ಬಾಲಕಿಯ ಅತ್ಯಾಚಾರಿಗೆ 32 ದಿನಗಳಲ್ಲೇ ಗಲ್ಲು
ಭೋಪಾಲ್, ಜುಲೈ 12: ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ಭೋಪಾಲ್ ಸ್ಥಳೀಯ ನ್ಯಾಯಾಲಯವು ಕೇವಲ 32 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದೆ.
ಎಂಟು ವರ್ಷದ ಪುಟ್ಟ ಬಾಲಕಿಯನ್ನು ಅತ್ಯಾಚಾರ ಮಾಡಿ ಮಾಡಿದ್ದ ಅಪರಾಧಿ ಕೊಲೆಗೈದಿದ್ದ. ಇದನ್ನು ಅಪರೂಪದ ಹೇಯ ಪ್ರಕರಣ ಎಂದು ಪರಿಗಣಿಸಿದ ನ್ಯಾಯಾಧೀಶೆ ಕುಮುದಿನ ಪಟೇಲ್ ಅಪರಾಧಿ ವಿಷ್ಣು ಬಮೋರಾನಿಗೆ ಮರಣ ದಂಡನೆ ವಿಧಿಸಿದ್ದಾರೆ.
ಮಧ್ಯಪ್ರದೇಶದ ಕಮಲಾನಗರದಲ್ಲಿ ವಾಸವಾಗಿದ್ದ ಬಾಲಕಿ ಕಳೆದ ಜೂನ್ ಎಂಟರಂದು ಅಂಗಡಿಗೆ ತೆರಳಿದ್ದಾಗ ಈ ಅಪರಾಧಿ ಅಪಹರಿಸಿ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ, ಅತ್ಯಾಚಾರದ ಬಳಿಕ ಬಾಲಕಿಯನ್ನು ಕೊಲಗೈದು ಚರಂಡಿಯೊಂದರಲ್ಲಿ ಎಸೆದಿದ್ದ.ಅಪಹರಣ ನಡೆದ ಮರುದಿನ ಬಾಲಕಿಯ ಶವ ಪತ್ತೆಯಾಗಿತ್ತು. ಎರೆಡು ದಿನಗಳ ಬಳಿಕ ಅಪರಾಧಿ ವಿಷ್ಣುವನ್ನು ಕೂಡ ಪೊಲೀಸರು ಬಂಧಿಸಿದ್ದರು.

ಅತ್ಯಾಚಾರ ಪ್ರಕರಣಗಳ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿಣ ಕಾನೂನನನ್ನು 2018ರಲ್ಲಿ ಮಧ್ಯ ಪ್ರದೇಶ ಸರ್ಕಾರ ಜಾರಿಗೊಳಿಸಿದ ಬಳಿಕ ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ವಿಚಾರಣೆ ತ್ವರಿತಗೊಳ್ಳುತ್ತಿದೆ. ಹೀಗಾಗಿ ಘಟನೆ ನಡೆದ 32ನೇ ದಿನಗಳಲ್ಲಿ ಈ ಪ್ರಕರಣದಲ್ಲಿ ಮರಣ ದಂಡನೆಯನ್ನೂ ವಿಧಿಸಲಾಗಿದೆ.
ಅಂದಹಾಗೆ ಹೊಸ ಕಾನೂನಿನ ಬಳಿಕ ಗಲ್ಲು ಶಿಕ್ಷೆ ವಿಧಿಸುತ್ತಿರುವ 27ನೇ ಪ್ರಕರಣ ಇದಾಗಿದೆ.












Click it and Unblock the Notifications