• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗಂಡ ಮನೆಗೆ ತಡವಾಗಿ ಬಂದನೆಂದು ಕುದಿಯುವ ಎಣ್ಣೆಯನ್ನು ಮುಖಕ್ಕೆ ಸುರಿದ ಹೆಂಡತಿ

|

ಭೋಪಾಲ್, ಜನವರಿ 05: ಗಂಡ ಮನೆಗೆ ತಡವಾಗಿ ಬಂದಿದ್ದಕ್ಕೆ ಪತ್ನಿಯೊಬ್ಬಳು ಭಾರೀ ಅವಾಂತರ ಸೃಷ್ಟಿಸಿದ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಗಂಡ ತಡವಾಗಿ ಮನೆಗೆ ಬಂದಿದ್ದ ಎಂಬ ಕಾರಣಕ್ಕೆ ಮಲಗಿದ್ದ ಗಂಡನ ಮುಖದ ಮೇಲೆ ಕುದಿಯುವ ಎಣ್ಣೆ ಸುರಿದು ಪತ್ನಿ ಹೀನಾಯ ಕೃತ್ಯ ಮೆರೆದಿದ್ದಾಳೆ.

35 ವರ್ಷದ ಆರೋಪಿ ಶಿವಕುಮಾರಿ ಅಹಿರ್ವಾರ್ ತನ್ನ ಗಂಡ ಅರವಿಂದ್ ಅಹಿರ್ವಾರ್(38) ಮೇಲೆ ಕುದಿಯುವ ಎಣ್ಣೆ ಸುರಿದಿದ್ದಾಳೆ. ಪರಿಣಾಮ ಅರೆಬೆಂದ ಸ್ಥಿತಿಯಲ್ಲಿರುವ ಪತಿರಾಯ ಆಸ್ಪತ್ರೆಗೆ ದಾಖಲಾಗಿದ್ದಾನೆ.

ನಾಲ್ಕು ವರ್ಷದ ಹಿಂದೆ ಮದುವೆಯಾದ ಈ ಜೋಡಿಯ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಆದರೆ ಪತಿ ಮನೆಗೆ ತಡವಾಗಿ ಎಂಬ ಕಾರಣಕ್ಕೆ ಆರಂಭವಾದ ಜಗಳವು ತಾರಕಕ್ಕೇರಿ ಈ ಭಾರೀ ಅವಾಂತರಕ್ಕೆ ಕಾರಣವಾಗಿದೆ. ಜಗಳವನ್ನು ರಾತ್ರಿ ಕುಟುಂಬಸ್ಥರು ಮಧ್ಯ ಪ್ರವೇಶಿಸಿ ನಿಲ್ಲಿಸಿದ್ದಾರೆ. ಆದರೆ ರಾತ್ರಿ ಜಗಳಕ್ಕೆ ತಣ್ಣಗಾಗದ ಪತ್ನಿ ಶಿವಕುಮಾರಿ, ಬೆಳಿಗ್ಗೆ ಐದು ಗಂಟೆಯ ಸುಮಾರಿಗೆ ಎಣ್ಣೆಯನ್ನು ಕಾಯಿಸಿ, ಮಲಗಿದ್ದ ಗಂಡನ ಮುಖದ ಮೇಲೆ ಸುರಿದಿದ್ದಾಳೆ. ಸುಡುತ್ತಿದ್ದ ಎಣ್ಣೆಯಿಂದಾಗಿ ಅರವಿಂದ್ ಮುಖ ಸುಟ್ಟಿದ್ದು, ಆತ ಚೀರಿಕೊಂಡಿದ್ದಾನೆ.

ಮನೆಯವರೆಲ್ಲರೂ ಸೇರಿ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅರವಿಂದ್ ಕುಟುಂಬಸ್ಥರು ಶಿವಕುಮಾರಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಸಿಟ್ಟಿನಿಂದಾಗಿ ನಾನು ತಪ್ಪು ಮಾಡಿದೆ ಎಂದು ಶಿವಕುಮಾರಿ ಒಪ್ಪಿಕೊಂಡಿರುವುದಾಗಿ ಆಕೆಯ ಸಹೋದರ ತಿಳಿಸಿದ್ದಾರೆ. ಮುಖಕ್ಕೆ ತೀವ್ರ ಗಾಯಗೊಂಡಿರುವ ಅರವಿಂದ್‌, ಈಗ ಸಾಗರ ಜಿಲ್ಲೆಯ ಬುಂದೇಲ್‌ಖಂಡ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

English summary
A daily spat over returning home late from work every day ended up with the woman Pouring boiling oil on her Husband's face while he was asleep
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X