ಮೆಟ್ರೋದಲ್ಲಿ ಯುವತಿ ಜತೆ ಅಸಭ್ಯ ವರ್ತನೆ ಮಾಡಿದವನಿಗೆ ಧರ್ಮದೇಟು

ಬೆಂಗಳೂರು, ಡಿಸೆಂಬರ್ 5: ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ ಪ್ರಕರಣಗಳು ಹೆಚ್ಚಾಗುತ್ತಿವೆ.

ನಮ್ಮ ಮೆಟ್ರೋ ಮಹಿಳೆಯರಿಗಾಗಿಯೇ ಎರಡು ಬಾಗಿಲುಗಳನ್ನು ಮೀಸಲಿಟ್ಟಿದೆ, ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಆರಂಭಿಸಲಾಗಿರುವ ಆರು ಬೋಗಿಗಳ ಮೆಟ್ರೋದಲ್ಲಿ ಒಂದು ಬೋಗಿಯನ್ನೇ ಮಹಿಳೆಯರಿಗೆ ಮೀಸಲಿಡಲಾಗಿದೆ. ಆದರೂ ಕೆಲವರು ಅವರಿಗೆ ನಿಗದಿಪಡಿಸಿರುವ ಸ್ಥಳ ಬಿಟ್ಟು ಬೇರೆಡೆಗೆ ಹತ್ತುತ್ತಾರೆ ಹಾಗಾಗಿ ಕೆಲವು ಪ್ರಕರಣಗಳಿಗೆ ಅವರೇ ಎಡೆಮಾಡಿಕೊಟ್ಟಂತಾಗುತ್ತದೆ.

ಮೆಟ್ರೋದಲ್ಲಿ ಖಾಸಗಿ ಕಂಪನಿ ಮಹಿಳಾ ಉದ್ಯೋಗಿ ಜೊತೆ ಅನುಚಿತ ವರ್ತನೆ ನಡೆಸಿದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿ ಸುಬ್ರಹ್ಮಣ್ಯನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ನೆಲಮಂಗಲದ ಲೋಕೇಶ್ ಬಂಧಿತ, ಈತ ಖಾಸಗಿ ಕಂಪನಿ ಉದ್ಯೋಗಿಯಾದ ಸಂತ್ರಸ್ತೆ, ಮೆಜೆಸ್ಟಿಕ್ ನಿಂದ ಮೆಟ್ರೋದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಆ ವೇಳೆ ಅವರ ಹಿಂಬದಿ ನಿಂತಿದ್ದ ಆರೋಪಿ, ಸಂತ್ರಸ್ತೆಯನ್ನು ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಬಳಿಕ ಶ್ರೀರಾಂಪುರ ನಿಲ್ದಾಣದಲ್ಲಿ ಪರಾರಿಯಾಗಲು ಯತ್ನಿಸಿದ್ದು, ಪ್ರಯಾಣಿಕರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Youth assaulted in metro after eve teasing

ಮಹಿಳೆಯರಿಗಾಗಿ ಮೆಟ್ರೋದಲ್ಲಿ ಮೀಸಲಿರುವ ಪ್ರದೇಶದಲ್ಲಿಯೇ ಇರುವುದು ಸೂಕ್ತ, ಇಲ್ಲವಾದಲ್ಲಿ ಇಂತಹ ಘಟನೆಗಳು ಸಂಭವಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎನ್ನುವುದು ನಮ್ಮ ಅಭಿಪ್ರಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+