ಬೀದರ್‌ನಲ್ಲಿ ಒಂದೇ ಕುಟುಂಬದ 16 ಮಂದಿಗೆ ಕೊರೊನಾ ಪಾಸಿಟಿವ್
ಬೀದರ್, ಜೂನ್ 20: ಇಂದು ಗಡಿ ಜಿಲ್ಲೆ ಬೀದರ್‌ನಲ್ಲಿ ಕೊರೊನಾ ವೈರಸ್ ಸ್ಫೋಟವಾಗಿದೆ. ಒಂದೇ ದಿನ ಬರೋಬ್ಬರಿ 73 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 484ಕ್ಕೆ ಏರಿಕೆಯಾಗಿದೆ.
Recommended Video
ಟಿ20 ವಿಶ್ವಕಪ್ ನಡೆಯೋ ಬಗ್ಗೆ ಸುಳಿವು ನೀಡಿದ ಆಸ್ಟ್ರೇಲಿಯಾ | Oneindia Kannada
ಒಟ್ಟು 484 ಕೊರೊನಾ ಪ್ರಕರಣಗಳಲ್ಲಿ 266 ಜನರು ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆ 13ಕ್ಕೆ ಏರಿದೆ. ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. 205 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಬೀದರ್‌ನ ಬಹುತೇಕ ಎಲ್ಲಾ ಕೇಸ್ ಗಳಿಗೆ ಮಹಾರಾಷ್ಟ್ರ ನಂಟು ಇದೆ. ಈ ನಡುವೆ ಬೀದರ್ ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಒಂದೇ ಕುಟುಂಬದ 16 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಮನೆಯ ಯಜಮಾನ, ಆತನ ಪತ್ನಿ, ಯಜಮಾನನ ತಮ್ಮ ಮತ್ತು ಆತನ ಪತ್ನಿ, ಮಕ್ಕಳು ಮೊಮ್ಮಕ್ಕಳಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಈ ಹದಿನಾರು ಮಂದಿಯನ್ನೂ ಬಿಮ್ಸ್ ಕೊರೊನಾ ವಾರ್ಡ್‌ಗೆ ದಾಖಲು ಮಾಡಲಾಗಿದೆ.












Click it and Unblock the Notifications