• search
  • Live TV
ಭೋಪಾಲ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕನಿಗೆ ಚಪ್ಪಲಿ ಹಾರ: ವಿಡಿಯೋ ವೈರಲ್

|

ಭೋಪಾಲ್, ನವೆಂಬರ್ 20: ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪ್ರಚಾರಕ್ಕೆಂದು ಬಂದಿದ್ದ ಬಿಜೆಪಿಯ ಹಾಲಿ ಶಾಸಕ ಮತ್ತು ಅಭ್ಯರ್ಥಿಗೆ ಚಪ್ಪಲಿ ಹಾರ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದ ನಗಾಡಾದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಶಾಸಕ ಮತ್ತು ಈ ಬಾರಿಯ ಚುನಾವಣೆಯ ಅಭ್ಯರ್ಥಿಯೂ ಆಗಿರುವ ದಿಲೀಪ್ ಕುಮಾರ್ ಅವರಿಗೆ ವ್ಯಕ್ತಿಯೊಬ್ಬ ಚಪ್ಪಲಿ ಹಾರ ಹಾಕಿದ್ದಾನೆ.

ಮಧ್ಯಪ್ರದೇಶ: ಚುನಾವಣೆ ಗೆಲ್ಲಲು ಆರೆಸ್ಸೆಸ್ ಮೊರೆಹೋದ ಬಿಜೆಪಿ?

ತಕ್ಷಣವೇ ಆಕ್ರೋಶಗೊಂಡ ಶಾಸಕ ಆ ಹಾರವನ್ನು ತೆಗೆದು ವ್ಯಕ್ತಿಗೆ ಹಲ್ಲೆ ಮಾಡಿದ ದೃಶ್ಯವೂ ಸೆರೆಯಾಗಿದೆ.

230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ನ.28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ.

ಕಳೆದ ಜನವರಿಯಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಧರ್ ದಾಮೋಂದ್ ಎಂಬ ಬಿಜೆಪಿ ಅಭ್ಯರ್ಥಿಗೆ ಸಹ ಒಬ್ಬ ವೃದ್ಧ ವ್ಯಕ್ತಿ ಚಪ್ಪಲಿ ಹಾರ ಹಾಕಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ಅಭ್ಯರ್ಥಿ ಧರ್, ಅವರು ನನ್ನ ತಂದೆ ಇದ್ದಂತೆಯೇ. ಈ ವರ್ತನೆಯಿಂದ ನನಗೆ ಬೇಸರವಾಗಿಲ್ಲ. ನಾನು ಅವರೊಂದಿಗೆ ಕುಳಿತು ಸಮಸ್ಯೆ ಆಲಿಸುತ್ತೇನೆ ಎಂದಿದ್ದರು.

English summary
A man greets BJP MLA and candidate Dilip Shekhawat with a garland of shoes in Madhya Pradesh's Nagada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X