• search
 • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಟೈಗರ್ ಅಭಿ ಜಿಂದಾ ಹೈ' ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ ಸಿಂಧಿಯಾ

|
Google Oneindia Kannada News

ಭೋಪಾಲ್, ಜುಲೈ 3: ಮಧ್ಯಪ್ರದೇಶದ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಈಗ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದು, ಟೈಗರ್ ಜಿಂದಾ ಹೈ ಎಂದು ಎಚ್ಚರಿಸಿದ್ದಾರೆ.

   Heavy rain predicted ಇನ್ನೆರಡು ದಿನ ಕರ್ನಾಟಕದ 10 ಜಿಲ್ಲೆಗಳಲ್ಲಿ ಭಾರಿ ಮಳೆ | Karnataka | Oneindia Kannada

   ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿ ನಾಲ್ಕು ತಿಂಗಳುಗಳಾಗಿತ್ತು ಆದರೂ ಸಂಪುಟ ವಿಸ್ತರಣೆಯಾಗಿರಲಿಲ್ಲ. ಈ ಕಾರಣಕ್ಕಾಗಿ ಸಿಂಧಿಯಾ ವಿರುದ್ಧ ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದರು.

   ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆಗೆ ಕರ್ನಾಟಕವೇ ಮಾದರಿಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆಗೆ ಕರ್ನಾಟಕವೇ ಮಾದರಿ

   ಇದಲ್ಲದೆ ಸಿಂಧಿಯಾ ಹಾಗೂ ಅವರ ಬೆಂಬಲಿಗರ ಬಗ್ಗೆಯೂ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ಕಳೆದ ನಾಲ್ಕು ತಿಂಗಳುಗಳಿಂದ ಮಾನಹಾನಿ, ಟೀಕೆಗಳನ್ನು ನೋಡಿಕೊಂಡು ಬಂದಿದ್ದೇನೆ. ಆದರೆ ಈ ಹುಲಿ ಇನ್ನೂ ಬದುಕಿದೆ.

   ಮಧ್ಯಪ್ರದೇಶದಲ್ಲಿ ನಡೆಯುವ ಎಲ್ಲಾ 24 ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. 15 ತಿಂಗಳುಗಳ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಜನರು ಬುದ್ಧಿ ಕಲಿಸಲಿದ್ದಾರೆ.

   ನನ್ನ ವಿರುದ್ಧದ ಟೀಕೆಗಳಿಗೆ ಚುನಾವಣೆ ಮೂಲಕವೇ ಉತ್ತರಿಸಲಿದ್ದೇನೆ, ಸಿಂಧಿಯಾ ಯೆರೆನ್ನುವುದು ಆಗ ತಿಳಿಯಲಿದೆ. ಕಮಲ್‌ನಾಥ್ ಹಾಗೂ ದಿಗ್ವಿಜಯ್ ಸಿಂಗ್ ಅವರೇ ಟೈಗರ್ ಜಿಂದಾ ಹೈ ಎಂದು ಗ್ವಾಲಿಯರ್ ಯುವ ರಾಜ ಗುಡುಗಿದ್ದಾರೆ.

   ಏತನ್ಮಧ್ಯೆ ಗುರುವಾರ ನಡೆದ ಮಧ್ಯಪ್ರದೇಶ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಸಿಂಧಿಯಾ ಪರ 14 ಶಾಸಕರಿಗೆ ಸ್ಥಾನ ದೊರೆತಿದೆ. ಇದರಿಂದ ಸಿಂಧಿಯಾ ಕೂಡ ಫುಲ್ ಖುಷ್ ಆಗಿದ್ದಾರೆ.

   English summary
   Jyotiraditya Scindia, whose supporters scored big in the Madhya Pradesh cabinet expansion on Thursday, announced his return to the forefront of state politics after months of silence and speculation by aiming a one-liner at his former Congress colleagues: "Tiger zinda hai".
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X