ಒಡಿಶಾದಲ್ಲಿ ಚುನಾವಣಾಧಿಕಾರಿಯನ್ನು ಗುಂಡಿಟ್ಟು ಕೊಂದ ಮಾವೋವಾದಿಗಳು

ಭುವನೇಶ್ವರ್ (ಒಡಿಶಾ), ಏಪ್ರಿಲ್ 17: ಚುನಾವಣೆ ಅಧಿಕಾರಿಯೊಬ್ಬರನ್ನು ಮಾವೋವಾದಿಗಳು ಗುಂಡಿಟ್ಟು ಕೊಂದ ಘಟನೆ ಒಡಿಶಾದ ಕಂಧಮಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮೃತಪಟ್ಟ ಅಧಿಕಾರಿಯನ್ನು ಸಂಜುಕ್ತ ದಿಗಲ್ ಎಂದು ಗುರುತಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಂಧಮಲ್ ಲೋಕಸಭಾ ಕ್ಷೇತ್ರದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಮತ್ತೊಂದು ವರದಿ ಪ್ರಕಾರ: ಚುನಾವಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಾಹನವು ಫಿರಂಜಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಗುನಿಪದರ್ ಗೆ ತೆರಳುತ್ತಿತ್ತು. ಆ ವೇಳೆ ಮಾವೋವಾದಿಗಳು ವಾಹನವನ್ನು ತಡೆದು, ಅಧಿಕಾರಿಗಳನ್ನು ಕೆಳಗೆ ಇಳಿಸಿ, ವಾಹನಕ್ಕೆ ಬೆಂಕಿ ಹೊತ್ತಿಸಿದ್ದಾರೆ

Lok Sabha Eletions 2019: Election officer killed by Maoists in Odisha’s Kandhamal

ಇದಕ್ಕೂ ಮುನ್ನ ಕಂಧಮಲ್ ಜಿಲ್ಲೆಯಲ್ಲಿ ಮಾವೋವಾದಿಗಳು ಬ್ಯಾನರ್ ಹಾಗೂ ಪೋಸ್ಟರ್ ಗಳನ್ನು ಹಾಕಿ, ಈ ಬಾರಿಯ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದರು. ಈ ಘಟನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಎರಡನೇ ಹಂತದ ಮತದಾನ ಏಪ್ರಿಲ್ ಹದಿನೆಂಟನೇ ತಾರೀಕು ಗುರುವಾರದಂದು ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+