Namma Metro: ಮೆಟ್ರೋ ಹಳದಿ ಮಾರ್ಗ ಕಾರ್ಯಚರಣೆ 01 ವರ್ಷ ವಿಳಂಬ! ಪ್ರಯಾಣಿಕರಿಗೆ ನಿರಾಸೆ

ಬೆಂಗಳೂರು, ಫೆಬ್ರವರಿ 01: ಬೆಂಗಳೂರು ನಮ್ಮ ಮೆಟ್ರೋ ಜಾಲ ವಿಸ್ತರಣೆಯಲ್ಲಿನ ವಿಳಂಬಕ್ಕೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. BMRCL ಯೋಜನೆಗಳಲ್ಲಿ ಕಾರ್ಯಾಚರಣೆ ಆರಂಭಿಬೇಕಿರುವ ಡ್ರೈವರ್‌ಲೆಸ್ ರೈಲುಗಳು ಹಳದಿ ಮೆಟ್ರೋ ಮಾರ್ಗದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುವುದು ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ. ಐಟಿ ಉದ್ಯೋಗಿಗಳು ಸೇರಿದಂತೆ ಬೆಂಗಳೂರಿನ ಲಕ್ಷಾಂತರ ಜನರು ಅಪ್ಡಟ್‌ಗೆ ಕಾಯುತ್ತಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳ ಸಮ್ಮುಖದಲ್ಲಿ ಜನವರಿ 06ರಂದು ಕೊಲ್ಕತ್ತಾ ಟಿಟಾಗರ್ ರೈಲ್ ಸಿಸ್ಟಮ್‌ನಿಂದ ರೈಲು ಪೂರೈಕೆಗೆ ಚಾಲನೆಯೇನೋ ನೀಡಲಾಯಿತು. ಜನವರಿ ಅಂತ್ಯಕ್ಕೆ ಬರಬೇಕಿದ್ದ ಡ್ರೈವರ್ ಲೆಸ್ ರೈಲು ಬೆಂಗಳೂರಿಗೆ ಬಂದಿಲ್ಲ. ಈ ವಿಳಂಬ ನೀತಿ ಹೀಗೆ ಮುಂದುವರಿದರೆ, ಇನ್ನಷ್ಟು ವಿಳಂಬ ಆಗುವ ಸಾಧ್ಯತೆ ಇದೆ.

Yellow Line of Namma Metro Didn t Start Operation After One Year Delayed Commuters Angry

ಸದ್ಯ ಡ್ರೈವರ್‌ಲೆಸ್ ಎರಡು ರೈಲುಗಳು ಮಾತ್ರವೇ ಇದ್ದು, ಇವುಗಳಿಂದ ಕಾರ್ಯಾಚರಣೆ ಅಸಾಧ್ಯ. ಹಳದಿ ಮಾರ್ಗ ತೆರೆಯಲು ಇನ್ನಷ್ಟು ರೈಲುಗಳ ಅಗತ್ಯವಿದೆ ಎಂದು ಈಗಾಗಲೇ ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಯನಗರ ವ್ಯಾಪ್ತಿಯ ರಾಷ್ಟ್ರೀಯ ವಿದ್ಯಾಯಲಯ ರಸ್ತೆ (RV ರಸ್ತೆ) ದಿಂದ ಹೊಸೂರು ಸಮೀಪದ ಬೊಮ್ಮಸಂದ್ರವರೆಗೆ ಒಟ್ಟು 18.82 ಕಿಲೋ ಮೀಟರ್‌ ಮೆಟ್ರೋ ಮಾರ್ಗವು ಬೆಂಗಳೂರಿಗೆ ನೀರ್ಣಾಯಕವಾಗಿದೆ. ಹೀಗಾಗಿ ಈ ಮಾರ್ಗದ ಸೇವೆಯು ತುರ್ತು ಅಗತ್ಯವಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗ 1 ವರ್ಷ ವಿಳಂಬ

ಬೆಂಗಳೂರಿನ ಈ ಹಳದಿ ಮಾರ್ಗವು ಐಟಿ ಕೇಂದ್ರಗಳಿಗೆ ಸಂಪರ್ಕಿಸುತ್ತದೆ. ಚಲ್ಲಘಟ್ಟ-ವೈಟ್‌ಫಿಲ್ಡ್ ನಂತರ ಐಟಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಎರಡನೇ ಮಾರ್ಗ ಇದಾಗಿದೆ. ಹೀಗಾಗಿ ನಿರೀಕ್ಷೆಗಳು ಹೆಚ್ಚಿವೆ. ಈ ಮಾರ್ಗದ ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷಕ್ಕೆ ಹೆಚ್ಚು ಸಮಯವಾಗಿದೆ. ಅದಾದ ಬಳಿಕ ವಿದ್ಯುತ್ ಸಂಪರ್ಕ, ಹಳಿ ಪರಿಶೀಲನೆ ಎಲ್ಲವು ಮುಗಿದಿದೆ.

ಇದರ ಬೆನ್ನಲ್ಲೆ ಆರು ಬೋಗಿಗಳ ಮೆಟ್ರೋ ಸೆಟ್‌ಗಳು ಬೆಂಗಳೂರಿಗೆ ಬಂದವು. ಅವು ಡ್ರೈವರ್‌ಲೆಸ್ ಮಟ್ರೋ ಆಗಿದ್ದರಿಂದ ಚೀನಾ ಅಧಿಕಾರಿಗಳಿಂದಲೇ ಹತ್ತಾರು ಪರೀಕ್ಷೆ ನಡೆಸಲಾಯಿತು. ಇನ್ನೇನು 2024ರ ಫೆಬ್ರವರಿಗೆ ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧತೆ ನಡೆಸಿತ್ತು. ಆದರೆ ಮೆಟ್ರೋ ರೈಲುಗಳು ಪೂರೈಕೆಯಲ್ಲಿನ ವಿಳಂಬದಿಂದಾಗಿ ಈ ಮಾರ್ಗವು ಉದ್ದೇಶದಂತೆ ಕಳೆದ ವರ್ಷ ಫೆಬ್ರವರಿಯಲ್ಲಿ ಆರಂಭವಾಗಲಿಲ್ಲ.

Yellow Line of Namma Metro Didn t Start Operation After One Year Delayed Commuters Angry

ಸದ್ಯ ನಾವು 2025ರ ಫೆಬ್ರವರಿ ತಿಂಗಳನ್ನು ಪ್ರವೇಶಿಸಿದ್ದೇವೆ. ಮೊದಲ ಗುಡುವು ಪೆಬ್ರವರಿಯಿಂದ ಈವರೆಗೆ ಒಂದು ವರ್ಷ ವಿಳಂಬವಾದರೂ ಸಹಿತ ಇನ್ನೂವರೆಗೆ ಈ ಮಾರ್ಗವು ಸಾರ್ವಜನಿಕ ಸೇವೆ ಲೋಕಾರ್ಪಣೆಗೊಂಡಿಲ್ಲ. ಈ ಬಗ್ಗೆ ರಾಜಕೀಯ ನಾಯಕರು ಆಗ್ರಹಿಸಿದ್ದಾರೆ. ಜನರು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಸದ್ಯ ಮುಂದಿನ ಗಡುವಿನೊಳಗೆ ಆರಂಭವಾಗುತ್ತಾ? ಕಾದು ನೋಡಬೇಕಿದೆ.

ಮೆಟ್ರೋ ಸಂಚಾರ ಮತ್ತಷ್ಟು ವಿಳಂಬ?

ಹಳದಿ ಮಾರ್ಗಕ್ಕಾಗಿ ಕಲ್ಕತ್ತಾದಿಂದ ಹೊರಟಿರುವ ರೈಲು ಬೋಗಿಗಳು ಇನ್ನೊಂದು ವಾರದಲ್ಲಿ ಬೆಂಗಳೂರಿಗೆ ಬರಲಿವೆ. ಅವುಗಳು ಪರಿಶೀಲನೆ, ಸಿಗ್ನಲ್ ತಪಾಸಣೆ, ಹೊಂದಾಣಿಕೆಗೆ ಒಳಗೊಳ್ಳಬೇಕು. ಪರೀಕ್ಷೆಗಳು ಮುಗಿದ ಬಳಿಕ ಇರುವ ಹಾಲಿ ರೈಲುಗಳಲ್ಲಿಯೇ ಈ ಮಾರ್ಗದಲ್ಲಿ ಕಾರ್ಯಚರಣೆ ಆಗುತ್ತಾ? ಅಥವಾ ಇನ್ನಷ್ಟು ರೈಲುಗಳಿಗೆ ಕಾದು ಮತ್ತೆ ಕಾರ್ಯಾಚರಣೆಯಲ್ಲಿ ವಿಳಂಬ ಆಗಲಿದೆಯಾ? ಶೀಘ್ರವೇ ತಿಳಿಯಲಿದೆ.

ಹಳದಿ ಮಾರ್ಗ ತೆರೆದಲ್ಲಿ BMRCL ಹಾಲಿ ಮೆಟ್ರೋ ಜಾಲವು 76 ಕಿಲೋ ಮೀಟರ್‌ನಿಂದ 85 ಕಿಲೋ ಮೀಟರ್‌ಗೆ ವಿಸ್ತರಣೆ ಆಗುತ್ತದೆ. ಇಂದು ಫೆ.1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡುತ್ತಿದೆ. ಈ ಬಜೆಟ್‌ನಲ್ಲಿ ಬೆಂಗಳೂರು ಮೆಟ್ರೋಗೆ ವಿಶೇಷ ಅನುದಾನ, ಯೋಜನೆ ಅನುಮೋದನೆ ಕುರಿತು ಮಹತ್ವದ ಘೋಷಣೆ ಆಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+