ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ತಾಯಿ ವಯಸ್ಸಿನ ಬಗ್ಗೆ ಅಣಕವಾಡಿ ವಿವಾದ ಸೃಷ್ಟಿಸಿದ ರಾಜ್ ಬಬ್ಬರ್

|
Google Oneindia Kannada News

Recommended Video

ಮೋದಿ ತಾಯಿಯ ವಯಸ್ಸನ್ನ ರೂಪಾಯಿ ಕುಸಿತಕ್ಕೆ ಹೋಲಿಸಿದ ಕಾಂಗ್ರೆಸ್ ಮುಖಂಡ | Oneindia Kannada

ಭೋಪಾಲ್, ನವೆಂಬರ್ 23: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗಾಗಿ ಪ್ರಚಾರ ನಡೆಸುತ್ತಿರುವ ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿದ್ದಾರೆ.

ಇಂದೋರ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಡಾಲರ್ ಎದುರು ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿಯನ್ನು ನರೇಂದ್ರ ಮೋದಿ ಅವರ ತಾಯಿಯ ವಯಸ್ಸಿಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

'ಮೋದಿ ಅವರು ಹೇಳುತ್ತಾರೆ, ಭಾರತದ ರೂಪಾಯಿ ಮೌಲ್ಯವು ಡಾಲರ್ ಎದುರು ಭಾರಿ ಕುಸಿತ ಆಗಿದೆ, ಅದು ಹಿಂದಿನ ಪ್ರಧಾನಿ (ಮನಮೋಹನ್ ಸಿಂಗ್) ಅವರ ವಯಸ್ಸಿನ ಸಮೀಪ ಇದೆ ಎಂದು. ಇಂದು ರೂಪಾಯಿಯ ಮೌಲ್ಯವು ಎಷ್ಟು ಕುಸಿದಿದೆ ಎಂದು ಅದು ನಿಮ್ಮ ತಾಯಿಯ ವಯಸ್ಸನ್ನು ಸಮೀಪಿಸುತ್ತಿದೆ' ಎಂದು ರಾಜ್ ಬಬ್ಬರ್ ಹೇಳಿದ್ದಾರೆ.

ಅವರು ಕಮಲ್ ನಾಥ್ ಅಲ್ಲ, ಕಮಿಷನ್ ನಾಥ್: ಸಂಬಿತ್ ಪಾತ್ರಅವರು ಕಮಲ್ ನಾಥ್ ಅಲ್ಲ, ಕಮಿಷನ್ ನಾಥ್: ಸಂಬಿತ್ ಪಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ 97 ವರ್ಷ ವಯಸ್ಸಿನವರು. ಅವರ ವಯಸ್ಸಿನ ಮಟ್ಟಕ್ಕೆ ರೂಪಾಯಿ ಮೌಲ್ಯ ಕುಸಿತವಾಗಿದೆ ಎಂದು ರಾಜ್ ಬಬ್ಬರ್ ಹೋಲಿಸಿದ್ದಾರೆ.

ರಾಜ್ ಬಬ್ಬರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅವರು ಕ್ಷಮೆ ಕೋರಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಕೆಟ್ಟ ಮಾತುಗಳು-ಬಿಜೆಪಿ ಖಂಡನೆ

ಕೆಟ್ಟ ಮಾತುಗಳು-ಬಿಜೆಪಿ ಖಂಡನೆ

'ಕಾಂಗ್ರೆಸ್ ಕೆಳಮಟ್ಟಕ್ಕೆ ಇಳಿದಿದ್ದು, ತನ್ನ ಘನತೆಗೆ ತಕ್ಕುದಲ್ಲದ ಮತ್ತು ಕೆಟ್ಟ ಹೇಳಿಕೆಗಳನ್ನು ನೀಡುತ್ತಿದೆ. ರಾಜಕೀಯದಲ್ಲಿ ಎಲ್ಲರೂ ಘನತೆ ಕಾಪಾಡಿಕೊಳ್ಳಬೇಕು. ಇದನ್ನು ಖಂಡಿಸುತ್ತೇನೆ. ರೂಪಾಯಿ vs ಡಾಲರ್ ಅನ್ನು ಮೋದಿ ಅವರ ತಾಯಿಗೆ ಹೋಲಿಸಿರುವುದು ರಾಜ್ ಬಬ್ಬರ್ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಅವರು ಕೂಡಲೇ ಕ್ಷಮೆ ಕೋರಬೇಕು' ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಆಗ್ರಹಿಸಿದ್ದಾರೆ.

ಬ್ರಾಹ್ಮಣರಿಗಷ್ಟೇ ಹಿಂದುತ್ವ ಗೊತ್ತು ಎಂದ ಕಾಂಗ್ರೆಸ್ ಮುಖಂಡ!ಬ್ರಾಹ್ಮಣರಿಗಷ್ಟೇ ಹಿಂದುತ್ವ ಗೊತ್ತು ಎಂದ ಕಾಂಗ್ರೆಸ್ ಮುಖಂಡ!

ಕಾಂಗ್ರೆಸ್ ಸಮರ್ಥನೆ

ಕಾಂಗ್ರೆಸ್ ಸಮರ್ಥನೆ

ಉತ್ತರ ಪ್ರದೇಶದ ಕಾಂಗ್ರೆಸ್ ಮುಖಂಡ ಅಖಿಲೇಶ್ ಪ್ರತಾಪ್ ಸಿಂಗ್, ರಾಜ್ ಬಬ್ಬರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರೂ ತಮ್ಮ ಭಾಷಣಗಳಲ್ಲಿ ಗಾಂಧಿ ಕುಟುಂಬದ ವಿರುದ್ಧ ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಮರ ವೋಟಿಗಾಗಿ ಕಮಲ್ ನಾಥ್ ಮನವಿ ವಿಡಿಯೋ: ಕಾಂಗ್ರೆಸ್‌ಗೆ ಮುಜುಗರಮುಸ್ಲಿಮರ ವೋಟಿಗಾಗಿ ಕಮಲ್ ನಾಥ್ ಮನವಿ ವಿಡಿಯೋ: ಕಾಂಗ್ರೆಸ್‌ಗೆ ಮುಜುಗರ

Array

ಬಬ್ಬರ್‌ಗೆ ನಾಚಿಕೆಯಾಗಬೇಕು

ಇಡೀ ಗಾಂಧಿ ಕುಟುಂಬ ವಂಶಪಾರಂಪರ್ಯವಾಗಿ ರಾಜಕೀಯದಲ್ಲಿದ್ದು, ಅನೇಕ ಹಗರಣಗಳಲ್ಲಿ ಭಾಗಿಯಾಗಿರುವಾಗ ಅವರು ಟೀಕೆಗೆ ಅರ್ಹವಾಗುವ ವಸ್ತುವಾಗಿರುತ್ತಾರೆ. ಆದರೆ, ರಾಜ್ ಬಬ್ಬರ್‌ನಂತಹ ಕೆಲಸವಿಲ್ಲದವರು ರಾಜಕೀಯಕ್ಕೆ ಸಂಬಂಧಿಸದ ಮೋದಿ ಅವರ ತಾಯಿಯನ್ನು ನಿಂದಿಸುತ್ತಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ತೊಟ್ಲಾನಿ ಕೃಷ್ಣನ್‌ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಹವಾ..? ಕಾಂಗ್ರೆಸ್ ಜಸ್ಟ್ ಮಿಸ್?! NDTV ವಿಶ್ಲೇಷಣೆಮಧ್ಯಪ್ರದೇಶದಲ್ಲಿ ಮತ್ತೆ ಬಿಜೆಪಿ ಹವಾ..? ಕಾಂಗ್ರೆಸ್ ಜಸ್ಟ್ ಮಿಸ್?! NDTV ವಿಶ್ಲೇಷಣೆ

ನಿಜ ಬಣ್ಣ ತೋರಿಸುತ್ತಿದೆ

2019ರ ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್ ಮುಖಂಡರು ತಮ್ಮಿಂದ ಸಾಧ್ಯವಾದಷ್ಟು ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ. ಈಗ ರಾಜ್ ಬಬ್ಬರ್ ರೂಪಾಯಿ ಮೌಲ್ಯವನ್ನು ಪ್ರಧಾನಿ ತಾಯಿಯ ವಯಸ್ಸಿಗೆ ಹೋಲಿಸಿದ್ದಾರೆ. ಇದು ನಾಚಿಕೆಗೇಡು. ಆದರೆ, ಕಾಂಗ್ರೆಸ್ ತನ್ನ ನಿಜಬಣ್ಣವನ್ನು ತೋರಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಸುಪ್ರೀಂಕೋರ್ಟ್ ವಕೀಲ ವರುಣ್ ಜಮ್ವಾಲ್ ಹೇಳಿದ್ದಾರೆ.

ಬಿಜೆಪಿಯ ಅದೃಷ್ಟ

ಎದುರಾಳಿ ಪಕ್ಷದಲ್ಲಿ ದಿಗ್ವಿಜಯ್ ಸಿಂಗ್, ಮಣಿಶಂಕರ್ ಅಯ್ಯರ್, ಶಶಿ ತರೂರ್, ರಾಜ್ ಬಬ್ಬರ್ ಮತ್ತು ಸಿಪಿ ಜೋಶಿ ಅವರಂತಹ ತಾರೆಯರು ಇರುವಾಗ ಬಿಜೆಪಿಯಷ್ಟು ಯಾವುದಾದರೂ ಆಡಳಿತಪಕ್ಷ ಅದೃಷ್ಟಶಾಲಿಯಾಗಿರಲು ಸಾಧ್ಯವೇ? ಬಿಜೆಪಿ ಯಾವಾಗಲೂ ನಿರಾಳ ಮೂಡ್‌ನಲ್ಲಿಯೇ ಇರಬಹುದು ಎಂದು ನರೇನ್ ಪಲಿವಲ್ ತಮಾಷೆ ಮಾಡಿದ್ದಾರೆ.

English summary
Congress leader Raj Babbar compared Rupee fall against Dollar to Prime Minister Narendra Modi's Mother Heeraben Modi's age, while campaigning in Indore, Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X