ಅತ್ಯಾಚಾರದಿಂದ ಯುವತಿ ರಕ್ಷಿಸಿದ ಬೀದಿ ನಾಯಿಗೆ ಚಾಕು ಇರಿತ
ಭೋಪಾಲ್, ಜನವರಿ 29 : ನಾಯಿಗೂ ನಿಯತ್ತಿದೆ, ಬುದ್ಧಿಯೂ ಇದೆ. ತನಗೆ ಅನ್ನ ಹಾಕಿದವರನ್ನು ಕಾಪಾಡಬೇಕು ಎನ್ನುವ ಅಭಿಮಾನವೂ ಇದೆ ಎನ್ನುವುದು ಈ ಘಟನೆಯಿಂದ ಸಾಬೀತಾಗುತ್ತದೆ.
ತನ್ನ ಮಾಲೀಕರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಕಚ್ಚಿ ಓಡಿಸಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ತನ್ನ ಮಾಲಕಿಯನ್ನು ರಕ್ಷಿಸಲು ಬಂದ ನಾಯಿಯ ಮೇಲೆಯೇ ಕಾಮುಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಅದೊಂದು ಬೀದಿನಾಯಿಯಷ್ಟೇ. ಅತ್ಯಾಚಾರ ಸಂತ್ರಸ್ತೆ ಆಗಾಗ ಅದಕ್ಕೆ ಸ್ವಲ್ಪ ಆಹಾರ ನೀಡುತ್ತಿದ್ದಳು. ಈ ಘಟನೆ ನಡೆದಿದ್ದು ಭಾನುವಾರ. ಅಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಯುವತಿ ತನ್ನ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಳು.

ಆ ನಾಯಿಯು ಕೂಡ ಮನೆಯ ಕೋಣೆಯ ಮೂಲೆಯಲ್ಲಿ ಮಲಗಿಕೊಂಡಿತ್ತು. ಯಾರೋ ಬಾಗಿಲು ಬಡಿದ ಶಬ್ದವಾಯಿತು ಎಂದು ಸಂತ್ರಸ್ತೆ ಬಂದು ಬಾಗಿಲು ತೆರೆದಿದ್ದಾಳೆ, ಏಕಾಏಕಿ ಏಕಿ ಆಗಂತುಕ ಸುನಿಲ್ ಒಳನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದೇ ವೇಳೆ ಘಟನೆಯನ್ನು ಗಮನಿಸುತ್ತಿದ್ದ ನಾಯಿ ಓಡಿ ಬಂದು ಕಾಮುಕನ ಮೇಲೆ ದಾಳಿ ಮಾಡಿದೆ ಆ ಸಂದರ್ಭದಲ್ಲಿ ಕೋಪಗೊಂಡ ಸುನಿಲ್ ನಾಯಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಚೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications