ರೇಪ್ ಆಗೋದು ದೇವಾಲಯಗಳಲ್ಲಿ ಎಂದ ದಿಗ್ವಿಜಯ್ ಸಿಂಗ್!
Recommended Video
ಕಾವಿ ಬಟ್ಟೆ ತೊಟ್ಟವರು ಅತ್ಯಾಚಾರ ಮಾಡುವುದು ಮಾಮೂಲಿ ಎಂದ ಕಾಂಗ್ರೆಸ್ ನಾಯಕ..?
ಭೋಪಾಲ್, ಸೆಪ್ಟೆಂಬರ್ 18: "ಅತ್ಯಾಚಾರಗಳು ದೇವಾಲಯಗಳಲ್ಲಿ ಆಗುತ್ತವೆ" ಎಂಬ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಮಗ್ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.
ಮಧ್ಯಪ್ರದೇಶದ ಅಧ್ಯಾತ್ಮ ಸಂಘಟನೆಯೊಂದು ಆಯೋಜಿಸಿದ್ದ 'ಸಂತ್ ಸಮಾಗಮ್' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಗ್ ಈ ಹೇಳಿಕೆ ನೀಡಿದರು.
"ಕಾಷಾಯ ವಸ್ತ್ರ ಧರಿಸಿರುವ ಜನರು ಅತ್ಯಾಚಾರ ಮಾಡುವುದು ಮಾಮೂಲಾಗಿದೆ. ಅತ್ಯಾಚಾರಗಳು ದೇವಾಲಯಗಳಲ್ಲಿ ನಡೆಯುತ್ತವೆ" ಎಂದು ಸಿಂಗ್ ಹೇಳಿದ್ದರು.

"ಸನಾತನ ಧರ್ಮಕ್ಕೆ ಮಸಿ ಬಲಿಯುವಂಥವರನ್ನು ಆ ದೇವರೂ ಕ್ಷಮಿಸಲಾರ" ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದರು.
ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯ ವಿರುದ್ಧ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, "ಯಾರೋ ಒಬ್ಬರು ಸಂತ ಅಪರಾಧ ಮಾಡಿದರೆ ಕಾವಿ ಬಟ್ಟೆ ಧರಿಸಿರುವ ಎಲ್ಲರನ್ನೂ ಅಪರಾಧಿಗಳು ಎಂದು ನೋಡುವುದು ಎಷ್ಟು ಸರಿ? ಇಂಥ ಹೇಳಿಕೆಗಳನ್ನು ನೀಡುವ ಮೂಲಕ ದಿಗ್ವಿಜಯ್ ಸಿಂಗ್ ಸನಾತನ ಧರ್ಮಕ್ಕೆ, ಸಂತರಿಗೆ ಅವಮಾನ ಮಾಡುತ್ತಿದ್ದಾರೆ" ಎಂದು ಬಿಜೆಪಿ ದೂರಿದೆ.












Click it and Unblock the Notifications