ಮತ ಚಲಾಯಿಸದೆ ಮಂಗಳಾರತಿ ಮಾಡಿಸಿಕೊಂಡ ದಿಗ್ವಿಜಯ್ ಸಿಂಗ್ !

ಇಂದೋರ್, ಮೇ 13: ಭಾನುವಾರ ನಡೆದ ಆರನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸದ ದಿಗ್ವಿಜಯ್ ಸಿಂಗ್ ಅವರನ್ನು ಬಿಜೆಪಿ ನಾಯಕರು ಗೇಲಿ ಮಾಡಿದ್ದಾರೆ. 'ಮತದಾನ ಅತ್ಯಮೂಲ್ಯ ಕರ್ತವ್ಯ ಎನ್ನುವ ನೀವೇ ಮತಚಲಾಯಿಸದೆ ಮತದಾರರಿಗೆ ಋಣಾತ್ಮಕ ಸಂದೇಶ ನೀಡಿದ್ದೀರಾ' ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದಿಗ್ವಿಜಯ್ ಸಿಂಗ್ ಅವರನ್ನು ಟೀಕಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾನುವಾರ ನಡೆದ ಆರನೇ ಹಂತದ ಮತದಾನದಲ್ಲಿ ಮಧ್ಯಪ್ರದೇಶದ ರಾಜಘರ್ ನಿಂದ ಮತಚಲಾಯಿಸಬೇಕಿದ್ದ ಭೋಪಾಲ್ ಕ್ಷೇತ್ರದ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಮತ ಚಲಾಯಿಸಿರಲಿಲ್ಲ.

ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, "ನನಗೆ ಮತ ಚಲಾಯಿಸದೆ ಇರುವುದಕ್ಕೆ ತೀವ್ರ ಬೇಸರವಿದೆ. ಆದರೆ ರಾಜ್ಘರ್ ಮತಗಟ್ಟೆಗೆ ತೆರಳಲು ನನಗೆ ಸಾಧ್ಯವಾಗಿರಲಿಲ್ಲ. ಆದ್ದರಿಂದ ಮತಚಲಾಯಿಸಲು ಆಗಲಿಲ್ಲ. ಮುಂದಿನ ಬಾರಿ ನಾನು ಭೋಪಾಲ್ ಗೇ ನನ್ನ ಮತದಾನದ ಹಕ್ಕನ್ನು ವರ್ಗಾಯಿಸಿಕೊಳ್ಳುತ್ತೇನೆ" ಎಂದು ಸಿಂಗ್ ಹೇಳಿದ್ದರು.

LS polls: Digvijay Singh does not cast his vote

"ಡಿಗ್ಗಿ ದಾದಾ ಬಹಳ ವಿಚಿತ್ರವಾಗಿ ವರ್ತಿಸಿದ್ದಾರೆ. ತಮ್ಮ ಮತವನ್ನು ಚಲಾಯಿಸಲಾಗದಿರುವುದಕ್ಕೆ ಅವರು ಬಹಳ ಬೇಸರಗೊಂಡಿದ್ದಾರೆ. ಮತದಾನ ನಮ್ಮ ಅತ್ಯುನ್ನತ ಕರ್ತವ್ಯ. ಹತ್ತು ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದ ಒಬ್ಬರಿಗೆ ಮತಚಲಾಯಿಸಬೇಕು ಎಂಬುದು ಗೊತ್ತಾಗುವುದಿಲ್ಲ ಎಂದರೆ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಎಷ್ಟು ಗೌರವವಿದೆ ಎಂಬುದನ್ನು ನೀವೇ ಅರಿತುಕೊಳ್ಳಿ" ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

"ಇವರೆಲ್ಲ ಸಂವಿಧಾನದ ಬಗ್ಗೆ ದೊಡ್ಡ ಭಾಷಣ ಬಿಗಿತಾರೆ. ಏನೇ ಆಗಲಿ ಸೋಲೋದು ಗ್ಯಾರಂಟಿ, ದಿಗ್ವಿಜಯ ಹೆಸರಿಗಷ್ಟೇ ಸೀಮಿತ" ಎಂದು ಕರ್ನಾಟಕ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಸಹ ಟ್ವೀಟ್ ಮಾಡಿದ್ದಾರೆ.

ದಿಗ್ವಿಜಯ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷವು ಬಿಜೆಪಿಯ ಸಾಧ್ವಿ ಪ್ರಜ್ಞಾ ಠಾಕುರ್ ಅವರ ವಿರುದ್ಧ ಭೋಪಾಲ್ ನಿಂದ ಲೋಕಸಭೆ ಗೆ ಕಣಕ್ಕಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+