ಭೋಪಾಲ್ ನಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಉಮಾಭಾರತಿ ಸ್ಪರ್ಧೆ?
ಭೋಪಾಲ್, ಏಪ್ರಿಲ್ 04: ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಉಮಾ ಭಾರತಿ ಅವರು ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಅವರ ವಿರುದ್ಧ ಚುನಾವಣಾ ಕಣಕ್ಕಿಳಿಯಲಿದ್ದಾರಾ?
ಮಧ್ಯಪ್ರದೇಶದಲ್ಲಿ ಈ ವದಂತಿ ಹಬ್ಬಿದ್ದು, ಅದಕ್ಕೆ ಸ್ವತಃ ಉಮಾಭಾರತಿ ಪ್ರತಿಕ್ರಿಯೆ ನೀಡಿದ್ದಾರೆ.
"ದಿಗ್ವಿಜಯ್ ಸಿಂಗ್ ಅವರನ್ನು ಸೋಲಿಸುವ ನನ್ನ ಕೆಲಸವನ್ನು ನಾನು ಈಗಾಗಲೇ ಮುಗಿಸಿದ್ದೇನೆ. ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಹೇಳಿದ್ದೇನೆ. ಆದ್ದರಿಂದ ಭೋಪಾಲದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷವೇ ನಿರ್ಧರಿಸಲಿದೆ" ಎಂದು ಉಮಾ ಭಾರತಿ ಹೇಳಿದರು.

"ಭೋಪಾಲ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರ ನನಗಿಲ್ಲ. ಇದನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ. ಪಕ್ಷದ ಅಭ್ಯರ್ಥಿ ಯಾರೇ ಆಗಿದ್ದರೂ ದಿಗ್ವಿಜಯ್ ಅವರನ್ನು ಸೋಲಿಸುವುದು ಕಷ್ಟವೇನಲ್ಲ" ಎಂದು ಉಮಾ ಭಾರತಿ ಹೇಳಿದರು.
ಮಧ್ಯಪ್ರದೇಶದಲ್ಲಿ ಮೇ 29 ರಿಂದ ನಾಲ್ಕು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು ಮೇ 23 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications