• search
 • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮ್ಮದೇ ಸರ್ಕಾರದ ನಿರ್ಧಾರದ ಬಗ್ಗೆ ಉಮಾ ಭಾರತಿ ಪ್ರಶ್ನೆ

|
Google Oneindia Kannada News

ಭೋಪಾಲ್, ನವೆಂಬರ್ 23:ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗಷ್ಟೇ ಮೂರು ಕೃಷಿ ಕಾನೂನನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದರು ಈ ನಿರ್ಧಾರದ ಕುರಿತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಪ್ರಶ್ನೆ ಮಾಡಿದ್ದಾರೆ
.
ಈ ಕುರಿತು ಟ್ವೀಟ್ ಮಾಡಿರುವ ಅವರು, ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗದೇ ಇರುವುದು ನಮ್ಮ ಕಾರ್ಯಕರ್ತರ ಕೊರತೆ ಎಂದಿದ್ದಾರೆ, ಇನ್ನು ಟ್ವೀಟ್‌ನಲ್ಲಿ ಉಮಾಭಾರತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ಹೊಗಳಿದ್ದಾರೆ.

ಕೃಷಿ ಕಾನೂನು ವಾಪಸ್ ಸೇರಿ ಮೋದಿ ಭಾಷಣದ ಪ್ರಮುಖಾಂಶಗಳುಕೃಷಿ ಕಾನೂನು ವಾಪಸ್ ಸೇರಿ ಮೋದಿ ಭಾಷಣದ ಪ್ರಮುಖಾಂಶಗಳು

ಉಮಾ ಭಾರತಿ ಟ್ವೀಟ್‌ನಲ್ಲೇನಿದೆ? 'ನಾನು ಕಳೆದ 4 ದಿನಗಳಿಂದ ವಾರಣಾಸಿಯ ಗಂಗಾನದಿಯ ದಡದಲ್ಲಿದ್ದೇನೆ. 2021ರ ನವೆಂಬರ್ 19ರಂದು ನಮ್ಮ ಪ್ರಧಾನಿ ಮೋದಿ ಅವರು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದನ್ನು ಕೇಳಿ ಮೂಕನಾದೆ.

ಹೀಗಾಗಿ ಮೂರು ದಿನಗಳ ಬಳಿಕ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಕಾನೂನು ವಾಪಸು ಕೊಡುವಾಗ ಪ್ರಧಾನಿ ಹೇಳಿದ್ದು ನನ್ನಂತಹವರಿಗೆ ಬೇಸರ ತಂದಿದೆ. ಕೃಷಿ ಕಾನೂನಿನ ಮಹತ್ವವನ್ನು ರೈತರಿಗೆ ವಿವರಿಸಲು ಪ್ರಧಾನಿಗೆ ಸಾಧ್ಯವಾಗದಿದ್ದರೆ ನಮ್ಮೆಲ್ಲರ ಕೊರತೆ ಬಿಜೆಪಿಗಿದೆ. ರೈತರಿಗೆ ಅರಿವು ಮೂಡಿಸುವಲ್ಲಿ ಕಾರ್ಯಕರ್ತರು ಎಡವಿದ್ದಾರೆ ಎಂದು ಹೇಳಿದ್ದಾರೆ.

''ಕೃಷಿ ಕಾನೂನುಗಳ ಬಗ್ಗೆ ಪ್ರತಿಪಕ್ಷಗಳ ನಿರಂತರ ಅಪಪ್ರಚಾರವನ್ನು ನಾವು ಎದುರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಆ ದಿನದ ಪ್ರಧಾನಿ ಭಾಷಣದಿಂದ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ. ನಮ್ಮ ನಾಯಕರಾದ ಮೋದಿ ಕಾನೂನುಗಳನ್ನು ಹಿಂತೆಗೆದುಕೊಳ್ಳುತ್ತಾರೆ' ಎಂದು ಹೇಳಿದರು.

ನಮ್ಮ ದೇಶದ ಇಂತಹ ಅದ್ವಿತೀಯ ನಾಯಕನು ಯುಗಯುಗಾಂತರಕ್ಕೂ ಬದುಕಲಿ, ಯಶಸ್ವಿಯಾಗಲಿ. ಇದು ನಾನು ಬಾಬಾ ವಿಶ್ವನಾಥ ಮತ್ತು ಮಾ ಗಂಗಾಳನ್ನು ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಉಮಾಭಾರತಿ ಅವರು ''ನಮ್ಮ ಪ್ರಧಾನಿ ಅತ್ಯಂತ ಆಳವಾದ ಚಿಂತನೆ ಮತ್ತು ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳುವ ಪ್ರಧಾನ ಮಂತ್ರಿಯಾಗಿದ್ದಾರೆ. ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳುವವರು ಪರಿಹಾರವನ್ನು ಸಂಪೂರ್ಣವಾಗಿ ಪರಿಹರಿಸುತ್ತಾರೆ. ಭಾರತದ ಜನರು ಮತ್ತು ನರೇಂದ್ರ ಮೋದಿ ಪರಸ್ಪರ ಹೊಂದಾಣಿಕೆ, ವಿಶ್ವದ ರಾಜಕೀಯ ಪ್ರಜಾಪ್ರಭುತ್ವವಾದಿಗಳು'' ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?
ರೈತರು ಸಂಕಷ್ಟ ಎದುರಿಸುತ್ತಿರುವುದನ್ನು ನನ್ನ 5 ವರ್ಷದ ಅಧಿಕಾರಾವಧಿಯಲ್ಲಿ ನಾನು ಕಂಡಿದ್ದೇನೆ, ಈ ದೇಶದ ಪ್ರಧಾನಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ ಬಳಿಕ ಕೃಷಿ ವಿಕಾಸ ಅಥವಾ ರೈತರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇನೆ.

-ಸಣ್ಣ ಕೃಷಿಕರನ್ನು ಮುನ್ನಲೆಗೆ ತರುವ ನಿಟ್ಟಿನಲ್ಲಿ ಉತ್ತಮ ಬೀಜ, ವಿಮೆ, ಮಾರುಕಟ್ಟೆ ಒದಗಿಸಿದ್ದೇವೆ. ಜತೆಗೆ ಉತ್ತಮ ಗುಣಮಟ್ಟದ ಬೀಜಗಳನ್ನು ವಿತರಿಸಿದ್ದೇವೆ. ಜತೆಗೆ ಕಹಿಬೇವು ಮಿಶ್ರಿತ ಯೂರಿಯಾ, ಸಾಯಿಲ್ ಹೆಲ್ತ್ ಕಾರ್ಡ್, ಮೈಕ್ರೋ ಇರಿಗೇಷನ್‌ಗೆ ಹೆಚ್ಚು ಒತ್ತು ನೀಡಿದ್ದೇವೆ.

-ಫಸಲ್ ಭೀಮಾ ಯೋಜನೆಯು ಹಲವು ರೈತರಿಗೆ ಸಹಾಯ ಮಾಡಿದೆ, ಪರಿಹಾರಾರ್ಥವಾಗಿ ರೈತರಿಗೆಂದು ಒಂದು ಲಕ್ಷ ಕೋಟಿಯನ್ನು ನೀಡಲಾಗಿದೆ.

-ಎಂಎಸ್‌ಪಿ ಹೆಚ್ಚಳ ಸಾವಿರ ಮಂಡಿಯನ್ನು ಇ-ಮಂಡಿಗಳೊಂದಿಗೆ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇವೆ ಹಾಗೆಯೇ ತಮ್ಮ ಬೆಳೆಯನ್ನು ದೇಶಾದ್ಯಂತ ಎಲ್ಲಿ ಬೇಕಾದರೂ ಮಾರಾಟ ಮಾಡಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇವೆ.

-ಕೃಷಿ ಕಾನೂನನ್ನು ಒಳ್ಳೆಯ ದೃಷ್ಟಿಯಿಂದಲೇ ಜಾರಿಗೆ ತಂದಿದ್ದೆವು, ಬೆಳೆ ಸಾಲವನ್ನು ಕೂಡ ದ್ವಿಗುಣಗೊಳಿಸಿದ್ದೆವು, ವಾರ್ಷಿಕ ಬಜೆಟ್ ಪ್ರಮಾಣವನ್ನು ಕೂಡ ಏರಿಕೆ ಮಾಡಿದ್ದೆವು.

-ನಾವು ಸಣ್ಣ ಕೃಷಿಕರಿಗೆ ಹೆಚ್ಚು ಒತ್ತು ನೀಡಿದ್ದೇವೆ ಇವುಗಳನ್ನು ರೈತರಿಗೆ ಅರ್ಥಮಾಡಿಸಲು ನಮ್ಮಿಂದ ಸಾಧ್ಯವಾಗಿಲ್ಲ, ಈ ವಿಷಯ ಸುಪ್ರೀಂಕೋರ್ಟ್‌ವರೆಗೂ ಹೋಗಿದೆ. ಇದೆಲ್ಲಾ ಕಾರಣಗಳಿಂದ ಈ ಮೂರು ಕೃಷಿ ಕಾನೂನುನಗಳನ್ನು ಸರ್ಕಾರ ಹಿಂಪಡೆಯಲು ನಿರ್ಧರಿಸಿದೆ.

-ರೈತರ ಸಮಸ್ಯೆ ಬಗೆಹರಿಸುವುದು ಸರ್ಕಾರದ ಪ್ರಮುಖಾದ್ಯತೆಯಾಗಿದೆ. ದೇಶದಲ್ಲಿ 100ರಲ್ಲಿ ಶೇ.80ರಷ್ಟು ಸಣ್ಣ ಹಿಡುವಳಿ ರೈತರಾಗಿದ್ದು, 10 ಕೋಟಿಗಿಂತ ಹೆಚ್ಚು ಸಣ್ಣ ರೈತರಿದ್ದಾರೆ.

-ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ನಿರಂತರ ಹೋರಾಟ ಹಿನ್ನೆಲೆ ಕಾಯ್ದೆಗಳು ವಾಪಸ್ ತೆಗೆದುಕೊಳ್ಳಲಾಗುವುದು. 3 ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುತ್ತಿದ್ದೇವೆ. ಅದಕ್ಕಾಗಿ ಸಮಿತಿ ರಚಿಸುತ್ತೇವೆ. ಇದರಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ರೈತರು ಮತ್ತು ಕೃಷಿ ತಜ್ಞರು ಇರಲಿದ್ದಾರೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ.

-ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುವುದು. ರೈತರ ಸ್ಥಿತಿ ಸುಧಾರಿಸಲು 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಯ್ದೆ ಜಾರಿ ಮಾಡಲಾಗಿತ್ತು. ಸಣ್ಣ ರೈತರ ಒಳಿತಿಗಾಗಿಯೇ ಕಾಯ್ದೆ ಜಾರಿಗೆ ತಂದಿದ್ದೆವು.

ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿವೆ. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿಯಾಗಿತ್ತು. ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದ್ರೆ ಕೆಲವು ರೈತರು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಅವರು ಸಲಹೆ ಒಪ್ಪಿಕೊಂಡರೂ ಕಾಯ್ದೆ ವಿರೋಧಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಇದೇ ವೇಳೆ ವಿಷಾದಿಸಿದರು.

   RCB ಪರ ಮುಂದಿನ IPLನಲ್ಲಿ ABD ಜಾಗವನ್ನು ತುಂಬುವವರು ಯಾರು | Oneindia Kannada
   English summary
   BJP leader Uma Bharti on Monday said Prime Minister Narendra Modi's sudden announcement to repeal the three controversial farm laws left her speechless as the move reflected failure of party workers to communicate properly benefits of the legislations to cultivators.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X