ಕುಖ್ಯಾತ ರೌಡಿ ಜಮ್ ಶೀದ್ ಖಾನ್ ಬಂಧಿಸಿದ ಯಶವಂತಪುರ ಪೊಲೀಸರು
ಬೆಂಗಳೂರು, ಅ. 8: ಯಶವಂತಪುರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಶರೀಫ್ ನಗರ ನಿವಾಸಿ ಜಮ್ ಶೀದ್ ಅಲಿಯಾಸ್ ಜಮ್ ಶೀದ್ ಖಾನ್(35) ಗೂಂಡಾಕಾಯ್ದೆಯಲ್ಲಿ ಬಂಧಿಸಲಾಗಿದೆ.
ಬೆಂಗಳೂರು ನಗರದ ಯಶವಂತಪುರ, ಪೀಣ್ಯ, ಆರ್.ಎಂ.ಸಿ.ಯಾರ್ಡ್, ಸೋಲದೇವನಹಳ್ಳಿ, ರಾಜಗೋಪಾಲನಗರ, ಶಿವಾಜಿನಗರ, ಆಡುಗೋಡಿ, ಮೈಕೋಲೇಔಟ್, ಸಿದ್ದಾಪುರ ಪೊಲೀಸ್ ಠಾಣೆಗಳಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಕೊಲೆ ಪ್ರಯತ್ನ, ಸುಲಿಗೆ, ದರೋಡೆ, ಕೊಲೆ ಬೆದರಿಕೆ, ದೊಂಬಿ, ಗಾಂಜಾ ಮಾರಾಟ, ಕನ್ನಾ ಕಳವು, ಹಲ್ಲೆ ಹಾಗೂ ಇತರೆ ಹಲವು ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ.
2004 ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಈತನ ವಿರುದ್ಧ ಮೇಲ್ಕಂಡ ಪೊಲೀಸ್ ಠಾಣೆಗಳಲ್ಲಿ 2004 ರಿಂದ 2020 ನೇ ಸಾಲಿನ ಆಗಸ್ಟ್ ವರೆಗೆ ಕೊಲೆ ಪ್ರಯತ್ನ, ಸುಲಿಗೆ, ದರೋಡೆ, ಕೊಲೆ ಬೆದರಿಕೆ, ದೊಂಬಿ, ಗಾಂಜಾ ಮಾರಾಟ, ಕನ್ನಾ ಕಳವು, ಹಲ್ಲೆಯಂಥ ಒಟ್ಟು 22 ಪ್ರಕರಣಗಳು ದಾಖಲಾಗಿರುತ್ತವೆ. ಈತನು ಜೈಲಿನಿಂದ ಬಿಡುಗಡೆಯಾಗಿ ಬಂದ ತಕ್ಷಣದಿಂದ ಅಪರಾಧ ಕೃತ್ಯವೆಸಗುವ ಪ್ರವೃತ್ತಿಯುಳ್ಳವನಾಗಿರುತ್ತಾನೆ.

ಜೈಲಿನಿಂದ ಬಿಡುಗಡೆಯಾಗಿ ಬಂದು ಯಶವಂತಪುರ, ಆರ್.ಎಂ.ಸಿ.ಯಾರ್ಡ್, ಪೀಣ್ಯ, ರಾಜಗೋಪಾಲನಗರ ಪೊಲೀಸ್ ಠಾಣೆಗಳಲ್ಲಿನ ಗಾಂಜಾ ಮಾರಾಟ, ಸುಲಿಗೆ, ಕನ್ನಾ ಕಳವು, ಹಲ್ಲೆಯಂತಹ ಕೃತ್ಯವೆಸಗಿರುತ್ತಾನೆ. ಈತನು ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವುದರಿಂದ ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧನ ಮಾಡಲಾಗಿದೆ.
ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಮಹಮ್ಮದ್ ಮುಕಾರಮ್, ಪೊಲೀಸ್ ಇನ್ಸ್ ಪೆಕ್ಟರ್, ಯಶವಂತಪುರ ಪೊಲೀಸ್ ಠಾಣೆ ರವರು ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿರುತ್ತಾರೆ.












Click it and Unblock the Notifications