ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಅಡ್ಡ ನಿಂತ 'ನೋಟಾ'

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಅಡ್ಡ ನಿಂತ 'ನೋಟಾ' | Oneindia Kannada

ಭೋಪಾಲ್, ಡಿಸೆಂಬರ್ 13: ಪಂಚರಾಜ್ಯಗಳ ಚುನಾವಣೆ ಫಲಿತಾಂಶಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿದ್ದು ಮಧ್ಯಪ್ರದೇಶದ ಫಲಿತಾಂಶ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿಯಲ್ಲಿ ಕೊನೆಗೆ ಮ್ಯಾಜಿಕ್ ನಂಬರ್ 116 ದಾಟಿದ ಕಾಂಗ್ರೆಸ್ಸಿಗೆ ಅಧಿಕಾರ ಸ್ಥಾಪಿಸುವ ಅವಕಾಶ ಲಭ್ಯವಾಗಲಿದೆ.

ಮಧ್ಯಪ್ರದೇಶದಲ್ಲಿ ಈ ಮೂಲಕ 15 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶವನ್ನು ಗಮನಿಸಿದರೆ, ಗುಜರಾತ್, ಹಿಮಾಚಲಪ್ರದೇಶ ಚುನಾವಣೆಯಂತೆ ಪಂಚ ರಾಜ್ಯಗಳ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳ ಗೆಲುವಿಗೆ ನೋಟಾ ಅಡ್ಡಗಾಲಾಗಿ ನಿಂತಿದೆ.

ರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿದ 'ನೋಟಾ' ಪವರ್ ಫಲಿತಾಂಶರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿದ 'ನೋಟಾ' ಪವರ್ ಫಲಿತಾಂಶ

ಮಧ್ಯಪ್ರದೇಶದಲ್ಲಿ ನೋಟಾ ಶೇಕಡಾವಾರು ಮತಗಳಿಕೆ 1.5%ನಷ್ಟಿದೆ. ಸಮಾಜವಾದಿ ಪಕ್ಷಕ್ಕೆ ಶೇ 1ರಷ್ಟು ಮತ ಸಿಕ್ಕಿದೆ. ಎಎಪಿಗೆ ಶೇ 0.7 ಮತಗಳು ಮಾತ್ರ ಲಭಿಸಿವೆ.

ಒಟ್ಟಾರೆ, ಶೇಕಡಾವಾರು ಮತ ಗಳಿಕೆಯಲ್ಲಿ 5ನೇ ಸ್ಥಾನದಲ್ಲಿರುವ ನೋಟಾ ದೆಸೆಯಿಂದ ಸುಮಾರು 22 ಕ್ಷೇತ್ರಗಳ ಫಲಿತಾಂಶ ಉಲ್ಪಾ ಪಲ್ಪಾ ಆಗಿದೆ. ಬಹುತೇಕ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ.

ಶೇಕಡಾವಾರು ಮತ ಗಳಿಕೆ ಪ್ರಮಾಣ

ಶೇಕಡಾವಾರು ಮತ ಗಳಿಕೆ ಪ್ರಮಾಣ

ಡಿಸೆಂಬರ್ 11ರಂದು 8 ಗಂಟೆಗೆ ಆರಂಭವಾದ 230 ಕ್ಷೇತ್ರಗಳ ಮತ ಎಣಿಕೆ ಡಿ 12ರಂದು ಬೆಳಗ್ಗೆ ಮುಕ್ತಾಯ ಕಂಡಿತು. ಒಟ್ಟಾರೆ 5.4 ಮತಗಳ ಪೈಕಿ ನೋಟಾಕ್ಕೆ ಶೇ 1.4 ಪಾಲು ಸಿಕ್ಕಿದೆ. ಬಿಜೆಪಿ ಶೇ 41ರಷ್ಟು, ಕಾಂಗ್ರೆಸ್ ಶೇ 40.9ರಷ್ಟು ಗಳಿಸಿವೆ. ಬಿಎಸ್ಪಿ ಹಾಗೂ ಜಿಜಿಪಿ ಕ್ರಮವಾಗಿ ಶೇ 5 ಹಾಗೂ 1.8ರಷ್ಟು ಮತ ಗಳಿಕೆ ಪಡೆದಿವೆ.

ಮೋದಿ ಸರ್ಕಾರದ ಪತನಕ್ಕೆ ದಿನಗಣನೆ ಆರಂಭ : ಕೇಜ್ರಿವಾಲ್ಮೋದಿ ಸರ್ಕಾರದ ಪತನಕ್ಕೆ ದಿನಗಣನೆ ಆರಂಭ : ಕೇಜ್ರಿವಾಲ್

ಗ್ವಾಲಿಯರ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಿದ ನೋಟಾ

ಗ್ವಾಲಿಯರ್ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಸೋಲಿಸಿದ ನೋಟಾ

ಮಧ್ಯಪ್ರದೇಶದಲ್ಲಿ ಅತ್ಯಂತ ಕಡಿಮೆ ಅಂತರದ ಸೋಲು ಗ್ವಾಲಿಯರ್ ದಕ್ಷಿಣ ಕ್ಷೇತ್ರದಲ್ಲಿ ದಾಖಲಾಗಿದೆ. 121 ಮತಗಳ ಅಂತರದಿಂದ ಬಿಜೆಪಿಯ ನಾರಾಯಣ್ ಸಿಂಗ್ ಕುಶ್ವಾಹ ಸೋಲು ಕಂಡರು. ಕಾಂಗ್ರೆಸ್ಸಿನ ಪ್ರವೀಣ್ ಪಾಠಕ್ 56369 ಮತಗಳನ್ನು ಗಳಿಸಿದರೆ, ನಾರಾಯಣ್ ಸಿಂಗ್ 56248 ಮತ ಗಳಿಸಿದರು. ಇಲ್ಲಿ ನೋಟಾ 1550 ಗಳಿಸಿದೆ.

ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು! ಕಾಂಗ್ರೆಸ್ ಮುಕ್ತ ಈಶಾನ್ಯ ಭಾರತ, ಬಿಜೆಪಿ ಕನಸು ನನಸಾಯ್ತು!

ದಮೋಹ್ ನಲ್ಲೂ ಬಿಜೆಪಿಗೆ ನೋಟಾ ಅಡ್ಡಿಗಾಲು

ದಮೋಹ್ ನಲ್ಲೂ ಬಿಜೆಪಿಗೆ ನೋಟಾ ಅಡ್ಡಿಗಾಲು

ದಮೋಹ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಮಾಜಿ ವಿತ್ತ ಸಚಿವ ಜಯಂತ್ ಮಾಳವಿಯಾ ಅವರು 799 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನೋಟಾ ಇಲಿ 1299 ಮತಗಳನ್ನು ಗಳಿಸಿದೆ, ಜಬಲ್ ಪುರ್ ನಲ್ಲಿ ಶರದ್ ಜೈನ್ ಅವರು 578 ಮತಗಳಿಂದ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾ 1299 ಮತಗಳನ್ನು ಗಳಿಸಿದೆ.

ಕಾಂಗ್ರೆಸ್ಸಿಗೂ ಮುಳುವಾದ ನೋಟಾ

ಕಾಂಗ್ರೆಸ್ಸಿಗೂ ಮುಳುವಾದ ನೋಟಾ

ತಿಮಾರ್ನಿ ಕ್ಷೇತ್ರದಲ್ಲಿ 4,084 ನೋಟಾ ದಾಖಲಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಅಭಿಜಿತ್ ಸಹಾ ಅವರು 2,213 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ನಗೋಂದ್ ಕ್ಷೇತ್ರದಲ್ಲಿ ಯದ್ವೇಂದ್ರ ಸಿಂಗ್ ಅವರು 1234 ಅಂತರದಿಂದ ಸೋಲು ಕಂಡಿದ್ದರೆ, ನೋಟಾ 2301 ದಾಖಲಾಗಿದೆ.

English summary
In the hard-fought Madhya Pradesh assembly elections, which the Congress went on to win eventually, NOTA had the fifth largest tally. As per the statistics available, NOTA crossed the victory margins in 22 constituencies in MP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X