ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಂತ್ರಜ್ಞಾನ ಸದುಪಯೋಗದಿಂದ ಯಶಸ್ವಿ ಮಹಿಳಾ ಉದ್ಯಮಿಗಳಾಗಬಹುದು; ಉಮಾ ರೆಡ್ಡಿ

|
Google Oneindia Kannada News

ಬೆಂಗಳೂರು, ಮಾರ್ಚ್ 30: ತಂತ್ರಜ್ಞಾನದ ಅವಕಾಶಗಳನ್ನು ಸೂಕ್ತವಾಗಿ ಸದುಪಯೋಗಪಡಿಸಿಕೊಳ್ಳುವ ಮೂಲಕ ಯಶಸ್ವಿ ಮಹಿಳಾ ಉದ್ಯಮಿಗಳಾಗಬಹುದು ಎಂದು ಹೈಟೆಕ್ ಮ್ಯಾಗ್ನಟಿಕ್ ಸಲ್ಯೂಶನ್ಸ್ ವ್ಯವಸ್ಥಾಪಕ ನಿರ್ದೇಶಕಿ ಉಮಾ ರೆಡ್ಡಿ ಅಭಿಪ್ರಾಯಪಟ್ಟರು.

ಕರ್ನಾಟಕ ಪತ್ರಕರ್ತೆಯರ ಸಂಘ, ಎಫ್‌ಕೆಸಿಸಿಐ ಮತ್ತು ಇನ್ಫೋಸಿಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಬುಧವಾರ ಪತ್ರಕರ್ತೆಯರಿಗಾಗಿ ಆಯೋಜಿಸಿದ್ದ ಡಿಜಿಟಲ್ ಲಿಟರಸಿ ಕಾರ್ಯಾಗಾರದಲ್ಲಿ ತಂತ್ರಜ್ಞಾನ ಹಾಗೂ ಅವಕಾಶಗಳ ಕುರಿತು ಮಾತನಾಡಿದರು.

ಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ ಗುರಿ: 3 ಒಡಂಬಡಿಕೆಗಳಿಗೆ ಅಂಕಿತಮಹಿಳಾ ಸ್ವಸಹಾಯ ಗುಂಪುಗಳ ಬಲವರ್ಧನೆ ಗುರಿ: 3 ಒಡಂಬಡಿಕೆಗಳಿಗೆ ಅಂಕಿತ

ಪ್ರಸ್ತುತ ಡಿಜಿಟಲ್ ಲಿಟರಸಿ ಮುಖ್ಯವಾಗಿದೆ. ಅದರಲ್ಲೂ ಕೋವಿಡ್ ಸಮಯದಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಾಯಿತು. ಹೆಚ್ಚು ಜನರನ್ನು ತಲುಪಲು ಸಾಧ್ಯವಾಯಿತು. ಪ್ರತಿದಿನ ತಂತ್ರಜ್ಞಾನ ಅಪ್ ಗ್ರೇಡ್ ಆಗುತ್ತಿರುತ್ತದೆ. ಅದನ್ನು ಹೇಗೆ ಬಳಸಿಕೊಳ್ಳಬೇಕು, ಪ್ರಯೋಜನಗಳು ಮತ್ತು ನೆಟ್‌ವರ್ಕಿಂಗ್ ಕುರಿತು ಅರಿವು ಇರಲೇಬೇಕು. ಅಗತ್ಯವಿರುವ ಮತ್ತು‌ ಸೂಕ್ತವಾದ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿ ಮಹಿಳಾ ಉದ್ಯಮಿಯಾಗಬಹುದು ಎಂದರು.

Women Can Become Successful Entrepreneurs By Technology Using Says Uma Reddy

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರಜಿನಿ ರಮೇಶ್ ಮಾತನಾಡಿ, ಪ್ರತಿಯೊಬ್ಬರು ತಮ್ಮನ್ನು ತಾವು ತೆರೆದುಕೊಳ್ಳಲು ಸಾಮಾಜಿಕ ಜಾಲತಾಣ ಉತ್ತಮ ವೇದಿಕೆ. ಸಾಮಾಜಿಕ ಜಾಲತಾಣಗಳಲ್ಲಿ ಇರುವ ಅವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆದರೂ, ಅವುಗಳನ್ನು ವೈಯಕ್ತಿಕ ಸುರಕ್ಷತೆ ಕಾಪಾಡಿಕೊಳ್ಳುವಂತೆ ಎಚ್ಚರಿಕೆಯಿಂದ ಬಳಸಬೇಕು. ಈ ಅರಿವು ಅತ್ಯಗತ್ಯ ಎಂದು ತಿಳಿಸಿದರು. ಪತ್ರಕರ್ತೆಯರಿಗೆ ಅಗತ್ಯವಿರುವ ಸೋಷಿಯಲ್ ಮೀಡಿಯಾ, ಬಳಕೆ, ಉಪಯೋಗ ಕುರಿತು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿವರಿಸಿದರು.

ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯಚಟುವಟಿಕೆ ಹಾಗೂ ಪತ್ರಕರ್ತೆಯರ ಮುಂದಿರುವ ಸವಾಲುಗಳ ಬಗ್ಗೆ ವಿವರಿಸಿದರು.

Women Can Become Successful Entrepreneurs By Technology Using Says Uma Reddy

ಕಾರ್ಯಾಗಾರದಲ್ಲಿ ಸಂಘದ ಕಾರ್ಯದರ್ಶಿ ಮಾಲತಿ ಭಟ್, ಹಿರಿಯ ಪತ್ರಕರ್ತೆ ಕೆ.ಎಚ್.ಸಾವಿ ತ್ರಿ, ಆಕಾಶವಾಣಿ ನಿರ್ದೇಶಕಿ ನಿರ್ಮಲಾ ಎಲಿಗಾರ್, ಪಿಐಬಿ ಅಧಿಕಾರಿ ಜಯಂತಿ ಕೆ.ವೈ ಸೇರಿದಂತೆ ಹಿರಿಯ ಹಾಗೂ ಕಿರಿಯ ಪತ್ರಕರ್ತೆಯರು ಭಾಗವಹಿಸಿದ್ದರು. ಭಾಗ್ಯಲಕ್ಷ್ಮಿ ಪದಕಿ ಪ್ರಾರ್ಥನೆ, ಪದ್ಮಾ ಶಿವಮೊಗ್ಗ ಕಾರ್ಯಕ್ರಮ ನಿರೂಪಿಸಿದರು.

Recommended Video

KKR ನ ಈ ಬೌಲರ್ ಹೆಲ್ಪ್ ಮಾಡದೇ ಇದ್ದಿದ್ರೆ RCB ಗೆಲ್ತಾನೆ ಇರ್ಲಿಲ್ಲ | Oneindia Kannada

English summary
Women can be successful entrepreneurs by harnessing technology opportunities, Uma Reddy, Managing Director of High-Tech Magnetic Solutions, said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X