ಸಾಲ ಮಾಡ್ಬೇಡಿ ಎದ್ಹೇಳಿ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ
ಬೆಂಗಳೂರು, ಜನವರಿ 06 : ಫೈನಾನ್ಸ್ ನವರ ಕಿರುಕುಳ ಹಾಗೂ ಲವ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಶನಿವಾರ ನಡೆದಿದೆ
26 ವರ್ಷದ ರಾಜೇಶ್ ನೇಣಿಗೆ ಶರಣಾದ ಯುವಕ. ಸಾಲ ಮಾಡಿರುವುದು ನಾನು. ಹೀಗಾಗಿ ನನ್ನ ಕುಟುಂಬದವರಿಗೆ ಯಾರೂ ತೊಂದರೆ ಕೊಡಬೇಡಿ. ಹಾಗೂ ಯಾರು ಸಾಲ ಮಾಡಬೇಡಿ ಎಂದು ವಿಡಿಯೋದಲ್ಲಿ ಹೇಳಿ ಆತ್ನಹತ್ಯೆ ಮಾಡಿಕೊಂಡಿದ್ದಾನೆ.
ರಾಜೇಶ್ ಫೈನಾನ್ಸ್ ವೊಂದರಲ್ಲಿ 25 ಸಾವಿರ ರು. ಸಾಲ ಪಡೆದಿದ್ದರು. ಸಾಲವನ್ನು ಹಿಂದಿರುಗಿಸುವಂತೆ ಫೈನಾನ್ಸ್ ನವರು ಕಿರುಕುಳ ನೀಡುತ್ತಿದ್ದರಿಂದ ಮನನೊಂದು ರಾಜೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಸೆಲ್ಫಿ ವಿಡಿಯೋದಲ್ಲೇನಿದೆ?: ಸಾಲ ಮಾಡಿರುವುದು ನಾನು. ಹೀಗಾಗಿ ನನ್ನ ಕುಟುಂಬದವರಿಗೆ ಯಾರೂ ತೊಂದರೆ ಕೊಡಬೇಡಿ.ಯಾರೂ ಸಾಲ ಮಾಡಬೇಡಿ.
ತುಂಬಾ ನೋವು ಕೊಟ್ಬಿಟ್ಟೆ ಕಣೇ, ನಿನ್ನ ನಂಬಿದ್ದೆ. ನಿನಗೋಸ್ಕರ ಹೇಳಿದ್ದೆಲ್ಲಾ ಮಾಡಿದ್ದೆ. ನನ್ನ ಜೊತೆಯೇ ಇರುತ್ತೇನೆ ಎಂದು ಮಾತು ಕೊಟ್ಟೆ. ಆದರೆ, ನೀನು ಮೋಸ ಮಾಡಿಬಿಟ್ಟೆ. ಐ ಲವ್ ಯು ರಾ.. ಎಂದು ಹುಡುಗಿಯೊಬ್ಬಳ ಬಗ್ಗೆ ಮಾತನಾಡಿದ್ದಾರೆ.
ಅಮ್ಮ ಸಾರಿ, ಐ ಲವ್ ಯು ಅಮ್ಮ. ಸಾರಿ ಗುಡ್ ಬೈ ಎಂದು ಹೇಳಿದ್ದಾರೆ. ಸಾಲ ಪಡೆದಿದ್ದು ನಾನು ಡಾಕ್ಯೂಮೆಂಟ್ ಗೆ ಸಹಿ ಹಾಕಿರೋದು ನಾನು. ನನ್ನ ಕುಟುಂಬಕ್ಕೆ ಏನು ಮಾಡಬೇಡಿ ಎಂದು ಹೇಳಿ ಸ್ನೇಹಿತರಿಗೆಲ್ಲಾ ಸಾರಿ ಕೇಳಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.












Click it and Unblock the Notifications