'ನೋಟಿನ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿ ರೂಪಾಯಿ ಮೌಲ್ಯ ಹೆಚ್ಚಿಸಬಹುದು'

Recommended Video

      ನೋಟಿನ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿ ರೂಪಾಯಿ ಮೌಲ್ಯ ಹೆಚ್ಚಿಸಬಹುದಾ ? | ONEINDIA KANNADA

      ಭೋಪಾಲ್, ಜನವರಿ 15: ಭಾರತೀಯ ಕರೆನ್ಸಿ ನೋಟುಗಳ ಮೇಲೆ ಐಶ್ವರ್ಯ ದೇವತೆ ಲಕ್ಷ್ಮಿ ಚಿತ್ರ ಮುದ್ರಿಸಿದರೆ ರೂಪಾಯಿ ಮೌಲ್ಯ ಸುಧಾರಿಸಬಹುದು ಎಂದು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.

      ಮಧ್ಯಪ್ರದೇಶದ ಕಂದ್ವಾ ನಲ್ಲಿ ಆಯೋಜಿಸಿದ್ದ ವಿವೇಕಾನಂದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಸುಬ್ರಹ್ಮಣಿಯನ್ ಸ್ವಾಮಿ, 'ಲಕ್ಷ್ಮಿ ಚಿತ್ರ ಮುದ್ರಿಸಿದರೆ ರೂಪಾಯಿಯ ಮೌಲ್ಯ ಹೆಚ್ಚಬಹುದು' ಎಂದಿದ್ದಾರೆ.

      ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು, ಇಂಡೋನೇಷ್ಯಾದ ಕರೆನ್ಸಿ ಮೇಲೆ ಗಣೇಶನ ಚಿತ್ರ ಮುದ್ರಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಸುಬ್ರಹ್ಮಣಿಯನ್ ಸ್ವಾಮಿ ಮೇಲಿನಂತೆ ನುಡಿದರು.

      Print Godess Laxmi Photo On Note To Improve Condition Of Rupee: Swamy

      'ಗಣೇಶ್ ಸಂಕಟಗಳನ್ನು ದೂರ ಮಾಡುವ ದೇವರು, ಆತನ ಚಿತ್ರ ಮುದ್ರಿಸುವುದಕ್ಕೆ ನನ್ನ ಅಭ್ಯಂತರವಿಲ್ಲ, ಆದರೆ ಇದರ ನಿರ್ಧಾರವನ್ನು ಪ್ರಧಾನಿ ಮೋದಿ ಮಾಡಬೇಕು. ಐಶ್ವರ್ಯ ದೇವತೆ ಲಕ್ಷ್ಮಿ ಚಿತ್ರ ಮುದ್ರಿಸಿದರೆ ರೂಪಾಯಿ ಮೌಲ್ಯ ಹೆಚ್ಚಾಗಬಹುದು' ಎಂದು ಅವರು ಹೇಳಿದರು.

      ಕಾರ್ಯಕ್ರಮದಲ್ಲಿ ಮತ್ತೊಂದು ವಿವಾದಕರ ಮಾತನ್ನಾಡಿದ ಸುಬ್ರಹ್ಮಣಿಯನ್ ಸ್ವಾಮಿ, 'ಹಿಂದೂ ಮತ್ತು ಮುಸಲ್ಮಾನರ ರಕ್ತದ ಡಿಎನ್‌ಎ ಬ್ರಾಹ್ಮಣ ಮತ್ತು ದಲಿತರ ರಕ್ತದ ಡಿಎನ್‌ಎ ರೀತಿ ಒಂದೇ ಆಗಿದೆ' ಎಂದರು.

      ಸಿಎಎ ಬಗ್ಗೆಯೂ ಮಾತನಾಡಿದ ಸುಬ್ರಹ್ಮಣಿಯನ್ ಸ್ವಾಮಿ, 'ಕಾಂಗ್ರೆಸ್ ಮತ್ತು ಮಹಾತ್ಮಾ ಗಾಂಧಿ ಸಿಎಎ ಬೇಕು ಎಂದು ಕೇಳಿದ್ದರು. ಮನಮೋಹನ್ ಸಿಂಗ್ ಸಹ ಸಿಎಎ ಪರವಾಗಿ ಈ ಹಿಂದೆ ಮಾತನಾಡಿದ್ದರು. ಆದರೆ ಈಗ ಬೇಡ ಎನ್ನುತ್ತಿದ್ದಾರೆ' ಎಂದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+