ನನ್ನ ಹತ್ಯೆಗೆ ವಿರೋಧಪಕ್ಷಗಳ ಕನಸು: ಮೋದಿ ಗಂಭೀರ ಆರೋಪ
Recommended Video
ಇಟಾರ್ಸಿ, ಮೇ 1: ವಿರೋಧ ಪಕ್ಷಗಳು ನನ್ನ ಹತ್ಯೆಯ ಕನಸು ಕಾಣುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಮಧ್ಯಪ್ರದೇಶದ ಇಟಾರ್ಸಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ಹರಿಹಾಯ್ದರು.
ಇತ್ತೀಚೆಗೆ ಕಾಂಗ್ರೆಸ್‌ನ ಒಬ್ಬರು, ಮೋದಿ ಪಾಕಿಸ್ತಾನಕ್ಕೆ ಹೋಗಿ ಬೀಳುವಂತೆ ಒದೆಯಬೇಕು ಎಂದು ಹೇಳಿದ್ದರು. ಆ ಪಕ್ಷ ನನ್ನ ವಿರುದ್ಧ ಎಷ್ಟು ದ್ವೇಷ ಕಾರುತ್ತಿದೆ ಎಂದರೆ ಅವರು ನನ್ನನ್ನು ಸಾಯಿಸುವ ಕನಸು ಕಾಣುತ್ತಿದ್ದಾರೆ. ಈಗ ಕಾಂಗ್ರೆಸ್ ತಾವು ಯಾರ ಕಡೆ ಇದ್ದೇವೆ ಎಂಬುದನ್ನು ತಿಳಿಸಲಿ: ಭಾರತ ಅಥವಾ ಪಾಕಿಸ್ತಾನ? ಎಂದು ಮೋದಿ ಹೇಳಿದರು.

ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಶ್ರೀಲಂಕಾ ಸರ್ಕಾರ ತೆಗೆದುಕೊಂಡ ತೀರ್ಮಾನಗಳಲ್ಲಿ ಒಂದು ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ನ ಟಿವಿ ಚಾನೆಲ್‌ಅನ್ನು ನಿಷೇಧಿಸಿದ್ದು. ಇದೇ ಝಾಕೀರ್ ನಾಯ್ಕ್‌ನನ್ನು ಕಾಂಗ್ರೆಸ್ ಓಲೈಸುತ್ತಿದೆ ಎಂದು ಮೋದಿ ಆರೋಪಿಸಿದರು.
ಎಲ್ಲ ಮಟ್ಟಗಳಲ್ಲಿಯೂ ಕಾಂಗ್ರೆಸ್ ಅಪ್ರಮಾಣಿಕತೆ ತೋರಿಸುತ್ತಿದೆ. ಆದರೆ, ಅದರ ನಾಯಕರು ಪ್ರಾಮಾಣಿಕವಾಗಿ ವಂಶಪಾರಂಪರ್ಯ ಆಡಳಿತವನ್ನು ಹಾಗೂ ಭ್ರಷ್ಟಾಚಾರವನ್ನು ಪಾಲಿಸುತ್ತಿದೆ.
PM Narendra Modi in Itarsi, Madhya Pradesh: One of the first things Srilankan government did after the blasts was to ban Zakir Naik's TV channel. This is the same Zakir Naik in whose 'durbar' Diggi Raja was once seen. Doob maro Congress walon!. #LokSabhaElections2019 pic.twitter.com/jCSAm4hVpR
— ANI (@ANI) 1 May 2019
ಕರ್ನಾಟಕದಲ್ಲಿ ಎಂಟು ಸೀಟುಗಳಲ್ಲಿ ಸ್ಪರ್ಧಿಸುತ್ತಿರುವವರು ತಾವು ಅತ್ಯುತ್ತಮ ಪ್ರಧಾನಿಯಾಗಬಹುದು ಎಂದು ಆಲೋಚಿಸುತ್ತಿದ್ದಾರೆ. 40 ಸೀಟುಗಳಲ್ಲಿ ಸ್ಪರ್ಧೆಗೆ ಇಳಿದಿರುವವರು ತಾವು ಪ್ರಧಾನಿಯಾಗಬಹುದು ಎನ್ನುತ್ತಿದ್ದಾರೆ. ನಮ್ಮ ದೇಶದಲ್ಲಿ ವಿರೋಧ ಪಕ್ಷದ ನಾಯಕನಾಗಲೂ ಆ ಪಕ್ಷ 50 ಸೀಟುಗಳನ್ನಾದರೂ ಗೆಲ್ಲಬೇಕು. ಅವರು 40 ಕ್ಷೇತರಗಳಲ್ಲಿಯೂ ಸ್ಪರ್ಧಿಸುತ್ತಿಲ್ಲ. ಆದರೆ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.ವಿರೋಧಪಕ್ಷದ ಮೈತ್ರಿಕೂಟದಲ್ಲಿ ಅನೇಕ ಮುಖಗಳನ್ನು ನೋಡುತ್ತಿದ್ದೇವೆ. ಅವರಲ್ಲಿ ಒಂದು ಮುಖಗಳಾದರೂ ಭಯೋತ್ಪಾದನೆಯನ್ನು ಎದುರಿಸಲು ಶಕ್ತವಾಗಿದೆ ಎನಿಸುತ್ತದೆಯೇ? ಎಂದು ಪ್ರಶ್ನಿಸಿದರು.












Click it and Unblock the Notifications