• search
  • Live TV
ಭುವನೇಶ್ವರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಾಫಿಕ್ ನಿಯಮ ಉಲ್ಲಂಘನೆ: ಟ್ರಕ್ ಚಾಲಕನಿಗೆ 6.5 ಲಕ್ಷ ರೂ. ದಂಡ!

|

ಸಂಬಲ್ಪುರ್, ಸೆಪ್ಟೆಂಬರ್ 14: ಇತ್ತೀಚಿನ ದಿನಗಳಲ್ಲೇ ನೀವು ಕೇಳಿರಬಹುದಾದ ಸಂಚಾರ ನಿಯಮದ ದಂಡದ ಮೊತ್ತವೆಷ್ಟು? ಒಡಿಶಾದ ಸಾರಿಗೆ ಅಧಿಕಾರಿಗಳು ಹಾಕಿರುವ ನಾಗಾಲ್ಯಾಂಡ್‌ನ ಟ್ರಕ್ ಚಾಲಕನಿಗೆ ವಿಧಿಸಿರುವ ದಂಡದ ಮೊತ್ತ ಕೇಳಿದರೆ ಒಮ್ಮೆ ದಿಗಿಲಾಗುತ್ತದೆ. ಈ ದಂಡದ ಮೊತ್ತ ಬರೋಬ್ಬರಿ 6.53 ಲಕ್ಷ ರೂ.

ಅಂದಹಾಗೆ, ಇದು ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ನಂತರದ ದಂಡವಾಗಿದ್ದರೆ ಬಹುಶಃ ಅಚ್ಚರಿಯಾಗುತ್ತಿರಲಿಲ್ಲವೇನೋ. ಆದರೆ ಹೊಸ ನಿಯಮ ಬರುವುದಕ್ಕೂ ಮುನ್ನ ವಿಧಿಸಿದ್ದ ದಂಡದ ಮೊತ್ತ. ನಾಗಾಲ್ಯಾಂಡ್‌ನ ಟ್ರಕ್ ಚಾಲಕನಿಗೆ ಒಡಿಶಾದ ಸಂಬಲ್ಪುರದಲ್ಲಿ ಆಗಸ್ಟ್ 10ರಂದು 7 ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಡಿಯಲ್ಲಿ ದಂಡ ವಿಧಿಸಿದ್ದರು. ಹೊಸ ಕಾಯ್ದೆ ಜಾರಗೆ ಬರುವ ಮುನ್ನ ಈ ದಂಡ ವಿಧಿಸಿದ್ದರೂ, ಹೊಸ ನಿಯಮದಲ್ಲಿನ ಗಲಾಟೆಯಿಂದಾಗಿ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಜನ-ಪೊಲೀಸರ ಸಂಘರ್ಷಕ್ಕೆ ಕಾರಣವಾಗುತ್ತಿದೆ ದುಬಾರಿ ದಂಡ

ಈ ದಂಡದ ಚಲನ್ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕಾಗಿ ಹರಿದಾಡುತ್ತಿದೆ. ನಾಗಾಲ್ಯಾಂಡ್ ನೋಂದಣಿಯ ಟ್ರಕ್ ಒಂದು ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತಿದ್ದರಿಂದ ಅದನ್ನು ತಡೆಯಲಾಗಿತ್ತು. ವಾಹನದ ಪತ್ರಗಳನ್ನು ಪರಿಶೀಲಿಸಿದಾಗ ಟ್ರಕ್ ಮಾಲೀಕ 2014ರಿಂದ ರಸ್ತೆ ತೆರಿಗೆ ಪಾವತಿ ಮಾಡದೆ ಇರುವುದು ತಿಳಿದುಬಂತು. ಒಡಿಶಾ ಮೋಟಾರು ವಾಹನ ತೆರಿಗೆ ಕಾಯ್ದೆಯಡಿ ಈ ತೆರಿಗೆಗೆ ಇದ್ದ ದಂಡದ ಮೊತ್ತವೇ 6.4 ಲಕ್ಷ ರೂ. ಇತ್ತು. ಅಷ್ಟೇ ಅಲ್ಲ, ಆತನ ಬಳಿ ವಾಹನ ವಿಮೆ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ, ಪರವಾನಗಿ ಇರಲಿಲ್ಲ. ಜತೆಗೆ ಸರಕು ಸಾಗಾಣಿಕೆ ವಾಹನದಲ್ಲಿ ನಿಯಮ ಮೀರಿ ಪ್ರಯಾಣಿಕರನ್ನು ಕೂಡ ಕರೆದೊಯ್ಯುತ್ತಿದ್ದ. ಹೀಗಾಗಿ ಒಟ್ಟಾರೆ ದಂಡದ ಮೊತ್ತ 6.53 ಲಕ್ಷ ರೂ. ಮುಟ್ಟಿತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಮೋಹನ್ ಬೆಹೆರಾ ತಿಳಿಸಿದ್ದಾರೆ.

ಈ ಟ್ರಕ್ ನಾಗಾಲ್ಯಾಂಡ್‌ನ ಫೆಕ್ ಟೌನ್‌ನ ಬೆಥೆಲ್ ಕಾಲೊನಿಯ ನಿವಾಸಿ ಶೈಲೇಶ್ ಶಂಕರ್ ಕುಮಾರ್ ಲಾಲ್ ಗುಪ್ತಾ ಟ್ರಕ್‌ನ ಮಾಲೀಕರಾಗಿದ್ದಾರೆ. ಇದನ್ನು ದಿಲೀಪ್ ಕಾರ್ತಾ ಎಂಬಾತ ಚಾಲನೆ ಮಾಡುತ್ತಿದ್ದ. ದಂಡ ವಿಧಿಸಿ ತಿಂಗಳು ಕಳೆದರೂ ಮಾಲೀಕರು ದಂಡ ಪಾವತಿಸದೆ ಇರುವುದರಿಂದ ಟ್ರಕ್ ಇನ್ನೂ ಪೊಲೀಸರ ವಶದಲ್ಲಿಯೇ ಇದೆ.

8 ದಿನದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು ಸಂಗ್ರಹಿಸಿದ ದಂಡವೆಷ್ಟು?

ಟ್ರಕ್ ಮಾಲೀಕರು ಇನ್ನೂ ಹಲವು ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಮಾಲೀಕರು ಸುಮಾರು 7 ಲಕ್ಷ ರೂ. ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಒಂದು ವೇಳೆ ಈ ಟ್ರಕ್ ಹೊಸ ಮೋಟಾರು ಕಾಯ್ದೆ ಜಾರಿಗೆ ಬಂದ ಬಳಿಕ ಸಿಕ್ಕಿಬಿದ್ದಿದ್ದರೆ ದಂಡದ ಮೊತ್ತ ಎಷ್ಟಾಗುತ್ತಿತ್ತು? ಲೆಕ್ಕ ಹಾಕಿ!

English summary
A truck driver from Nagaland was fined Rs 6.53 lakh for traffic violation in Odisha. This fine was under old traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X