ಬೆಂಗಳೂರು: ಆಟೋ ಚಾಲಕನಿಂದ ಮಹಿಳೆ ಮೇಲೆ ಹಲ್ಲೆ
ಬೆಂಗಳೂರು, ಏ, 10: ನಗರದಲ್ಲಿ ಓಲಾ ಚಾಲಕರ ಹುಚ್ಚಾಟ ಮತ್ತೆ ತಲೆಎತ್ತಿದೆ. ಮೀಟರ್ ಗೂ ಹೆಚ್ಚಿನ ದುಡ್ಡು ಕೊಡಲು ನಿರಾಕರಿಸಿದ ಮಹಿಳೆ ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ್ದಾನೆ.
ಹಲ್ಲೆಗೆ ಒಳಗಾದ ಮಹಿಳೆ ಓಲಾ ಕ್ಯಾಬ್ ವಿರುದ್ಧ ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದು ಬೆಂಗಳೂರು ನಗರ ಪೊಲೀಸರು ಸ್ವಯಂಪ್ರೇರಿತ ದಾಖಲು ಮಾಡಿಕೊಂಡಿದ್ದಾರೆ.[ಕ್ಯಾಬ್ ಗಳಲ್ಲಿ ಮಹಿಳೆಯರು ಸುರಕ್ಷಿತವೇ?]

ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ದೆಹಲಿ ಮೂಲದ ದಿವ್ಯಾ ಎಂಬವರು ಬುಧವಾರ ಸಂಜೆ ದೊಮ್ಮಲೂರು ಫ್ಲೈ ಓವರ್ ಬಳಿ ಓಲಾಕ್ಕೆ ಸೇರಿದ ಆಟೋ ಮಾಡಿಸಿಕೊಂಡು ಹೋಗಿದ್ದಾರೆ. ಮನೆ ಸಮೀಪ ತಲುಪಿದ ನಂತರ ಚಾಲಕ 30 ರೂ. ಹೆಚ್ಚು ನೀಡುವಂತೆ ಕೇಳಿದ್ದಾನೆ.[ಎಲ್ಲವೂ ನನ್ನ ಆಯ್ಕೆ ಎಂದ ದೀಪಿಕಾ ಪಡಿಕೋಣೆ]
ಈಗ ಸಮಯ ಸಂಜೆ 6 ಗಂಟೆ. ಯಾಕೆ ಹೆಚ್ಚು ಹಣ ನೀಡಬೇಕು? ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ವ್ಯಘ್ರಗೊಂಡ ಚಾಲಕ ಸುಭಾಷ್ ನಗರ ನಿವಾಸಿ ರಿಜ್ವಾನ್ ಬಾಷಾ, ಮಹಿಳೆಯ ಕೈ ಹಿಡಿದು ತಿರುಚಿದ್ದಾನೆ. ಬಳಿಕ ಮಾತಿಗೆ ಮಾತು ಬೆಳೆದು ಚಾಲಕ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯ , ಹಲ್ಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೂರ್ವ ವಲಯ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಮಾಹಿತಿ ನೀಡಿದ್ದಾರೆ. ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications