ಆಸ್ತಿ ವಿವರ : 25 ಸಾವಿರ ರು ನಗದು ಹೊಂದಿರುವ ಒಡಿಶಾ ಮುಖ್ಯಮಂತ್ರಿ
ಭುವನೇಶ್ವರ್, ಮಾರ್ಚ್ 22: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಐದನೇ ಬಾರಿಗೆ ಮುಖ್ಯಮಂತ್ರಿಯಾಗಲು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಲೋಕಸಭೆ ಚುನಾವಣೆ ಜೊತೆಗೆ ಒಡಿಶಾ ವಿಧಾನಸಭೆಗೂ ಚುನಾವಣೆ ನಡೆಯಲಿದೆ.
ಪಟ್ನಾಯಕ್ ಅವರು ಹಿಂಜಿಲಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಬಯಸಿ ನಾಮಪತ್ರದೊಂದಿಗೆ ಸಲ್ಲಿಸಿದರು. ಅಫಿಡವಿಟ್ ನ ಅಂಕಿ ಅಂಶದಂತೆ ಅವರ ಬಳಿ 63.87 ಕೋಟಿ ರು ಆಸ್ತಿ ಇದ್ದು,25 ಸಾವಿರ ರು ನಗದು ಹೊಂದಿದ್ದಾರೆ.
ನವೀನ್ ಪಟ್ನಾಯಕ್ ಬಳಿ 1980ರ ಮಾಡೆಲ್ ಅಂಬಾಸಡರ್ ಕಾರಿದೆ. ಇದರ ಮೌಲ್ಯ 8905 ರು ಎಂದು ಅಂದಾಜಿಸಲಾಗಿದೆ. ಚರಾಸ್ತಿ ಮೌಲ್ಯ 23,26,554.52 ರು, ಪಿತ್ರಾರ್ಜಿತ ಆಸ್ತಿ 63,64,15,261 ರು ಮೌಲ್ಯ ಹೊಂದಿದೆ.

ಆದಾಯ : 21,17,223 ರು ಎಂದು 2017-18ರ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ತೋರಿಸಿದ್ದಾರೆ. 2016-17ರಲ್ಲಿ ವಾರ್ಷಿಕ ಆದಾಯ 14,84,617 ರು ಹಾಗೂ 2015-16ರಲ್ಲಿ 12,96,944 ರು ನಷ್ಟಿತ್ತು. ಸರ್ಕಾರಿ ಸಂಬಳ ಹಾಗೂ ಬ್ಯಾಂಕಿನಿಂದ ಬರುವ ಬಡ್ಡಿ ಮೊತ್ತವೇ ಆದಾಯದ ಮೂಲವಾಗಿದೆ.
ಬಿಜು ಜನತಾ ದಳದ ವರಿಷ್ಠ ನವೀನ್ ಅವರು ಬ್ಯಾಂಕ್ ಆಫ್ ಇಂಡಿಯಾ ಹಾಗೂ ಎಸ್ ಬಿಐನಲ್ಲಿ ಎರಡು ಖಾತೆಹೊಂದಿದ್ದಾರೆ. ಕ್ರಮವಾಗಿ 6,50,648 ರು ಹಾಗೂ 1730 ರು ಹೊಂದಿದ್ದಾರೆ.
* 45.770 ಗ್ರಾಂ ಆಭರಣ ಹೊಂದಿದ್ದು ಇದರ ಬೆಲೆ ಸುಮಾರು 2,12,252ರು .
* ಫರಿದಾಬಾದಿನ ತಿಕ್ರಿ ಖೇರಾ ಪ್ರದೇಶದಲ್ಲಿ 22.7 ಎಕರೆ ತೋಟ ಹೊಂದಿದ್ದು, ಇದರ ಮೌಲ್ಯ 10,75,51,071 ರು ನಷ್ಟಿದೆ.
* 2.133 ಎಕರೆ ವಿಸ್ತೀರ್ಣದ ನವೀನ್ ನಿವಾಸ್ ಮನೆಯಲ್ಲಿ ಮೂರರಲ್ಲಿ ಒಂದು ಭಾಗ ಪಾಲು ಹೊಂದಿದ್ದು ಇದರ ಮೌಲ್ಯ 9.52 ಕೋಟಿ ರು,
* 1111.19 ಚದರ ಮೀಟರ್ ವಿಸ್ತೀರ್ಣದ ನವದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ವಸತಿ ಕಟ್ಟಡದಲ್ಲಿ ಶೇ50ರಷ್ಟು ಪಾಲು ಹೊಂದಿದ್ದು ಇದರ ಮೌಲ್ಯ43,36,18,000 ರು.












Click it and Unblock the Notifications