ಟ್ರಾಫಿಕ್ ನಿಯಮಗಳ ಉಲ್ಲಂಘನೆ: ದಂಡದ ಮೊತ್ತ ಹೆಚ್ಚಳ, ಯಾವುದಕ್ಕೆ ಎಷ್ಟು?

ಬೆಂಗಳೂರು, ಡಿಸೆಂಬರ್ 11: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ 100 ರೂ ದಂಡ ಕಟ್ಟಿ ಹೋಗಬಹುದು ಅದೇನು ಮಹಾ ಎಂದುಕೊಂಡಿದ್ದೀರಾ? ಟ್ರಾಫಿಕ್ ನಿಯಮಗಳ ಉಲ್ಲಂಘಿಸಿದರೆ ಕಟ್ಟುವ ದಂಡದ ಮೊತ್ತವನ್ನು ಹೆಚ್ಚಿಸಿ ಸಾರಿಗೆ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಎಲ್ಲೆಂದರಲ್ಲಿ ಮನ ಬಂದಂತೆ ವಾಹನಗಳನ್ನು ನಿಲ್ಲಿಸಿದರೆ ಇನ್ನುಮುಂದೆ 100 ರೂ ಅಲ್ಲ 1 ಸಾವಿರ ರೂ ಕಟ್ಟಬೇಕಾಗುತ್ತದೆ. ಮೊದಲ ಬಾರಿ ಅಕ್ರಮವಾಗಿ ವಾಹನಗಳನ್ನು ಪಾರ್ಕ್ ಮಾಡಿದಲ್ಲಿ 1 ಸಾವಿರ ರೂ ದಂಡ, ಎರಡನೇ ಬಾರಿಯೂ ಅದೇ ತಪ್ಪು ಮುಂದುವರೆದರೆ 2 ಸಾವಿರ ರೂ ದಂಡ ತೆರಬೇಕಾಗುತ್ತದೆ.

ಯಾವುದೆಕ್ಕೆ ಎಷ್ಟು ದಂಡ: ಅಕ್ರಮ ಪಾರ್ಕಿಂಗ್ ಅಷ್ಟೇ ಅಲ್ಲದೆ ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ, ವಿಮೆ ಇಲ್ಲದೆ ವಾಹನ ಓಡಿಸುವುದು, ನೋಂದಣಿ ಪೇಪರ್ ಇಲ್ಲದೆ ವಾಹನ ಚಲಾಯಿಸಿದರೂ ದಂಡ ಕಟ್ಟಬೇಕಾಗುತ್ತದೆ.

You may have to pay Rs1,000 as fine for parking violation

ದಂಡದ ಮೊತ್ತ ಹೆಚ್ಚಿಸುವುದರಿಂದ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುವಾಗ ಹಲವು ಮಾರಿ ಆಲೋಚನೆ ಮಾಡಬೇಕಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟೋಯಿಂಗ್ ವಾಹನಗಳಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ಕೊಂಡೊಯ್ದರೆ ದ್ವಿಚಕ್ರ ವಾಹನಕ್ಕೆ 750 ರೂ ಹಾಗೂ ಅಕ್ರಮವಾಗಿ ಕಾರು ಪಾರ್ಕಿಂಗ್ ಮಾಡಿದರೆ 1,100 ರೂ ದಂಡ ನೀಡಬೇಕು.

ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದರೆ 200ರಿಂದ 500 ರೂ ವರೆಗೂ ನೀಡಬೇಕಾಗುತ್ತದೆ. ನೋಂದಣಿ ಆಗದ ವಾಹನಗಳಿದ್ದರೆ 5 ಸಾವಿರ ರೂ ದಂಡ ವಿಧಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+