ಉಮಾ ಥಿಯೇಟರ್ ಎದುರಿನ ಸಂತೋಷ್ ಸಾಗರ್ ಚಾಟ್ಸ್ ತಿಂದಿದ್ದೀರಾ?
ಚಾಮರಾಜಪೇಟೆಯಲ್ಲಿರುವ ಉಮಾ ಥಿಯೇಟರ್ ನ ಎದುರಿಗೆ ನೆಲ ಮಾಳಿಗೆಯಲ್ಲಿ ಸಂತೋಷ್ ಸಾಗರ್ ಎಂಬ ಅಂಗಡಿ ಇದೆ. ಅಲ್ಲಿನ ಕಟ್ಲೇಟ್ ಮಸಾಲ, ಮಿಕ್ಸ್ ಕುರ್ಮಾ, ಗಡ್ ಬಡ್, ಮಸಾಲ ಫಾಂಟ...ಇನ್ನೂ ಹಲವು ಖಾದ್ಯ-ಪಾನೀಯ ಬಲೇ ರುಚಿಯಾಗಿರುತ್ತದೆ
ಬೆಂಗಳೂರು, ಫೆಬ್ರವರಿ 25: ವಾರದ ಕೊನೆಗೆ ಬಿಡುವಾದರೆ ಸಂಜೆ ಮೇಲೆ ಸುತ್ತಾಡಿ ಬರೋಣ, ಪಾನಿಪುರಿ-ಮಸಾಲೆಪುರಿ ತಿಂದು ಬರೋಣ ಎಂದು ನೀವಂದುಕೊಳ್ಳುತ್ತಿದ್ದರೆ ನಮ್ಮದೊಂದು ಸಲಹೆ ಇದೆ. ಚಾಮರಾಜಪೇಟೆಯ ಉಮಾ ಥಿಯೇಟರ್ ಗೊತ್ತಲ್ಲ ಅದರ ಮುಂಭಾಗದ ಗೇಟ್ ನ ಎದುರಿಗೆ ಅಂದರೆ ರಸ್ತೆ ದಾಟಿದರೆ ಸಂತೋಷ್ ಸಾಗರ್ ಎಂಬ ಚಾಟ್ಸ್ ಅಂಗಡಿ ಇದೆ.
ಈ ಚಾಟ್ಸ್ ಅಂಗಡಿ ಇಪ್ಪತ್ತು-ಇಪ್ಪತ್ತೈದು ವರ್ಷದಿಂದ ಇಲ್ಲಿದ್ದು, ಬೆಂಗಳೂರು ಹೈಸ್ಕೂಲ್ ಈ ಹಿಂದೆ ಅದೇ ರಸ್ತೆಯಲ್ಲಿರುವಾಗ ಸದಾ ಕಿಕ್ಕಿರಿದಿರುತ್ತಿತ್ತು. ಈ ಅಂಗಡಿ ಇರುವುದು ನೆಲಮಾಳಿಗೆಯಲ್ಲಿ ಆದ್ದರಿಂದ ಸುಲಭಕ್ಕೆ ಕಣ್ಣಿಗೆ ಬೀಳುವುದು ಕಷ್ಟ. ಇಲ್ಲಿ ಮಸಾಲ ಕಟ್ಲೇಟ್, ಮಿಕ್ಸ್ ಕುರ್ಮಾ, ಮಸಾಲ ಥಮ್ಸ್ ಅಪ್, ಗಡ್ ಬಡ್, ಪಾನಿಪುರಿ, ಮಸಾಲಪುರಿ, ಸೇವ್ ಪುರಿ ಇನ್ನೊಂದಷ್ಟು ಸಿಗುತ್ತದೆ.[ಜಯನಗರ ಸಬ್ಜ್ ಹೋಟೆಲ್ ನ ಬೊಂಬಾಟ್ ಊಟ ಇನ್ನೂ ಮಾಡಿಲ್ವ!]

ಅದರೆ, ಇಲ್ಲಿ ಮಸಾಲ ಕಟ್ಲೇಟ್ ಖಂಡಿತಾ ತಿನ್ನಬೇಕು. ಜತೆಗೆ ಮಸಾಲ ಫಾಂಟ ಅಥವಾ ಕೋಕ್ ಅಥವಾ ಗಡ್ ಬಡ್ ಪ್ರಯತ್ನಿಸಿ. ಅದಾದ ಮೇಲೆ ಮಿಕ್ಸ್ ಕುರ್ಮಾ ಬಹಳ ಚೆನ್ನಾಗಿರುತ್ತದೆ. ಮಧ್ಯಾಹ್ನದ ವೇಳೆಗೆಲ್ಲ ಅಂಗಡಿ ತೆರೆದಿರುತ್ತಾರೆ. ಕೆಲವೊಮ್ಮೆ ಭಾನುವಾರಗಳಲ್ಲಿ ರಜಾ ಇರುತ್ತದೆ. ರೋಸ್ಟ್ ಮಾಡಿದ ಕಟ್ಲೇಟ್ ಗೆ ಮಸಾಲ, ಈರುಳ್ಳಿ, ಬಟಾಣಿ ಹಾಗೂ ಬೂಂದಿ ಹಾಕಿ ಕೊಡುತ್ತಾರೆ.[ಬೆಂಗಳೂರಿನಲ್ಲಿ ಬೊಂಬಾಟ್ ಬಂಗಾರಪೇಟೆ ಪಾನಿಪುರಿ ಟೇಸ್ಟ್ ಮಾಡಿ]
ವಿಪರೀತ ಬಿಸಿ ಇರುತ್ತದೆ. ರುಚಿ ಬಹಳ ಚಂದ. ಉಮಾ ಥಿಯೇಟರ್ ಗೆ ಬಹಳ ಸಲ ಹೋಗಿರುವವರಿಗೆ ಈ ಅಂಗಡಿ ಹೊಸದಲ್ಲ. ಆದರೆ ಈ ವರೆಗೆ ನಾನು ಹೋಗೇ ಇಲ್ಲ ಅಂದುಕೊಳ್ಳುವವರು ರುಚಿ ನೋಡಬಹುದು.












Click it and Unblock the Notifications