ಬೀದರ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಬೀದರ್‌ ಜನರಿಗೆ ಸಿಹಿಸುದ್ದಿ ಕೊಟ್ಟ ರೈಲ್ವೆ ಇಲಾಖೆ

|
Google Oneindia Kannada News

ಬೀದರ್, ಅಕ್ಟೋಬರ್ 27; ಬೀದರ್ ಜನತೆಗೆ ರೈಲ್ವೆ ಇಲಾಖೆ ದೀಪಾವಳಿ ಹಬ್ಬದ ಕೊಡುಗೆಯನ್ನು ನೀಡಿದೆ. ಹುಮನಾಬಾದ್ ಮಾರ್ಗವಾಗಿ ತಿರುಪತಿಗೆ ವಿಶೇಷ ರೈಲು ಸಂಚಾರವನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ್ ಖೂಬಾ ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನ್ ವೈಷ್ಣವ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ

ರೈಲ್ವೆ ಇಲಾಖೆ ಬೀದರ್-ತಿರುಪತಿ ನಡುವೆ ಪ್ರಾಯೋಗಿಕವಾಗಿ ಅಕ್ಟೋಬರ್ 2ರಿಂದ ರೈಲು ಸಂಚಾರ ಆರಂಭಿಸಿತ್ತು. ಈಗ ಅಕ್ಟೋಬರ್ 30ರಿಂದ ಮತ್ತೊಂದು ರೈಲು ಸೇವೆಯನ್ನು ಆರಂಭಿಸಲಾಗುತ್ತಿದೆ.

ಬೀದರ್- ನಾಂದೇಡ್ ರೈಲ್ವೆ ಯೋಜನೆಗೆ ಸಿಎಂ ಬೊಮ್ಮಾಯಿ ಭರವಸೆ ಬೀದರ್- ನಾಂದೇಡ್ ರೈಲ್ವೆ ಯೋಜನೆಗೆ ಸಿಎಂ ಬೊಮ್ಮಾಯಿ ಭರವಸೆ

Bidar Tirupati Special Train Via Humnabad Schedule

ವೇಳಾಪಟ್ಟಿ; ಈ ವಿಶೇಷ ರೈಲು ಅಕ್ಟೋಬರ್ 30, ನವೆಂಬರ್ 6, 13, 20, 27 ಮತ್ತು ಡಿಸೆಂಬರ್ 4 ಸೇರಿದಂತೆ ಒಟ್ಟು ಆರು ಭಾನುವಾರಗಳಂದು ಸಂಚಾರ ನಡೆಸಲಿದೆ. ರೈಲು ಭಾಲ್ಕಿಗೆ ಸಂಜೆ 7.05, ಬೀದರ್‌ಗೆ 7.40 ಮತ್ತು ಹುಮನಾಬಾದ್‌ಗೆ ರಾತ್ರಿ 8.50ಕ್ಕೆ ತಲುಪಲಿದೆ. ತಾಜಸುಲ್ತಾನಪುರ, ಕಲಬುರಗಿ, ವಾಡಿ ಮೂಲಕ ಮರುದಿನ ಬೆಳಗ್ಗೆ 9 ಗಂಟೆಗೆ ತಿರುಪತಿಗೆ ತಲುಪಲಿದೆ.

ಚಿತ್ರದುರ್ಗ-ಆಲಮಟ್ಟಿ ಹೊಸ ರೈಲು ಮಾರ್ಗ ಬಜೆಟ್‌ನಲ್ಲಿ ಸೇರಿಸಲು ಮನವಿ ಚಿತ್ರದುರ್ಗ-ಆಲಮಟ್ಟಿ ಹೊಸ ರೈಲು ಮಾರ್ಗ ಬಜೆಟ್‌ನಲ್ಲಿ ಸೇರಿಸಲು ಮನವಿ

ನವೆಂಬರ್ 1, 8, 15, 22, 29 ಸೇರಿ ಒಟ್ಟು 5 ಮಂಗಳವಾರದಂದು ತಿರುಪತಿಯಿಂದ ಸಂಜೆ 6.35ಕ್ಕೆ ಹೊರಟು ಮರುದಿನ ಬುಧವಾರ ಬೆಳಗ್ಗೆ 6.10ಕ್ಕೆ ಹುಮನಾಬಾದ್‌ಗೆ ತಲುಪಲಿದೆ. 7.10ಕ್ಕೆ ಬೀದರ್ ಹಾಗೂ 8.04ಕ್ಕೆ ಭಾಲ್ಕಿಗೆ ಬರಲಿದೆ.

ಈ ರೈಲಿನ ಮೂಲಕ ಸೋಮುವಾರ ಬೆಳಗ್ಗೆ ತಿರುಪತಿಗೆ ತೆರಳುವ ಭಕ್ತರಿಗೆ ಸುಮಾರು 30 ಗಂಟೆಗಳ ಕಾಲ ಸಮಯ ಸಿಗಲಿದೆ. ಭಕ್ತರು ದರ್ಶನ ಮುಗಿಸಿಕೊಂಡು ಮಂಗಳವಾರ ಸಾಯಂಕಾಲ ಅದೇ ರೈಲಿನ ಮೂಲಕ ಬೀದರ್‌ಗೆ ಮರಳಬಹುದಾಗಿದೆ.

ರೈಲ್ವೆ ಇಲಾಖೆ ಈಗಾಗಲೇ ಅಕ್ಟೋಬರ್ 2ರಿಂದ ಬೀದರ್-ತಿರುಪತಿ ನಡುವೆ ಪ್ರಾಯೋಗಿಕವಾಗಿ ರೈಲು ಸಂಚಾರ ಆರಂಭಿಸಿದೆ. ಅಕ್ಟೋಬರ್ 31ರ ತನಕ ಈ ರೈಲು ಸಂಚಾರ ನಡೆಸಲಿದೆ.

English summary
Indian railways will run special train between Bidar and Tirupati via Humnabad. Here are the train schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X