Women's Day: ಮಾ.8 ರಂದು ದಾಖಲೆ ಮಟ್ಟದಲ್ಲಿ BMTC ಬಸ್‌ನಲ್ಲಿ ಮಹಿಳೆಯುರ ಸಂಚಾರ, ಅಂಕಿ ಸಂಖ್ಯೆ ವಿವರ ತಿಳಿಯಿರಿ

ಬೆಂಗಳೂರು, ಮಾರ್ಚ್ 10: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ಸಾರಿಗೆ ಸಂಸ್ಥೆಯಾದ 'ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಬಸ್‌ಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎರಡು ಮಿಲಿಯನ್ ಗೂ ಹೆಚ್ಚು ಮಂದಿ ಮಹಿಳೆಯರು ಸಂಚಾರ ಮಾಡಿದ್ದಾರೆ.

ಬಿಎಂಟಿಸಿ ನಿಗಮವು ಅಂತಾರಾಷ್ಟ್ರೀಯ ಮಹಿಳೆಯರ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಗೌರವಾರ್ಥ ಅವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿತ್ತು. ಅದನ್ನು ವಿಶ್ವ ಮಹಿಳೆಯರ ದಿನ ಮಾರ್ಚ್ 08ರ ಮೊದಲೇ ಪ್ರಟಿಸಿತ್ತು. ಇದಾದ ಮೇಲೆ ಬುಧವಾರ (ಮಾ.08) ಬೆಂಗಳೂರಿನ ವಿವಿಧ ಭಾಗಗಳ ಒಟ್ಟು ಸರಿಸುಮಾರು 21 ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಬಿಎಂಟಿಸ್ ಬಸ್‌ಗಳಲ್ಲಿ ಸಂಚಾರ ಮಾಡಿದ್ದಾರೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

Womens Day:More Than 2 Million Women Passengers Travelled Free In BMTC Buses On March 8

ಬೆಂಗಳೂರು ಪಶ್ಚಿಮ ವಲಯದಲ್ಲಿ ಅತ್ಯಧಿಕ ಮಹಿಳಾ ಪ್ರಯಾಣಿಕರು ಬಿಎಂಟಿಸಿ ಹತ್ತಿದ್ದಾರೆ. ಸುಮಾರು 21 ಲಕ್ಷದ ಮಹಿಳಾ ಪ್ರಯಾಣಿಕರ ಪೈಕಿ ಪಶ್ಚಿಮ ವಲಯದಲ್ಲಿ 5 ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಸ್ ಏರಿ ಇಳಿದಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ. ಇನ್ನೂ ಮಾರ್ಚ್ 8 ರಂದು ಒಂದೇ ದಿನ ಮಹಿಳೆ ಮತ್ತು ಪುರುಷರನ್ನು ಒಳಗೊಂಡು ಒಟ್ಟು 33 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬಿಎಂಟಿಸಿ ಮಹಿಳೆಯರಿಗೆ ಉಚಿತ ಪ್ರಯಾಣ ಸೇವೆಯನ್ನು ನೀಡಿತ್ತು. ಕಾರ್ಪೊರೇಷನ್ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ಎಸಿ ವಜ್ರ ಮತ್ತು ವಾಯುವಜ್ರ ಸೇರಿದಂತೆ ಎಲ್ಲಾ ಬಸ್ ಸೇವೆಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯಗಳನ್ನು ನೀಡಿತು.

ಬಸ್ ಏರಿದ ವಲಯವಾರು ಮಹಿಳೆಯರ ಸಂಖ್ಯೆ

ವಲಯವಾರು ಮಹಿಳಾ ಪ್ರಯಾಣಿಕರ ಸಂಖ್ಯೆ ನೋಡುವುದಾದರೆ ಬೆಂಗಳೂರಿನ ಪೂರ್ವ ವಲಯದಲ್ಲಿ 3.4 ಲಕ್ಷಕ್ಕೂ ಹೆಚ್ಚು ಮಹಿಳೆಯರು, ಉತ್ತರ ವಲಯದಲ್ಲಿ 4.7ಲಕ್ಷ ಪ್ರಯಾಣಿಕರು, ದಕ್ಷಿಣ ವಲಯದಲ್ಲಿ 3.8 ಲಕ್ಷ ಮಂದಿ, ಈಶಾನ್ಯ ವಲಯದಲ್ಲಿ 3.9 ಲಕ್ಷ ಮತ್ತು ಕೇಂದ್ರ ವಲಯದಲ್ಲಿ 90,000 ಮಹಿಳೆಯರು ಬಿಎಂಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Womens Day:More Than 2 Million Women Passengers Travelled Free In BMTC Buses On March 8

ಬೆಂಗಳೂರಿನ ಜನತೆಗೆ ಸುರಕ್ಷಿತ ಪ್ರಯಾಣ ಸೇವೆ ನೀಡುತ್ತಿರುವ ಬಿಎಂಟಿಸಿ ನಿಗಮವು ಒಟ್ಟು ಸುಮಾರು 6,600 ಬಸ್‌ಗಳ ಸಾಮರ್ಥ್ಯ ಹೊಂದಿದೆ. ಇದರಲ್ಲಿ ನಿತ್ಯ 5,567 ಬಸ್‌ಗಳು ಸೂಚಿತ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತವೆ. ಆ ಮೂಲಕ ದೈನಂದಿನಲ್ಲಿ 10.84 ಲಕ್ಷ ಕಿಲೋ ಮೀಟರ್‌ಗಳನ್ನು ಬಿಎಂಟಿಸಿ ಬಸ್‌ಗಳು ಕ್ರಮಿಸುತ್ತದೆ. ಇದರಿಂದ ನಿತ್ಯ ನಗರದಲ್ಲಿ ಸರಾಸರಿ 29 ಲಕ್ಷ ಪ್ರಯಾಣಿಕರು ಈ ಬಸ್‌ಗಳನ್ನು ಅವಲಂಬಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+