ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಂದಿದ್ದ ಸತಿ ಬಂಧನ

ಬೆಂಗಳೂರು, ಏಪ್ರಿಲ್ 30 : ತನ್ನ ಪತಿಯನ್ನು ತಾನೇ ಚಾಕುವಿನಿಂದ ಇರಿದು ಇರಿದು ಕೊಂದಿದ್ದ ಪತ್ನಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುದ ಮೋಹನ್ ನಗರದಲ್ಲಿ ದಂಪತಿ ವಾಸವಾಗಿದ್ದರು. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಪತ್ನಿಯೇ ರಾತ್ರಿ ಗಂಡ ಮನೆಗೆ ಬಂದ ಸಂದರ್ಭದಲ್ಲಿ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಂದಿದ್ದಳು. ಆರೋಪಿ ರಾಣಿಯನ್ನು ಬಂಧಿಸಲಾಗಿದೆ.

ಆಂಧ್ರ ಪ್ರದೇಶದಿಂದ ಬಂದ ಮೋಹನ್ ನಗರದಲ್ಲಿ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು. ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿ ವಾಸವಿದ್ದ ಕುಟುಂಬವದು. ಕಳೆದ ಎರಡು ದಿನಗಳ ಹಿಂದೆ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಕ್ಕಳು ನೆರೆಹೊರೆಯವರನ್ನು ಕರೆದ ಬಳಿಕ ಕೊಲೆೆೆಯಾಗಿರೋದು ಗೊತ್ತಾಗಿತ್ತು. ಯಶವಂತಪುರ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದರು. ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ವೃತ್ತಿಯಿಂದ ಅಕೌಂಟೆಂಟ್ ಆಗಿದ್ದ ಶಂಕರ್ ರೆಡ್ಡಿ, ಪತ್ನಿ ರಾಣಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ವೇಳೆ ಪರಿಶೀಲಿಸಿದಾಗ ರಾಣಿ ಉಸಿರಾಡುತ್ತಿರೋದು ಗೊತ್ತಾಗಿತ್ತು. ತಕ್ಷಣವೇ ಆಕೆಯನ್ನು ಆಸ್ಪತ್ರೆೆಗೆ ಸೇರಿಸಲಾಗಿತ್ತು.

Yeshwantpur police Arrested woman who killed her husband

ಸತ್ತವಳಂತೆ ನಟಿಸಿ, ಮಾಂಗಲ್ಯ ಸರ ಕದ್ದ ಕತೆ ಕಟ್ಟಿದ್ದಳು..

ಯಶವಂತಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದರು. ಈ ವೇಳೆ ಮನೆಗೆ ಹೊರಗಿನವರು ಬಂದು ಹೋದ ಬಗ್ಗೆ ಮಾಹಿತಿ ಲಭ್ಯವಾಗಲಿಲ್ಲ. ಪತ್ನಿಯನ್ನು ವಿಚಾರಿಸಿದಾಗ ಯಾರೋ ಅಪರಿಚಿತ ಬಂದು ಚಾಕುವಿನಿಂದ ಇರಿದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ, ನೀವು ಬರದಿದ್ದರೇ ತಾನೂ ಸಾಯುತ್ತಿದ್ದೆ ಎಂದು ಕತೆ ಕಟ್ಟಿದ್ದಳು. ಆ ಬಳಿಕ ಆಕೆಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ತಾನೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯ ಮಾಂಗಲ್ಯಸರವು ಪೊಲೀಸರಿಗೆ ಪತ್ತೆಯಾಗಿದೆ.

ರಾಣಿಗಿತ್ತು ಅಕ್ರಮ ಸಂಬಂಧ:

ಶಂಕರ್ ಮತ್ತು ರಾಣಿ ಮೂಲತಃ ಆಂಧ್ರಪ್ರದೇಶದವರು. ರಾಣಿಗೆ ಆಂಧ್ರಪ್ರದೇಶದಲ್ಲಿ ವ್ಯಕ್ತಿಯೊಬ್ಬನ ಜೊತೆಗೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದಳು. ಆಂಧ್ರ ಪ್ರದೇಶದಲ್ಲಿದ್ದಾಗ ಪತಿ ಹೊರಗಡೆೆ ಹೋದಾಗ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಲವ್ವಿಡವ್ವಿ ಶುರುವಿಟ್ಟುಕೊಳ್ಳುತ್ತಿದ್ದರಂತೆ. ಆದರೆ, ಪತಿ ಶಂಕರ್ ರೆಡ್ಡಿ ಒಂದು ತಿಂಗಳ ಹಿಂದೆ ಬೆಂಗಳೂರಿಗೆ ಪತ್ನಿಯನ್ನು ಕರೆದುಕೊಂಡು ಬಂದು ಎಂಕೆ ನಗರದಲ್ಲಿ ಬಾಡಿಗೆ ಮನೆಯನ್ನು ಮಾಡಿದ್ದ. ಇದರಿಂದಾಗಿ ರಾಣಿಗೆ ತನ್ನ ಪ್ರಿಯಕರನನ್ನು ಸೇರಲು ಅಡ್ಡಿಯಾಗಿತ್ತು. ಪತಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ್ದಳು. ತನ್ನ ಪ್ರಿಯಕರನಿಗೂ ಹೇಳಿ ತನ್ನ ಪತಿ ರಾತ್ರಿ 12 ನಂತರ ಬರುತ್ತಾನೆ. ಆ ಬಳಿಕ ಆತನನ್ನು ಕೊಲ್ಲುವುದಾಗಿ ತಿಳಿಸಿದ್ದಳು. ಅದರಂತೆ ಪತಿ ಮನೆಗೆ ಬಂದು ಮಲಗಿದ್ದ ವೇಳೆ ಕುತ್ತಿಗೆ ಮತ್ತು ಹೊಟ್ಟೆೆಗೆೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ.

Yeshwantpur police Arrested woman who killed her husband

ಪತಿ ವಿಲವಿಲ ಒದ್ದಾಡಿ ಸಾಯೋದನ್ನು ನೋಡುತ್ತಿದ್ದ ಪತ್ನಿ

ಪತ್ನಿ ರಾಣಿ ಪತಿಯ ಕುತ್ತಿಗೆ ಮತ್ತು ಹೊಟ್ಟೆಗೆ ಇರಿದ ಬಳಿಕ ಪತಿ ವಿಲವಿಲ ಒದ್ದಾಡಿ ಸಾಯೋದನ್ನು ನೋಡಿದ್ದಾಳೆ. ಈ ಆ ಬಳಿಕ ತನ್ನ ಕೈಯನ್ನು ತಾನೇ ಕೂಯ್ದುಕೊಂಡಿದ್ದಾಳೆ. ಪತಿಯ ಸಮೀಪವೇ ತಾನೂ ಬಿದ್ದಿದ್ದಾಳೆ. ಏಳು ವರ್ಷದ ಮಗ ಎದ್ದು ತಂದೆ ತಾಯಿ ರಕ್ತತದ ಮಡುವಿನಲ್ಲಿ ಬಿದ್ದಿರೋದು ನೋಡಿ ನೆೆರೆಹೊರೆಯವರಿಗೆ ತಿಳಿಸುವವರೆಗೂ ತಾನೂ ಸತ್ತವಳಂತೆ ನಟಿಸಿದ್ದಾಳೆ. ಇನ್ನು ಯಶವಂತಪುರ ಪೊಲೀಸರು ರಾಣಿಯನ್ನು ಬಂಧಿಸಿದ್ದಾರೆ. ಕೊಲೆಗೆ ಪ್ರೇರೇಪಣೆಯನ್ನು ಕೊಟ್ಟ ಪ್ರಿಯಕರನಿಗಾಗಿ ಪೊಲೀಸರು ಬಲೆ ಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+