ಪುರಿ ಜಗನ್ನಾಥ ರಥಯಾತ್ರೆ:ಮಾರ್ಗಸೂಚಿ ಬಿಡುಗಡೆ
ಪುರಿ, ಜೂನ್ 21: ಪುರಿ ಜಗನ್ನಾಥ ರಥಯಾತ್ರೆ ಜುಲೈ 12ರಂದು ಆರಂಭಗೊಳ್ಳಲಿದ್ದು, ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಎಸ್‌ಜೆಟಿಎ ನಿಯೋಗವು ನಡೆಸಿದ ಸದಸ್ಯರೊಂದಿಗಿನ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದು, ಸೇವಕರು ಸೇರಿದಂತೆ ಆಚರಣೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು ಅಥವಾ ಕೊರೊನಾ ಲಸಿಕೆಯ ಎರಡು ಡೋಸ್ ಪಡೆದಿರಬೇಕು ಎಂದು ಹೇಳಲಾಗಿದೆ.
ಒಂದೊಮ್ಮೆ ಭಕ್ತರಿಗೆ ಅನುಮತಿ ನೀಡಿದರೆ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಕ್ತರಿಲ್ಲದೆ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಆಚರಣೆಯಲ್ಲಿ ಸೇವಕರು ಮತ್ತು ದೇವಾಲಯದ ಅಧಿಕಾರಿಗಳು ಮಾತ್ರ ಭಾಗವಹಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
''ಭಗವಾನ್ ಜಗನ್ನಾಥ, ಭಗವಾನ್ ಬಾಲಚಂದ್ರ, ದೇವಿ ಸುಭದ್ರಾ ದೇವತೆಗಳ ಸ್ನಾನ ಯಾತ್ರೆಯ ಸಂದರ್ಭದಲ್ಲಿ 144 ಸೆಕ್ಷನ್ ಜಾರಿಮಾಡಲಾಗುತ್ತದೆ. ಮತ್ತು ದೇವಾಲಯದ ಮುಂಭಾಗದಲ್ಲಿರುವ ಗ್ರ್ಯಾಂಡ್ ರಸ್ತೆಯಲ್ಲಿ ಸಭೆ ಸೇರಲು ಯಾರಿಗೂ ಅವಕಾಶವಿರುವುದಿಲ್ಲ'' ಎಂದು ಪುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಮರ್ಥ್ ವರ್ಮಾ ಹೇಳಿದ್ದಾರೆ.
ಪುರಿ ಜಗನ್ನಾಥ ರಥಯಾತ್ರ ಕಾರ್ಯಕ್ರಮದ ವಿವರ
-ಜೂನ್ 24 ರಂದು ಸ್ನಾನ ಪೂರ್ಣಿಮೆ, ಬೆಳಗಿನ ಜಾವ 1 ಗಂಟೆಯಿಂದ ಯಾತ್ರೆ ಆರಂಭಗೊಳ್ಳಲಿದ್ದು ಸಂಜೆ 4 ಗಂಟೆಗೆ ಮುಕ್ತಾಯಗೊಳ್ಳಲಿದೆ.
-ಚೇರಾ ಪಹನ್ರಾ ಬೆಳಗ್ಗೆ 10.30ಕ್ಕೆ ನಡೆಯಲಿದೆ.
-ದೇವತೆಗಳಿಗೆ ಗಜಾನನ ವಸ್ತ್ರಾಲಂಕಾರ- ಬೆಳಗ್ಗೆ 11 ರಿಂದ 12ರ ನಡುವೆ
-ತ್ರಿಮೂರ್ತಿಗಳಾದ ಭಗವಾನ್ ಬಾಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ್ ಜಗನ್ನಾಥರನ್ನು ಸ್ನಾನ ಮಾಡಿಸಿದ ನಂತರ ಅವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ನಂಬಿದ್ದರಿಂದ ಶುಶ್ರೂಷೆ ಕೋಣೆಗೆ ಕರೆದೊಯ್ಯುವ ಕಾರ್ಯಕ್ರಮ.
-ಸ್ನಾನಗೃಹದಿಂದ ದೇವಾಲಯದ ಒಳಗಿನ ಶುಶ್ರೂಷೆ ಕೋಣೆಗೆ ದೇವತೆಗಳು ಮರಳುವ ಮೆರವಣಿಗೆ ಸಂಜೆ 5 ರಿಂದ 8ರವರೆಗೆ ನಡೆಯಲಿದೆ. ಆಚರಣೆಗಳು ಆ ದಿನದಿಂದ ಪ್ರಾರಂಭವಾಗಿ 15 ದಿನಗಳ ಕಾಲ ನಡೆಯಲಿದೆ.
-ರಥಯಾತ್ರಯು ಜುಲೈ 12 ರಂದು ಜರುಗಲಿದೆ
-ಜುಲೈ 12 ರಂದು ರಥಯಾತ್ರೆ ಬೆಳಗ್ಗೆ 8.30ಕ್ಕೆ ಆರಂಭವಾಗಲಿದ್ದು ಸಂಜೆ 4ಕ್ಕೆ ಮುಕ್ತಾಯಗೊಳ್ಳಲಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications