ಕೋಣಕ್ಕೆ ಡಿಕ್ಕಿಯಾಗಿ ನದಿಗೆ ಬಿದ್ದ ಬಸ್: ಕನಿಷ್ಠ 12 ಮಂದಿ ಸಾವು
ಕಟಕ್, ನವೆಂಬರ್ 20: ಸುಮಾರು 30 ಪ್ರಯಾಣಿಕರಿದ್ದ ಬಸ್ ನದಿಗೆ ಬಿದ್ದು ಕನಿಷ್ಠ 12 ಮಂದಿ ಮೃತಪಟ್ಟರುವ ಘಟನೆ ಒಡಿಶಾದ ಕಟಕ್ ಸಮೀಪದ ಜಗಟ್ಪುರ್ ದಲ್ಲಿ ಮಂಗಖವಾರ ಸಂಜೆ ವರದಿಯಾಗಿದೆ.
ಬಸ್ ಚಾಲಕನ ನಿಯಂತ್ರಣ ತಪ್ಪಿ ಮಹಾನದಿ ನದಿಗೆ ಬಿದ್ದಿದೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಅನುಗುಲ್‌ದಿಂದ ಕಟಕ್‌ಗೆ ಬರುತ್ತಿದ್ದ ಬಸ್ ಮಹಾನದಿ ಸೇತುವೆ ಮೇಲೆ ಹಠಾತ್ತಾಗಿ ಎದುರಿಗೆ ಬಂದ ಕೋಣಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ.

ಬಸ್ 30 ಅಡಿ ಕೆಳಗೆ ಹರಿಯುತ್ತಿದ್ದ ನದಿಯೊಳಗೆ ಬಿದ್ದಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಒಡಿಆರ್ಎಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಕತ್ತಲಾದ ಕಾರಣ ನದಿಯಲ್ಲಿ ಬಿದ್ದಿರುವವರ ಪತ್ತೆ ಹಾಗೂ ರಕ್ಷಣೆಗೆ ತೀವ್ರ ತೊಡಕಾಗಿದೆ. ಎಷ್ಟು ಮಂದಿ ಸಾವು ನೋವಿಗೆ ತುತ್ತಾಗಿದ್ದಾರೆ ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಆಕಾಶವಾಣಿಯ ವರದಿ ತಿಳಿಸಿದೆ.
I am extremely saddened to know about seven deaths...RIP...most of the other injured have been shifted to the hospital and are receiving treatment....wish them a speedy recovery....
— Dr. Rajendra Sharma. (@DrRajendraShar2) 20 November 2018
ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಒಡಿಶಾ ಡಿಜಿಪಿ ಆರ್‌ಪಿ ಶರ್ಮಾ ತಿಳಿಸಿದ್ದಾರೆ. ಹೆಚ್ಚಿನ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.











Click it and Unblock the Notifications