ಬಿಜೆಪಿಗೆ ಮತ್ತೆ ಶಾಕ್, ಪಕ್ಷ ತೊರೆದ ಇಬ್ಬರು ನಾಯಕರು!

Recommended Video

      ಬಿಜೆಪಿಗೆ ಮತ್ತೆ ಶಾಕ್, ಪಕ್ಷ ತೊರೆದ ಇಬ್ಬರು ನಾಯಕರು! | Oneindia Kannada

      ಭುವನೇಶ್ವರ್, ನವೆಂಬರ್ 30: ರಾಜಸ್ಥಾನದ ಬಿಜೆಪಿ ಮುಖಂಡರಾಗಿದ್ದ ಮನ್ವೇಂದ್ರ ಸಿಂಗ್ ಮತ್ತು ಹರೀಶ್ ಮೀನಾ ಅವರ ರಾಜೀನಾಮೆಯಿಂದ ಅಘಾತಕ್ಕೊಳಗಾಗಿದ್ದ ಬಿಜೆಪಿಗೆ ಇದೀಗ ಒಡಿಶಾದಲ್ಲೂ ಅಂಥದೇ ಆಘಾತ ಎದುರಾಗಿದೆ.

      ಕೇಂದ್ರದ ಮಾಜಿ ಸಚಿವರೂ, ಹಾಲಿ ಶಾಸಕರೂ ಆಗಿದ್ದ ಒಡಿಶಾ ಬಿಜೆಪಿ ಮುಖಂಡ ದಿಲೀಪ್ ರೇ ಅವರು ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಜನರ ವಿಶ್ವಾಸ ಗಳಿಸಲು ಮತ್ತು ಅವರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ನಾನು ವಿಫಲನಾಗಿದ್ದೇನೆ. ಆದ್ದರಿಂದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆಯ ಸಮಯದಲ್ಲಿ ಅವರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

      ಅಷ್ಟೇ ಅಲ್ಲ, ಬಿಜೆಪಿಯ ಇನ್ನೋರ್ವ ಮುಖಂಡ ಬಿಜೋಯ್ ಮಹಾಪಾತ್ರಾ ಅವರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇಬ್ಬರು ನಾಯಕರೂ ತಮ್ಮ ಜಂಟಿ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಅದನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಕಳಿಸಿದ್ದಾರೆ.

      "ಪಕ್ಷದಲ್ಲಿ ನಮ್ಮಂಥ ಹಿರಿಯರನ್ನು ಗೌರವದಿಂದ ಕಾಣಲಾಗುತ್ತಿಲ್ಲ. ನಾವು ಪ್ರದರ್ಶನದ ಬೊಂಬೆಗಳಂತೆ ಇರುವುದಾದರೆ ನಮಗೆ ಈ ಸ್ಥಾನದ ಅಗತ್ಯವಿಲ್ಲ. ನಾವು ಪಕ್ಷಕ್ಕಾಗಿ ದಶಕಗಳ ಕಾಲ ದುಡಿದಿದ್ದೇವೆ. ಆದರೆ ಇದೀಗ ನಮ್ಮನ್ನು ಕಡೆಗಣಿಸುತ್ತಿರುವುದು ಸರಿಯಲ್ಲ" ಎಂದು ಪತ್ರದಲ್ಲಿ ಬರೆದಿದ್ದಾರೆ ಎನ್ನಲಾಗಿದೆ.

      Former Union Minister Dilip Ray resigns as Rourkela MLA,quits BJP

      ಐದು ರಾಜ್ಯಗಳ ಚುನಾವಣೆ ಮತ್ತು ಲೋಕಸಭಾ ಚುನಾವಣೆಯ ಹೊತ್ತಲ್ಲಿ ಹೀಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ, ಪ್ರಮುಖ ಮುಖಂಡರೇ ರಾಜೀನಾಮೆಯ ಹಾದಿ ತುಳಿದಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂಬ ಆತಂಕ ಪಕ್ಷದ ನಾಯಕರದಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+