ಭೋಪಾಲ್‌ನಲ್ಲಿ ಸಂಸದರಾಗಿದ್ದ ಕನ್ನಡಿಗ ಯಾರು?

ಭೋಪಾಲ್‌, ಮೇ 12: ಹಾಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಅಸ್ತಿತ್ವಕ್ಕೆ ಬರುವ ಮುನ್ನ ಜನಸಂಘ ಎನ್ನುವ ಹೆಸರಿನಲ್ಲಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆಗ ಕರ್ನಾಟಕದಲ್ಲಿ ಖಾತೆಯನ್ನೇ ತೆರೆಯಲು ಜನಸಂಘಕ್ಕೆ ಅಸಾಧ್ಯವಾಗಿದ್ದರೂ, ದೂರದ ಮಧ್ಯಪ್ರದೇಶಕ್ಕೆ ಕನ್ನಡಿಗರೊಬ್ಬರು ಹೋಗಿ ಎರಡು ಬಾರಿ ಸಂಸದರಾಗಿದ್ದಾರೆ.

ಒಮ್ಮೆ ಭೋಪಾಲ್‌ ಹಾಗೂ ಇನ್ನೊಮ್ಮೆ ಷಾಜಾಪುರ ಲೋಕಸಭಾ ಕ್ಷೇತ್ರವನ್ನು ಅವರು ಪ್ರತಿನಿಧಿಸಿದ್ದಾರೆ.

Prestigious Bhopal constituency was once represented by Kannadiga

ಇವರ ಹೆಸರು ಜಗನ್ನಾಥ್‌ ರಾವ್‌ ಜೋಷಿ. ಮೂಲತಃ ಗದಗಿನ ನರಗುಂದ ತಾಲೂಕಿನವರಾದ ಜೋಷಿ, ಮೊದಲಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದರು.

1951 ರಲ್ಲಿ ಜನಸಂಘ ಆರಂಭವಾದ ಬಳಿಕ ಕರ್ನಾಟಕ ಹಾಗೂ ರಾಷ್ಟ್ರ ಮಟ್ಟದಲ್ಲಿ ಜೋಷಿ ಅಗ್ರಗಣ್ಯ ನಾಯಕರಾಗಿ ಬೆಳೆದರು. 1967ರಲ್ಲಿ ಭೋಪಾಲ್‌ ಹಾಗೂ 1971ರಲ್ಲಿ ಷಾಜಾಪುರದಿಂದ ಅವರ ಸಂಸದರಾಗಿದ್ದರು.

ಭೋಪಾಲ್‌ ನವಾಬನ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ಜಗನ್ನಾಥ್‌ ರಾವ್‌ ಜೋಷಿ ಸ್ಪರ್ಧಿಸಿ ಗೆದ್ದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಭವಿಷ್ಯದಲ್ಲಿ ಈ ಕ್ಷೇತ್ರವನ್ನು ಮಾಜಿ ರಾಷ್ಟ್ರಪತಿ ಶಂಕರ್‌ದಯಾಳ್‌ ಶರ್ಮಾ, ಮಾಜಿ ಕ್ರಿಕೆಟಿಗ ಮನ್ಸೂರ್‌ ಅಲಿ ಖಾನ್ ಪಟೌಡಿ, ಹಾಲಿ ಕೇಂದ್ರ ಸಚಿವೆ ಉಮಾ ಭಾರತಿ ಪ್ರತಿನಿಧಿಸಿದ್ದರು. ಸದ್ಯಕ್ಕೆ ಅಲೋಕ್‌ ಸಂಜರ್‌ ಬಿಜೆಪಿ ಸಂಸದರಾಗಿದ್ದಾರೆ.

ಕರ್ನಾಟಕ ಬಿಜೆಪಿ ಕಚೇರಿಗೂ ಕೂಡ ಇದೇ ವ್ಯಕ್ತಿ ಜಗನ್ನಾಥ್‌ ರಾವ್‌ ಜೋಷಿ ಹೆಸರಿಟ್ಟಿರುವುದು ವಿಶೇಷ. ಇದಕ್ಕೆ ಜೋಷಿಯವರ ಈ ರಾಜಕೀಯ ಮೇರು ನಾಯಕತ್ವ ಕೂಡ ಕಾರಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+