ಮಹಾಭಾರತ, ರಾಮಾಯಣದಲ್ಲಿ ಹಿಂಸೆಯ ಪಾಠವಿದೆ: ಸೀತಾರಾಮ್ ಯಚೂರಿ

ಭೋಪಾಲ್, ಮೇ 03: "ರಾಮಾಯಣ, ಮಹಾಭಾರತ ಗ್ರಂಥಗಳೂ ಹಿಂಸೆ ಮತ್ತು ಯುದ್ಧವನ್ನು ಬೋಧಿಸುತ್ತವೆ. ಆರೆಸ್ಸೆಸ್ ಪ್ರಚಾರಕರು ಈ ಧರ್ಮಗ್ರಂಥಗಳನ್ನು ಬೋಧಿಸುತ್ತಾರೆ, ಆದರೆ ಹಿಂಸೆ ಮಹಾಪಾಪ ಎನ್ನುತ್ತಾರೆ. ಇದರಲ್ಲಿ ಯಾವ ತರ್ಕವಿದೆ" ಎಂದು ಅವರು ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಚುನಾವಣಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದ ಯಚೂರಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೂ ತರಾಟೆಗೆ ತೆಗೆದುಕೊಂಡರು.

Ramayana and Mahabharata filled with instances of violence and battles: Sitaram Yechury

"ಹಿಂದುಗಳು ಹಿಂಸೆಯಲ್ಲಿ ತೊಡಗಬಹುದು ಎಂಬುದನ್ನು ಈ ಗ್ರಂಥಗಳು ತೊರಿಸಿವೆ. ಗೋಹತ್ಯೆ ಮಾಡುವವರನ್ನು ಶಿಕ್ಷಿಸುವ ನೆಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ತಮ್ಮದೇ ಒಂದು ಸೈನ್ಯ ಕಟ್ಟಿಕೊಂಡಿದ್ದನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯ" ಎಂದು ಅವರು ಪ್ರಶ್ನಿಸಿದ್ದಾರೆ.

ಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡ, ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಮಾತನಾಡಿ, "ಇದು ಸಾರ್ವತ್ರಿಕ ಚುನಾವಣೆಯಲ್ಲ, ನಮ್ಮ ಸಂವಿಧಾನವನ್ನು ಉಳಿಸುವ ಸಲುವಾಗಿ ನಡೆಯುತ್ತಿರುವ ಹೋರಾಟ" ಎಂದರು.

ಇದು ಸಿದ್ಧಾಂತಗಳ ನಡುವಿನ ಯುದ್ಧವೇ ಹೊರತು, ವ್ಯಕ್ತಿಗಳ ನಡುವಿನ ಹೋರಾಟವಲ್ಲ ಎಂದು ಸಿಂಗ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+