38 ವಿಮಾನಗಳು, 300 ಕಾರುಗಳು, 52 ಬೋಟ್‌ಗಳು, 92 ಕೋಟಿ ರೂ. ಮೌಲ್ಯದ ವಜ್ರ ಹೊಂದಿರುವ ವ್ಯಕ್ತಿ ಯಾರು ಗೊತ್ತಾ?
ಬೆಂಗಳೂರು, ಆಗಸ್ಟ್ 3: ಶ್ರೀಮಂತಿಕೆ ಏನು ಎಂದು ಕೇಳಿದರೆ ನಿರರ್ಗಳವಾಗಿ ಈ ವ್ಯಕ್ತಿಯನ್ನು ನೀವು ತೋರಿಸಬಹುದು. ಅಷ್ಟರ ಮಟ್ಟಿಗೆ ಈ ವ್ಯಕ್ತಿ ಶ್ರೀಮಂತ. ಈತನ ಬಳಿ 38 ವಿಮಾನಗಳು, 300 ಕಾರುಗಳು, 52 ದೋಣಿಗಳು ಅಲ್ಲದೆ 92 ಕೋಟಿ ರೂಪಾಯಿ ಮೌಲ್ಯದ ವಜ್ರಗಳಿವೆ. ಅವರು ಯಾರೆಂದು ಇಲ್ಲಿ ತಿಳಿಯಿರಿ.
ಥೈಲ್ಯಾಂಡ್‌ನ ರಾಜ ಮಹಾ ವಜಿರಾಲಾಂಗ್‌ಕಾರ್ನ್, ಇವರನ್ನು ಥಾಯ್ಲೆಂಡ್‌ನ ಕಿಂಗ್ ರಾಮ X ಎಂದೂ ಕರೆಯುತ್ತಾರೆ. ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು.

ಕಿಂಗ್ ರಾಮ X ವಜ್ರಗಳು ಮತ್ತು ರತ್ನಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದಾರೆ. ಅವರು ಸಾವಿರಾರು ಎಕರೆ ಭೂಮಿ, ಕಾರುಗಳು ಮತ್ತು ಹಲವಾರು ಇತರ ಐಷಾರಾಮಿ ವಸ್ತುಗಳನ್ನು ಹೊಂದಿದ್ದಾರೆ. ಫೈನಾನ್ಶಿಯಲ್ ಟೈಮ್ಸ್ ಪ್ರಕಾರ, ಥೈಲ್ಯಾಂಡ್ ರಾಜಮನೆತನದ ಸಂಪತ್ತು USD 40 ಬಿಲಿಯನ್ ಅಂದರೆ 3.2 ಲಕ್ಷ ಕೋಟಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.
ಕಿಂಗ್ ಮಹಾ ವಜಿರಾಲಾಂಗ್‌ಕಾರ್ನ್ ಅವರ ಬೃಹತ್ ಆಸ್ತಿ ಥೈಲ್ಯಾಂಡ್‌ನಾದ್ಯಂತ ಹರಡಿದೆ. ಕಿಂಗ್ ರಾಮ X ಅವರು ಥಾಯ್ಲೆಂಡ್‌ನಲ್ಲಿ 6,560 ಹೆಕ್ಟೇರ್ (16,210 ಎಕರೆ) ಭೂಮಿಯನ್ನು ಹೊಂದಿದ್ದಾರೆ. ರಾಜಧಾನಿ ಬ್ಯಾಂಕಾಕ್‌ನಲ್ಲಿ 17,000 ಒಪ್ಪಂದಗಳನ್ನು ಒಳಗೊಂಡಂತೆ ದೇಶದಾದ್ಯಂತ 40,000 ಬಾಡಿಗೆ ಒಪ್ಪಂದಗಳನ್ನು ಹೊಂದಿದ್ದಾರೆ.
ತಮ್ಮ ಮಾಲೀಕತ್ವದಲ್ಲಿ ಮಾಲ್, ಹೋಟೆಲ್ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಿವೆ. ವರದಿಗಳ ಪ್ರಕಾರ, ರಾಜ ಮಹಾ ವಜಿರಾಲಾಂಗ್‌ಕಾರ್ನ್ ಅವರು ಥೈಲ್ಯಾಂಡ್‌ನ ಎರಡನೇ ಅತಿದೊಡ್ಡ ಬ್ಯಾಂಕ್ ಸಿಯಾಮ್ ಕಮರ್ಷಿಯಲ್ ಬ್ಯಾಂಕ್‌ನಲ್ಲಿ 23 ಪ್ರತಿಶತ ಪಾಲನ್ನು ಹೊಂದಿದ್ದಾರೆ ಮತ್ತು ದೇಶದ ಅತಿದೊಡ್ಡ ಕೈಗಾರಿಕಾ ಸಂಘಟಿತ ಸಿಯಾಮ್ ಸಿಮೆಂಟ್ ಗ್ರೂಪ್‌ನಲ್ಲಿ 33.3 ಶೇಕಡಾ ಪಾಲನ್ನು ಹೊಂದಿದ್ದಾರೆ.
ಥೈಲ್ಯಾಂಡ್ ರಾಜನ ಕಿರೀಟದಲ್ಲಿರುವ ರತ್ನಗಳಲ್ಲಿ ಒಂದಾದ 545.67-ಕ್ಯಾರೆಟ್ ಕಂದು ಬಣ್ಣದ ಗೋಲ್ಡನ್ ಜುಬಿಲಿ ಡೈಮಂಡ್, ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ದುಬಾರಿ ವಜ್ರ ಎಂದು ಹೇಳಲಾಗುತ್ತದೆ. ವಜ್ರ ಪ್ರಾಧಿಕಾರ ಇದರ ಮೌಲ್ಯ 98 ಕೋಟಿ ರೂಪಾಯಿ ಆಗಿದೆ.
ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಥಾಯ್ ಕಿಂಗ್ ಬಳಿ 21 ಹೆಲಿಕಾಪ್ಟರ್‌ಗಳು ಸೇರಿದಂತೆ 38 ವಿಮಾನಗಳನ್ನು ಹೊಂದಿದೆ. ಇದರಲ್ಲಿ ಬೋಯಿಂಗ್, ಏರ್‌ಬಸ್ ವಿಮಾನ ಮತ್ತು ಸುಖೋಯ್ ಸೂಪರ್‌ಜೆಟ್ ಸೇರಿವೆ. ಈ ವಿಮಾನಗಳ ನಿರ್ವಹಣೆಗೆ ಅವರು ವಾರ್ಷಿಕ 524 ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಕಿಂಗ್ ರಾಮ ಎಕ್ಸ್ ಅವರು ಲಿಮೋಸಿನ್, ಮರ್ಸಿಡಿಸ್ ಬೆಂಜ್ ಸೇರಿದಂತೆ 300 ಕ್ಕೂ ಹೆಚ್ಚು ದುಬಾರಿ ಕಾರುಗಳನ್ನು ಒಳಗೊಂಡಿರುವ ದೊಡ್ಡ ಗ್ಯಾರೇಜ್‌ನ್ನು ಹೊಂದಿದ್ದಾರೆ. ಇದಲ್ಲದೆ, ಅವರು ರಾಯಲ್ ಬೋಟ್ ಜೊತೆಗೆ 52 ದೋಣಿಗಳ ಫ್ಲೀಟ್ ಅನ್ನು ಹೊಂದಿದ್ದಾರೆ. ಎಲ್ಲಾ ದೋಣಿಗಳ ಮೇಲೆ ಚಿನ್ನದ ಕೆತ್ತನೆಗಳಿವೆ.
ಥೈಲ್ಯಾಂಡ್ ರಾಜನ ಅರಮನೆಯು 23,51,000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. ಇದನ್ನು 1782 ರಲ್ಲಿ ನಿರ್ಮಿಸಲಾಯಿತು. ಆದರೆ, ಕಿಂಗ್ ರಾಮ X ರಾಜಮನೆತನದಲ್ಲಿ ವಾಸಿಸುವುದಿಲ್ಲ. ಈಗ ಅರಮನೆಯಲ್ಲಿ ಅನೇಕ ಸರ್ಕಾರಿ ಕಚೇರಿಗಳು ಮತ್ತು ವಸ್ತುಸಂಗ್ರಹಾಲಯಗಳಿವೆ.












Click it and Unblock the Notifications