3,00,000 ಆಗಲಿದೆ ಚಿನ್ನದ ಬೆಲೆ, ಚಿನ್ನ ಪ್ರಿಯರಿಂದ ಬಂಗಾರ ತುಂಬಾ ದೂರ!

Gold Price 2025: ದೇಶದಲ್ಲಿ ಹಾಗೂ ವಿಶ್ವದಲ್ಲಿ ಚಿನ್ನದ ಬೆಲೆಯು ನಿರೀಕ್ಷೆಗೂ ಮೀರಿ ಹೆಚ್ಚಾಗುತ್ತಿದೆ. ಈಗಾಗಲೇ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ಬರೋಬ್ಬರಿ 1,00,000 ಒಂದು ಲಕ್ಷ ರೂಪಾಯಿ ಆಗಿದೆ. ಆದರೆ, ಈ ಬೆಲೆಯು ಏನೇನೂ ಅಲ್ಲ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವಾಗಲಿದೆ ಎಂದು ವರದಿಯೊಂದು ಹೇಳಿದೆ. ವಿಶ್ವದಲ್ಲಿ ಆರ್ಥಿಕ ಅಸ್ಥಿರತೆ ಹೆಚ್ಚಾಗುತ್ತಿದ್ದು ಚಿನ್ನದ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈಗಾಗಲೇ ಏಪ್ರಿಲ್‌ 22ರಂದು 24 ಕ್ಯಾರೆಟ್‌ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 1,01,350 ರೂಪಾಯಿ ಆಗಿದೆ. ಆದರೆ ಇದು ಇನ್ನೂ ಆರಂಭವಷ್ಟೇ ಚಿನ್ನದ ಬೆಲೆ ನಿರಂರತವಾಗಿ ಹಾಗೂ ಇನ್ನಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ಚಿನ್ನದ ಬೆಲೆಯು ಕೆಲವೇ ತಿಂಗಳುಗಲ್ಲಿ ಒಂದು ಲಕ್ಷ ರೂಪಾಯಿಯ ಗಡಿ ದಾಟಿದೆ. ಚಿನ್ನದ ಬೆಲೆ ಕೆಲವೇ ವರ್ಷಗಳ ಹಿಂದೆ 50,000 ಸಾವಿರ ರೂಪಾಯಿ ಆಸುಪಾಸಿನಲ್ಲಿತ್ತು. 5 ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ಗಡಿ ಮುಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನ ಪ್ರಿಯರು ಯಾರೂ ನಿರೀಕ್ಷೆ ಮಾಡದೆ ಇರುವಷ್ಟು ದೊಡ್ಡ ಮಟ್ಟಕ್ಕೆ ಚಿನ್ನದ ಬೆಲೆ ಜಿಗಿಯಲಿದೆ ಎಂದು ಹೇಳಲಾಗಿದೆ. ಚಿನ್ನದ ಬೆಲೆಯು 1 ಲಕ್ಷ ರೂಪಾಯಿಗೆ ಹೋಗಲಿದೆ ಎಂದು ಹೇಳಿದ್ದರೂ ಇದೀಗ ಬಂದು ತಲುಪಿದೆ. ಇನ್ನು ಇದೇ ತಿಂಗಳಾಂತ್ಯಕ್ಕೆ ಅಕ್ಷಯ ತೃತೀಯ ಸಹ ಇದೆ. ಆದರೆ, ಈ ರೀತಿ ಇರುವಾಗಲೇ ಚಿನ್ನದ ಬೆಲೆ ಹೆಚ್ಚಳವಾಗುತ್ತಿದ್ದು. ಅಕ್ಷಯ ತೃತೀಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

3 00 000 Gold Price Hit Gold Far from Gold lovers

ಸಾಮಾನ್ಯವಾಗಿ ಜನ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿ ಮಾಡುತ್ತಾರೆ. ಅಂದು ಚಿನ್ನವನ್ನು ಖರೀದಿ ಮಾಡುವುದು ಅದೃಷ್ಟ ಎಂದು ಜನ ನಂಬಿದ್ದಾರೆ. ಆದರೆ, ಚಿನ್ನದ ಬೆಲೆ ಈ ರೀತಿ ಏಕಾಏಕಿ ಹೆಚ್ಚಳವಾಗಿರುವುದು ಚಿನ್ನದ ಪ್ರಿಯರನ್ನು ಇನ್ನಿಲ್ಲದಂತೆ ಸಂಕಷ್ಟಕ್ಕೆ ದೂಡಿದೆ.

ಚಿನ್ನದ ಬೆಲೆಯು ಈಗ ಒಂದು ಲಕ್ಷ ಇದೆ. ಮುಂದಿನ ದಿನಗಳಲ್ಲಿ ಬರೋಬ್ಬರಿ 3 ಲಕ್ಷ ರೂಪಾಯಿ ಆಗುವುದು ಫಿಕ್ಸ್‌ ಅಂತಲೇ ಹೇಳಲಾಗುತ್ತಿದೆ. 2030ರ ವೇಳೆಗೆ ಚಿನ್ನದ ಬೆಲೆಯು ₹3 ಲಕ್ಷ ರೂಪಾಯಿ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಈಗಾಗಲೇ ಚಿನ್ನದ ಬೆಲೆಯು 1 ಲಕ್ಷ ರೂಪಾಯಿ ಆಗಿದೆ ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು ದುಬಾರಿಯಾದರೂ ಆಗಬಹುದು ಎಂದು ಹೇಳಲಾಗಿದೆ.

ಚಿನ್ನದ ಬಡವರಿಂದ ದೂರ: ಚಿನ್ನವು ಬಡವರಿಂದ ದೂರವಾಗುತ್ತಿದೆ. ಚಿನ್ನದ ಬೆಲೆ ದಿನೇ ದಿನೇ ಹೆಚ್ಚಳವಾಗುತ್ತಿರುವುದರಿಂದ ಚಿನ್ನ ಖರೀದಿ ಮಾಡಬೇಕು ಎನ್ನುವ ಬಡ ಹಾಗೂ ಮಧ್ಯಮ ವರ್ಗದವರ ಕನಸಿಗೆ ಕೊಳ್ಳಿ ಇರಿಸಿದಂತೆ ಆಗಿದೆ. ಅಮೆರಿಕದ ಟ್ಯಾಕ್ಸ್‌ ರಿಟರ್ನ್‌ ಪಾಲಿಸಿ ಸೇರಿದಂತೆ ವಿವಿಧ ಕಾರಣಗಳಿಂದ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇನ್ನು ಅಮೆರಿಕ ಹಾಗೂ ಚೀನಾದ ನಡುವೆ ಟ್ಯಾಕ್ಸ್‌ ವಾರ್ ತೀವ್ರಗೊಂಡಿದೆ. ಷೇರುಮಾರುಕಟ್ಟೆ ಅಲ್ಲೋಲ ಕಲ್ಲೋಲ ಆಗುತ್ತಿರುವುದು ಹಾಗೂ ಅನಿಶ್ಚಿತತೆ ಮುಂದುವರಿಯುತ್ತಿದೆ ಇದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಅಲ್ಲದೇ ಚಿನ್ನದ ಬೇಡಿಕೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರಿಂದಲೂ ಚಿನ್ನದ ಬೆಲೆ ದುಬಾರಿಯಾಗುತ್ತಿದೆ.

2030ರ ವೇಳೆಗೆ ಚಿನ್ನದ ಬೆಲೆಯು 3 ಲಕ್ಷಕ್ಕೆ ಹೋಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ 2026 -2027ರ ಒಳಗೇ 3 ಲಕ್ಷ ರೂಪಾಯಿ ಮುಟ್ಟಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ. ಇದು ಚಿನ್ನ ಪ್ರಿಯರನ್ನು ಆತಂಕಕ್ಕೆ ದೂಡಿದೆ.

ಇಂದಿನ ಚಿನ್ನದ ಬೆಲೆ: ಏಪ್ರಿಲ್‌ 22ರ ಚಿನ್ನದ ಬೆಲೆ 24 ಕ್ಯಾರೆಟ್‌ 1 ಗ್ರಾಂಗೆ 10,135 ರೂಪಾಯಿ ಆಗಿದೆ. 10ಗ್ರಾಂಗೆ 1,01,350 ರೂಪಾಯಿ ಆಗಿದೆ. 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಭರ್ಜರಿ ಏರಿಕೆ ಕಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+