ್ತೆ ಹೂಡಿಕೆ ಮಾಡುತ್ತಾ ಹೋಗಿ.

ಉನ್ನತ ಶಿಕ್ಷಣಕ್ಕೆ ಬೇಕಾದ ಖರ್ಚಿಗೆ ಯೋಜನೆ: ನಿಮ್ಮ ಮಗು ಈಗ ಪುಟ್ಟದಾಗಿ, ಎಳೆಯದಾಗಿ ಕಾಣುತ್ತದೆ. ಅವನ ಅಥವಾ ಅವಳ ಉನ್ನತ ಶಿಕ್ಷಣ ಎಂಬುದು ದೂರದ ಕನಸಾಯಿತು ಅಂತ ಅನ್ನಿಸಬಹುದು. ಆದರೆ ಯಾವುದೇ ಪೋಷಕರನ್ನು ಕೇಳಿ ನೋಡಿ: ನಿಮಗೆ ಗೊತ್ತೇ ಆಗದಂತೆ ವರ್ಷಗಳು ಕಳೆದುಹೋಗಿರುತ್ತವೆ! ಆರಂಭದಲ್ಲೇ ಅಥವಾ ಶೀಘ್ರದಲ್ಲೇ ಯೋಜನೆ ಹಾಕೊಕೊಳ್ಳುವುದು ಯಾವತ್ತೂ ತಪ್ಪಲ್ಲ.

ದುಬಾರಿ ಆಗಬಹುದಾದ ಉನ್ನತ ಶಿಕ್ಷಣದ ವೆಚ್ಚದ ಬಗ್ಗೆ ಮನಸ್ಸಿನಲ್ಲಿ ಲೆಕ್ಕಾಚಾರ ಇರಲಿ.

ಮಗುವಿನ ಬಾಲ್ಯ ಸಂತಸದಿಂದ ಇರಬೇಕು ಎಂಬ ಎಣಿಕೆಯಿದ್ದರಷ್ಟೇ ಸಾಲದು, ಭವಿಷ್ಯ ಕೂಡ ಸಲೀಸಾಗಿ ಸಾಗುವಂತಿರಬೇಕು. ಇಂದು ಹೂಡಿಕೆ ಮಾಡುವುದರಿಂದ ಅದು ಭವಿಷ್ಯದಲ್ಲಿ ಬೆಳೆಯುತ್ತಾ ಸಾಗುತ್ತದೆ. ನೀವು ಬೇಗ ಆರಂಭಿಸಿದರೆ ಸಮಯವೇ ನಿಮಗೆ ಉತ್ತಮ ಗೆಳೆಯ ಆಗುತ್ತದೆ. ನಿಮ್ಮ ಹೂಡಿಕೆ ಮೇಲಿನ ಬಡ್ಡಿಯು ಮತ್ತಷ್ಟು ಬಡ್ಡಿ ಗಳಿಸುತ್ತದೆ. ಸಮಯ ಕಳೆದಂತೆ ಅದೇ ದೊಡ್ಡ ಇಡುಗಂಟಾಗುತ್ತದೆ.

4 financial mistakes new parents make

ತುರ್ತು ಅಗತ್ಯಗಳ ನಿರ್ಲಕ್ಷ್ಯ: ಸಂಕಷ್ಟುಗಳು ಯಾವಾಗಲೂ ಅನಿರೀಕ್ಷಿತವಾಗಿಯೇ ಎದುರಾಗುತ್ತವೆ. ಮಕ್ಕಳನ್ನು ನೋಡಿಕೊಳ್ಳುವಾಗಲೇ ನಿಮ್ಮ ಪಾಲಿಗೆ ರಿಸ್ಕ್ ಹೆಚ್ಚಿರುತ್ತದೆ. ನಿಮ್ಮ ಮಗುವಿನ ಸಲುವಾಗಿ ದುಬಾರಿ ಖರ್ಚಿನದ್ದೇನೋ ಮಾಡಬಹುದು, ಅದಕ್ಕೂ ಮುಂಚೆ ಸ್ವಲ್ಪ ಮೊತ್ತವನ್ನು ಎಫ್ ಡಿ (ನಿಶ್ಚಿತ ಠೇವಣಿ) ಮಾಡಿ.

ಇನ್ನು ಎರಡನೇ ಮಗು, ಅಮ್ಮನಿಗೆ ಆಫೀಸಿನಲ್ಲಿ ಸಂಬಳಸಹಿತ ಹೆರಿಗೆ ರಜಾ ಸಿಗದಿದ್ದಾಗಲೂ ಇರುವ ಹಣದಲ್ಲಿ ಸುರಕ್ಷತೆಯಂತಿರುತ್ತದೆ.

ಜೀವ ವಿಮೆಯಲ್ಲಿ ಕಡಿತ: ಹೊಸ ತಂದೆ-ತಾಯಿಗಳು ತಮ್ಮ ಜೀವ ವಿಮೆ ಹೂಡಿಕೆ ಬಗ್ಗೆಯೂ ಒಂದಿಷ್ಟು ನಿರ್ಲಕ್ಷ್ಯ ಮಾಡುತ್ತಾರೆ. ಮಗುವಿನ ಆಗಮನದಿಂದ ನಿಮ್ಮ ಖರ್ಚಿನಲ್ಲಿ ಹೆಚ್ಚಲ ಆಗುವುದು ಹೌದು. ಹಾಗಂತ ಜೀವ ವಿಮೆ ಕಂತು ತುಂಬುವುದರಲ್ಲಿ ಯಾವುದೇ ಕಡಿಮೆ ಮಾಡಬೇಡಿ. ನಿಮ್ಮ ಖರ್ಚಿನ ಕೈ ಇನ್ನೂ ಚಾಚಿದರೂ ಪರವಾಗಿಲ್ಲ, ಅಗತ್ಯ ಇರುವಷ್ಟು ಜೀವವಿಮೆಯಲ್ಲಿ ರಾಜೀ ಬೇಡ. ಒಂದು ವೇಳೆ, ನಿಮಗೇನಾದರೂ ಅನಾಹುತ ಸಂಭವಿಸಿದಲ್ಲಿ ನಿಮ್ಮ ಬಾಳಸಂಗಾತಿಗೆ ಮಗುವನ್ನು ಬೆಳೆಸಲು ಯಾವುದೇ ಸಮಸ್ಯೆ ಆಗಬಾರದು.

ನಿಮ್ಮ ಮಗುವಿನ ಭವಿಷ್ಯ ಭದ್ರಪಡಿಸಲು ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿ - Apply for Fixed Deposit

ನಿಶ್ಚಿತ ಠೇವಣಿಗಳು ಆರ್ಥಿಕ ಸುರಕ್ಷತೆ ಒದಗಿಸಬಲ್ಲವು
ಈಗ ತಾನೇ ಮಗು ಹುಟ್ಟಿದೆ, ಖರ್ಚುಗಳ ಸಲುವಾಗಿ ನಿಮ್ಮ ಬ್ಯಾಂಕ್ ಖಾತೆ ಬರಿದಾಗುತ್ತಿದೆ. ನಿಮ್ಮಿಂದ ಖರ್ಚು ನಿಭಾಯಿಸಲು ಸಾಧ್ಯ ಇರುವ ತನಕ ನಿಯಮಿತವಾಗಿ ಎಫ್ ಡಿಯಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಿ. ಬಜಾಜ್ ಫೈನಾನ್ಸ್ ನಲ್ಲಿ ಎಷ್ಟು ಕಡಿಮೆ ಮೊತ್ತಕ್ಕೆ ಅಂದರೆ 25 ಸಾವಿರ ರುಪಾಯಿಗಾದರೂ ಒಂದರಿಂದ ಐದು ವರ್ಷದ ಅವಧಿಗೆ ಎಫ್ ಡಿ ಮಾಡಿಸಬಹುದು. ಯುವ ಪೋಷಕರು ಈ ಮೂರು ಮಾರ್ಗದ ಮೂಲಕ ಅನುಕೂಲ ಪಡೆಯಬಹುದು.

ನಿಶ್ಚಿತ ಪ್ರತಿಫಲ: ಎಫ್ ಡಿಯಿಂದ ನಿಶ್ಚಿತ ಬಡ್ಡಿ ರೂಪದಲ್ಲಿ ಖಾತ್ರಿಯಾಗಿ ಪ್ರತಿಫಲ ಸಿಗುತ್ತದೆ. ಸದ್ಯಕ್ಕೆ ಬಜಾಜ್ ಫೈನಾನ್ಸ್ ನಿಂದ ಎಫ್ ಡಿ ಮೇಲಿನ ಬಡ್ಡಿ ದರ ಶೇ 7.85 ಇದೆ (ಹಿರಿಯ ನಾಗರಿಕರಿಗೆ ಶೇ 8.1ರ ತನಕ ಸಿಗುತ್ತದೆ). ಮಾರುಕಟ್ಟೆಯಲ್ಲಿ ಏರಿಕೆಯಾಗಲೀ ಅಥವಾ ಇಳಿಕೆಯಾಗಲೀ, ಯಾವುದೇ ಏರಿಳಿತವೂ ನಿಮಗೆ ಸಿಗಬೇಕಾದ ಪ್ರತಿಫಲದ ಮೇಲೆ ಪರಿಣಾಮ ಬೀರುವುದಿಲ್ಲ.

ನೀವು ತುಂಬ ಚೆನ್ನಾಗಿ ಯೋಜನೆ ಮಾಡಿಕೊಂಡರೆ ನಿಮ್ಮ ಮಗುವಿನ ಉನ್ನತಾಭ್ಯಾಸಕ್ಕೆ ಎಫ್ ಡಿ ಹೂಡಿಕೆ ಸಹಾಯದಿಂದಲೇ ನೆರವಾಗಬಹುದು. ಆಗ ಸಾಲ ಮಾಡುವ ಅಗತ್ಯ ಇರುವುದಿಲ್ಲ.

ನಗದು ಕೊರತೆಯ ತುರ್ತು ಸನ್ನಿವೇಶದಲ್ಲಿ ನೆರವಾಗುತ್ತದೆ: ನಿಮಗೆ ನಗದು ಕೊರತೆ ಎದುರಾದಾಗ ಎಫ್ ಡಿಗಳಿಂದ ನೆರವಾಗುತ್ತದೆ. ನಿಯಮಿತವಾಗಿ ಬಡ್ಡಿ ಬರುವಂಥದ್ದನ್ನೇ ಆಯ್ಕೆ ಮಾಡಿಕೊಳ್ಳಿ. ಹಣಕಾಸಿಗೆ ಕಷ್ಟ ಎದುರಾದಾಗ ಇದರಿಂದ ಅನುಕೂಲ ಆಗುತ್ತದೆ. ಅಷ್ಟೂ ಅಗತ್ಯ ಬಂದರೆ ಎಫ್ ಡಿ ಮೇಲೆ ಸಾಲ ತೆಗೆದುಕೊಳ್ಳಬಹುದು.

ನೀವು ಠೇವಣಿ ಇಟ್ಟ ಒಟ್ಟು ಮೊತ್ತದ ಶೇ 75ರಷ್ಟು ಹಣವನ್ನು ಸಾಲವಾಗಿ ಬಜಾಜ್ ಫೈನಾನ್ಸ್ ನಿಂದ ತೆಗೆದುಕೊಳ್ಳಬಹುದು. ಬಡ್ಡಿ ದರ ಕೂಡ ಅಂಥ ದುಬಾರಿ ಅಲ್ಲ- ಎಫ್ ಡಿ ಮೇಲಿನ ಬಡ್ಡಿ ದರಕ್ಕಿಂತ ಶೇ 2ರಷ್ಟು ಹೆಚ್ಚಿರುತ್ತದೆ.

ಪಾವತಿಯ ವಿಧಾನವೂ ಸರಳ: ನಿಮಗೆ ಬರಬೇಕಾದ ಬಡ್ಡಿ ಹಣವೂ ಸಂಗ್ರಹ ಆಗುವಂತೆ ಹಾಗೇ ಬಿಡಬಹುದು. ನಿಮ್ಮ ಜೀವನದ ಮುಂದಿನ ಗುರಿಗಾಗಿ ಉಳಿತಾಯ ಮಾಡಲು ಬಯಸಿದರೆ ಸಹಾಯ ಆಗುತ್ತದೆ. ಮಗುವಿನ ಉನ್ನತಾಭ್ಯಾಸದಂಥ ಖರ್ಚಿಗೆ ನೆರವಾಗುತ್ತದೆ. ಅಥವಾ ಆಗಿಂದಾಗ್ಗೆ ಬಡ್ಡಿ ಹಣವನ್ನು ಡ್ರಾ ಮಾಡಿಕೊಳ್ಳ ಬಹುದು.

ಹೊಸದಾಗಿ ತಂದೆ-ತಾಯಿ ಆದವರ ಎಲ್ಲ ಶ್ರಮ- ಶಕ್ತಿಯೂ ತಮ್ಮ ಮಗುವಿಗೆ ಅತ್ಯುತ್ತಮವಾದದ್ದನ್ನು ನೀಡುವುದರಲ್ಲೇ ಖರ್ಚಾಗುತ್ತದೆ. ಹಾಗಂತ ಭವಿಷ್ಯದ ಉಳಿತಾಯ ಬಗ್ಗೆ ನಿರ್ಲಕ್ಷ ಮಾಡುವಂತಿಲ್ಲ. ಆದ್ದರಿಂದ ನಿಮ್ಮ ಮಗುವಿಗೆ ಯಾವುದೇ ತೊಂದರೆ ಇಲ್ಲದ, ಸುರಕ್ಷಿತ ಭವಿಷ್ಯಕ್ಕಾಗಿ ಈಗಿನಿಂದಲೇ ಹೂಡಿಕೆ ಆರಂಭಿಸಿ.

ಫಾರ್ ಎನಿ ಕ್ವೆರಿ ಅಂಡ್ ಕನ್ಸರ್ನ್ ಫೀಲ್ ಫ್ರೀ ಟು ಕಾಂಟಾಕ್ಟ್ ಬಜಾಜ್ ಫೈನಾನ್ಸ್ ಕಸ್ಟಮರ್ ಕೇರ್.

ಇದನ್ನೂ ಓದಿ: Investment Options for Newly Married Couples

ಯಾವುದೇ ಪ್ರಶ್ನೆ ಮತ್ತು ಕಾಳಜಿಯಿದ್ದರೆ ಬಜಾಜ್ ಫೈನಾನ್ಸ್ ಕಸ್ಟಮರ್ ಕೇರ್ ಗೆ ಕರೆ ಮಾಡಲು ಮರೆಯಬೇಡಿ - Bajaj Finance Contact Details

Also Read: Investment Options for Newly Married Couples

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The tiny new member of your family is a bundle of joy. But a baby also brings along new set of responsibilities. Compromising on the baby’s well-being is not an option either. That means taking just as much care of your finances. But many new parents overlook the long-term financial issues. Here are the 4 biggest financial errors that young parents make.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more