ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಗೆ ಸಂಕಷ್ಟ ತಂದಿಟ್ಟ 'ಫೈರ್ ಶಾಟ್': ಬಾಯಿಯೇ ಸೀಳಿ ಹೋಯ್ತು

|
Google Oneindia Kannada News

ಬೆಂಗಳೂರು, ಮೇ 06: ಪಬ್ , ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಕಿಕ್ ತರಿಸುವ ಫೈರ್ ಶಾಟ್ ಮೂಲಕ ಮದ್ಯ ಸೇವಿಸುವ ಸಂದರ್ಭದಲ್ಲಿ ನಡೆಯುವ ಅನಾಹುತಕ್ಕೆ ಇದು ಒಂದು ಉದಾಹರಣೆ.

ಫೈರ್ ಶಾಟ್ ಎಡವಟ್ಟಿನಿಂದ ಯುವತಿಯೊಬ್ಬಳ ಬಾಯಿಯೇ ಸುಟ್ಟು ಹೋಗಿರುವ ಘಟನೆ ಬೆಂಗಳೂರಿನಲ್ಲಿ ಪಬ್ ಒಂದರಲ್ಲಿ ನಡೆದಿದ್ದು, ಹೋಟೆಲ್ ಸಿಬ್ಬಂದಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಬ್‌ನಲ್ಲಿ ಏಕಾಏಕಿ ಬಂದು ಯುವತಿಯನ್ನು ತಬ್ಬಿದ ಅಪರಿಚಿತ, ನಡೆದಿದ್ದೇನು?ಪಬ್‌ನಲ್ಲಿ ಏಕಾಏಕಿ ಬಂದು ಯುವತಿಯನ್ನು ತಬ್ಬಿದ ಅಪರಿಚಿತ, ನಡೆದಿದ್ದೇನು?

42 ವರ್ಷದ ಮಹಿಳೆ ಓಲ್ಡ್ ಏವಿಯೇಷನ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಬೆಂಗಳೂರಿನ ಹೋಟೆಲ್‌ ಒಂದರಲ್ಲಿ ಫೈರ್ ಶಾಟ್ ಕುಡಿಯಲು ಹೋಗಿ ಬಾಯಿ ಸುಟ್ಟುಕೊಂಡಿದ್ದಾರೆ.

Women injured after drinking fire shot in Bengaluru

ಮಹಿಳೆ ದೆಹಲಿ ಮೂಲದವರಾಗಿದ್ದಾರೆ, ಹೆಚ್ಚು ಬೆಂಕಿಯ ಕಾವಿನಿಂದಾಗಿ ಗಾಜು ಒಡೆದು ಪುಡಿ ಪುಡಿಯಾಗಿದೆ. ಅದರಿಂದ ಆಕೆಯ ತುಟಿ ಸೀಳಿದೆ.

ಮಹಿಳೆಯ ಸಹೋದ್ಯೋಗಿಗಳ ಜತೆಗೆ ರಾತ್ರಿ ಊಟಕ್ಕೆಂದು ಹೋಟೆಲ್‌ಗೆ ಹೋಗಿದ್ದರು. ಬಳಿಕ ಕಣ್ಣು ಮುಚ್ಚಿ ಫೈರ್ ಶಾಟ್‌ನ್ನು ಕುಡಿಯಲು ಹೇಳಿದರು ಈ ವೇಳೆ ಅವಘಡ ಸಂಭವಿಸಿದೆ. ಬೆಂಕಿಯ ಶಾಖದಿಂದ ಗಾಜು ಒಡೆದು ಪುಡಿಯಾಗಿ ಅವರ ಬಾಯಿಯೊಳಗೂ ಹೋಗಿದೆ, ಬಳಿಕ ಎಚ್ಚೆತ್ತ ಮಹಿಳೆ ತಕ್ಷಣವೇ ಬಾಯಿಯಿಂದ ಹೊರಹಾಕಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೈರ್ ಶಾಟ್ ಎಂದರೇನು? ಕಾಕ್‌ಟೇಲ್‌ ಸೇರಿದಂತೆ ಇನ್ನಿತರೆ ಮದ್ಯಗಳಿಗೆ ಗ್ಲಾಸ್‌ಗಳಲ್ಲಿ ಹಾಕಿ ಬೆಂಕಿ ಹಚ್ಚಿ ಅದರಿಂದ ಬರುವ ಹೊಗೆಯ ಸುವಾಸನೆ (ಅಮಲು) ಆಸ್ವಾದಿಸುವುದು. ಬೆಂಕಿ ಆರಿದ ಬಳಿಕ ಗ್ಲಾಸ್‌ನಲ್ಲಿರುವ ಮದ್ಯ ಸೇವಿಸುವುದನ್ನು "ಫೈರ್‌ ಶಾಟ್‌' ಎನ್ನುತ್ತಾರೆ. ಬಹುತೇಕ ಪಬ್‌ ಬಾರ್‌ ಅಂಡ್‌ ರೆಸ್ಟೋರೆಂಟ್‌, ಪಾರ್ಟಿಗಳಲ್ಲಿ ಫೈರ್‌ಶಾಟ್‌ ಎಂಬುದು ಸಾಮಾನ್ಯ. "ಫೈರ್‌ಶಾಟ್‌' ನಡೆಸಲು ಬಾರ್‌ನವರು ಅಬಕಾರಿ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ.

ಎಚ್ಚರ ತಪ್ಪಿದರೆ ಅಪಾಯ, ಫೈರ್‌ಶಾಟ್‌' ಮೂಲಕ ಮದ್ಯವನ್ನು ಅತ್ಯಂತ ಜಾಗರೂಕವಾಗಿ ಸೇವಿಸಬೇಕು. ಇದರ ಅಭ್ಯಾಸವಿರುವವರು ಮಾತ್ರವೇ ಇದನ್ನು ಸೇವಿಸುತ್ತಾರೆ. ಬೆಂಕಿ ಆರುವ ಮುನ್ನವೇ ಪ್ರಯತ್ನಿಸಬಾರದು.

ಹೀಗಾಗಿ ಬೆಂಕಿ ಪೂರ್ಣ ಪ್ರಮಾಣದಲ್ಲಿ ಆರುವವರೆಗೂ ಕಾಯಬೇಕಾಗಿರುತ್ತದೆ. ಮದ್ಯದ ತುಂಬಿದ ಗ್ಲಾಸ್‌ ಕೂಡ ಅತ್ಯಂತ ಬಿಸಿಯಾಗಿರುವುದರಿಂದ ಹಿಡಿತವೂ ಮುಖ್ಯ. ಬೇರೆ ಬೇರೆ ಕಡೆ ಫೈರ್‌ಶಾಟ್‌ ಪ್ರಯತ್ನಿಸುವಾಗ ಗ್ರಾಹಕರು ಎಚ್ಚರತಪ್ಪಿ ದುರ್ಘ‌ಟನೆಗೆ ಈಡಾಗಿದ್ದಾರೆ.

English summary
A 42-year-old aviation industry professional was hurt after she had a flaming drink at a Bengaluru hotel on Friday night at around 11.30 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X