ಮೆಜೆಸ್ಟಿಕ್‌ನಿಂದ ಹೊರಡಲಿದೆ ಯಶವಂತಪುರ-ಕಾರವಾರ ರೈಲು

ಬೆಂಗಳೂರು, ಸೆಪ್ಟೆಂಬರ್ 18: ನೈಋತ್ಯ ರೈಲ್ವೆ ಯಶವಂತಪುರ- ಕಾರವಾರ-ಯಶವಂತಪುರ ವಿಶೇಷ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಸೆ. 19ರಿಂದ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ.

ರೈಲು ನಂಬರ್ 06585/06586 ಯಶವಂತಪುರ-ಕಾರವಾರ-ಯಶವಂತಪುರ ವಿಶೇಷ ರೈಲು ಇನ್ನು ಮುಂದೆ ಯಶವಂತಪುರದ ಬದಲು ಕೆಎಸ್ಆರ್‌ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ರೈಲು ನಂಬರ್ 06585 ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ 6.20ಕ್ಕೆ ಹೊರಡಲಿದೆ. ಇನ್ನು ಮುಂದೆ ರೈಲು ಕೆಎಸ್ಆರ್ ಬೆಂಗಳೂರು-ಕಾರವಾರ ಎಕ್ಸ್‌ಪ್ರೆಸ್ ವಿಶೇಷ ರೈಲು ಎಂಬ ಹೆಸರಿನಲ್ಲಿ ಸಂಚಾರ ನಡೆಸಲಿದೆ. ಸೆ. 19ರಿಂದಲೇ ಈ ಬದಲಾವಣೆಯಾಗಲಿದೆ.

Yesvantpur Karwar Special Train Will Start From KSR Bengaluru

ಕೆಎಸ್ಆರ್‌ ಬೆಂಗಳೂರು ನಿಲ್ದಾಣದಿಂದ ಹೊರಡುವ ರೈಲು ಯಶವಂತಪುರ, ಚಿಕ್ಕಬಣಾವರ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರೋಡ್, ಕಾಣಿಯೂರು, ಬಂಟ್ವಾಳ ಮೂಲಕ ಕಾರವಾರಕ್ಕೆ ಸಂಚಾರ ನಡೆಸಲಿದೆ.

ರೈಲು ನಂಬರ್ 0686 ಸಂಜೆ 6 ಗಂಟೆಗೆ ಕಾರವಾರದಿಂದ ಹೊರಡಲಿದೆ. ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣವನ್ನು 8 ಗಂಟೆಗೆ ತಲುಪಲಿದೆ. ಇಷ್ಟು ದಿನ ಯಶವಂತಪುರದ ತನಕ ಮಾತ್ರ ರೈಲು ಸಂಚಾರ ನಡೆಸುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+