ಸರಳತೆ ಮೆರೆದ ಬೀದರ್ ಲೋಕಸಭಾ ಸಂಸದ ಭಗವಂತ ಖೂಬಾ

ಬೀದರ್, ಫೆಬ್ರವರಿ 14: ಕೆಲವು ರಾಜಕಾರಣಿಗಳು ಹಾಗೂ ಅವರ ಮಕ್ಕಳು ಇನ್ನಿಲ್ಲದ ದೌಲತ್ತಿಗೆ ಸುದ್ದಿಯಾಗುತ್ತಾರೆ. ಇನ್ನೂ ಕೆಲವು ರಾಜಕಾರಣಿಗಳು ತಮ್ಮ ಸರಳ ಜೀವನ ಶೈಲಿಯಿಂದ ಜನಸಾಮಾನ್ಯರ ಮನ ಗೆಲ್ಲುತ್ತಾರೆ.

ಇದೇ ರೀತಿ ಬೀದರ್ ಲೋಕಸಭಾ ಕ್ಷೇತ್ರದ ಸಂಸದ ಭಗವಂತ ಖೂಬಾ ಅವರ ಸರಳ ಜೀವನಶೈಲಿ ನೆಟ್ಟಿಗರಿಗೆ ಇಷ್ಟವಾಗಿದೆ. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಇನ್ಸೆಸ್ಟ್ ಕರ್ನಾಟಕ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂಸದ ಭಗವಂತ ಖೂಬಾ ಅವರು ವಿಜಯಪುರ ಜಿಲ್ಲೆಯ ಸಿಂದಗಿ ಬಳಿಯ ಹೊಲವೊಂದರಲ್ಲಿ ರೈತರ ಜೊತೆ ಊಟ ಮಾಡಿ ಅವರ ಜೊತೆ ಬೆರತಿದ್ದಾರೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಫೋಟೊವೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. ಇದಕ್ಕೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ಸೂಚಿಸಿದ್ದಾರೆ. ಭಗವಂತ ಖೂಬಾ ಅವರು ಬಿಜೆಪಿ ಸಂಸದರಾಗಿದ್ದು, ಕ್ಷೇತ್ರದಲ್ಲಿ ಸರಳತೆಯಿಂದ ಹೆಸರು ಗಳಿಸಿದ್ದಾರೆ. ಇನ್ಸೆಸ್ಟ್ ಕರ್ನಾಟಕ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶುಕ್ರವಾರ ಉದ್ಘಾಟಿಸಿದರು.

Bidar MP Bhagwanth Khuba Simplicity Goes Viral

ಉತ್ತರ ಕರ್ನಾಟಕಕ್ಕೆ ಬಂಡವಾಳ ತರಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಡೆನಿಸನ್ ಹೋಟೆಲ್‌ನಲ್ಲಿ ಇನ್ಸೆಸ್ಟ್‌ ಕರ್ನಾಟಕ ಕಾರ್ಯಕ್ರಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+