• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ನಾನ, ಮುಖ ಕ್ಷೌರ ಮಾಡದ ಗಂಡನಿಂದ ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ

|

ಭೋಪಾಲ್ (ಮಧ್ಯಪ್ರದೇಶ), ಏಪ್ರಿಲ್ 12: ನನ್ನ ಗಂಡ ಮುಖ ಕ್ಷೌರ ಮಾಡಿಕೊಳ್ಳುವುದಿಲ್ಲ ಮತ್ತು ವಾರಕ್ಕೆ ಒಂದು ಸಲ ಸ್ನಾನ ಮಾಡುತ್ತಾನೆ. ಇಂಥವನಿಂದ ವಿವಾಹ ವಿಚ್ಛೇದನ ಬೇಕು ಎಂದು ಇಪ್ಪತ್ಮೂರು ವರ್ಷದ ಮಹಿಳೆ ಮಧ್ಯಪ್ರದೇಶದಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ಈ ದಂಪತಿ ಕಳೆದ ವರ್ಷ ಅಷ್ಟೇ ಮದುವೆ ಆಗಿದ್ದಾರೆ.

ಭೋಪಾಲ್ ನ ಕೌಟುಂಬಿಕ ನ್ಯಾಯಾಲಯವು ಈ ದಂಪತಿಯನ್ನು ಆರು ತಿಂಗಳು ಪ್ರತ್ಯೇಕವಾಗಿ ವಾಸ ಇರುವಂತೆ ಸೂಚಿಸಿದ್ದು, ಆ ನಂತರ ವಿಚ್ಛೇದನಕ್ಕೆ ಅನುಮತಿಸುವುದಾಗಿ ತಿಳಿಸಿರುವುದಾಗಿ ವಕೀಲರು ಮಾಹಿತಿ ನೀಡಿದ್ದಾರೆ. ದಂಪತಿ ಪರಸ್ಪರ ಒಪ್ಪಿಗೆಯಿಂದಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ.

ವಿಶ್ವದ ಅತಿ ದುಬಾರಿ ವಿಚ್ಛೇದನ: ಅಮೆಜಾನ್ ದಂಪತಿ ದೂರ ದೂರ

ಆಕೆಯ ದೂರೇನೆಂದರೆ, ಗಂಡ ಎನಿಸಿಕೊಂಡವನು ಮುಖ ಕ್ಷೌರ ಮಾಡಿಕೊಳ್ಳಲ್ಲ. ಏಳೆಂಟು ದಿನ ಸ್ನಾನವೇ ಮಾಡಲ್ಲ. ಈಕೆ ಬಲವಂತ ಮಾಡಿದರಷ್ಟೇ ಸ್ನಾನ ಮಾಡುತ್ತಾನೆ. ಇಲ್ಲದಿದ್ದರೆ ಮೈ ದುರ್ಗಂಧ ಹೋಗಲಿ ಎಂದು ಸುಗಂಧದ್ರವ್ಯ ಹಾಕಿಕೊಳ್ಳುತ್ತಾನೆ.

ಆಕೆಯು ಬ್ರಾಹ್ಮಣ ಸಮುದಾಯದವಳಾದರೆ, ಪತಿ ಸಿಂಧಿ ಸಮುದಾಯವನು. ಒಂದು ಅಂಗಡಿ ನಡೆಸುತ್ತಾನೆ. ಈ ದಂಪತಿಗೆ ಮಕ್ಕಳಿಲ್ಲ. ಆ ಮಹಿಳೆಯ ಕುಟುಂಬ ಸದಸ್ಯರಿಗೆ ಈ ಮದುವೆ ಮುರಿಯುವುದು ಇಷ್ಟವಿಲ್ಲ. ಆದರೆ ಅವರ ಮಾತನ್ನು ಕೇಳುವುದಕ್ಕೆ ಈ ಮಹಿಳೆ ಸುತಾರಾಂ ಸಿದ್ಧಳಿಲ್ಲ.

ಫೇಸ್‌ಬುಕ್ ನಿಂದ ಮದುವೆ ವಾಟ್ಸಪ್‌ನಿಂದ ಡಿವೊರ್ಸ್, ಇದೆಂಥಾ ಜೀವನ

ಹಿರಿಯ ಸಮ್ಮುಖದಲ್ಲಿ, ಒಪ್ಪಿಗೆಯಿಂದಲೇ ನಡೆದ ಮದುವೆ ಇದು. ಸಿಂಧಿ ಸಮುದಾಯದಲ್ಲಿ ಸೂಕ್ತ ವಧು ಸಿಗದ ಕಾರಣಕ್ಕೆ ಅಂತರ್ಜಾತಿ ವಿವಾಹ ಮಾಡಲಾಗಿದೆ.

English summary
A 23-year-old woman from Madhya Pradesh has filed for divorce, claiming that her husband shuns shaving and bathing for almost a week at a stretch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X