ಎರಡು ವಾರದ ಹಿಂದೆ ಮದುವೆ ಮಾಡಿಸಿದ್ದ ಪುರೋಹಿತನ ಜತೆಗೆ ನವವಿವಾಹಿತೆ ಪರಾರಿ!
ಸಿರೋಂಜ್ (ಮಧ್ಯಪ್ರದೇಶ), ಮೇ 29: ಇಲ್ಲೊಂದು ವಿಲಕ್ಷಣ ವರದಿ ಇದೆ. ಮಧ್ಯಪ್ರದೇಶದಿಂದ ವರದಿ ಆಗಿದೆ. ಎರಡು ವಾರಗಳ ಹಿಂದೆ ತನ್ನ ಮದುವೆ ಮಾಡಿಸಿದ್ದ ಪುರೋಹಿತನ ಜತೆಗೆ ನವ ವಿವಾಹಿತೆ ಪರಾರಿ ಆಗಿದ್ದಾಳೆ. ಸಿರೋಂಜ್ ನಗರದ ಬಾಗ್ರೋದ್ ನಲ್ಲಿ ಈಗ ಆ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಮೇ 7ನೇ ತಾರೀಕು ಆಕೆಯ ವಿವಾಹ ಆಗಿದೆ. ಮೇ 23ನೇ ತಾರೀಕು ಪುರೋಹಿತ ಮತ್ತು ಆಕೆ ಪರಾರಿ ಆಗಿದ್ದಾರೆ.
ಅಂದ ಹಾಗೆ ಈ ವಿಚಾರ ಗೊತ್ತಾಗಿದ್ದು ಹೇಗೆ ಗೊತ್ತಾ? ಈ ಪುರೋಹಿತ ಮೇ 23ನೇ ತಾರೀಕು ಒಂದು ಮದುವೆ ಒಪ್ಪಿಕೊಂಡಿದ್ದ. ಆದರೆ ಆತ ನಾಪತ್ತೆ. ಎಲ್ಲಿ ಹೋದ ಎಂಬುದು ಕೂಡ ಜನರಿಗೆ ಗೊತ್ತಾಗಿಲ್ಲ. ಒಂದು ಕಡೆ ಈ ಪುರೋಹಿತ, ಮತ್ತೊಂದು ಕಡೆ ವಿವಾಹ ನಂತರದ ವಿಧಿ- ವಿಧಾನಗಳನ್ನು ಪೂರೈಸಬೇಕಿದ್ದ ನವ ವಿವಾಹಿತೆ ನಾಪತ್ತೆ.

ಸದ್ಯಕ್ಕೆ ಆಕೆಯ ಸಂಬಂಧಿಕರು ದೂರು ದಾಖಲಿಸಿದ್ದಾರೆ. ಇನ್ನು ಆ ಪುರೋಹಿತನಿಗೆ ಈಗಾಗಲೇ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಈಗ ಪರಾರಿ ಆಗಿರುವ ಮಹಿಳೆ ಜತೆಗೆ ಎರಡು ವರ್ಷದ ಸಂಬಂಧ ಇತ್ತು ಎಂದು ತಿಳಿದುಬಂದಿದೆ. ಪುರೋಹಿತ ಅಷ್ಟೇ ಅಲ್ಲ, ಆತನ ಇಡೀ ಕುಟುಂಬವೇ ನಾಪತ್ತೆಯಾಗಿದೆ. ಇನ್ನು ನವವಿವಾಹಿತೆ ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಮೂವತ್ತು ಸಾವಿರ ನಗದಿನ ಜತೆ ಪರಾರಿ ಆಗಿದ್ದಾಳೆ.












Click it and Unblock the Notifications