Women Beware: ಗೀಸರ್ ಅಳವಡಿಕೆಗೆಂದು ಬಂದು ಕ್ಯಾಮರಾ ಇಟ್ಟು ಮಹಿಳೆ ಸ್ನಾನದ ವಿಡಿಯೋ ಮಾಡಿದ ಕಾಮಿ- ಮಾಡಿದ್ದೇನು ಗೊತ್ತಾ?
ಮಹಿಳೆಯರೇ ಎಚ್ಚರ ಎಚ್ಚರ ಎಚ್ಚರ. ಈ ಮಾತನ್ನು ಸಾವಿರ ಬಾರಿ ಹೇಳಿದರೂ ಈ ಕಾಲದಲ್ಲಿ ಕಡಿಮೆನೇ. ಎಷ್ಟೇ ಜಾಗರೂಕರಾಗಿದ್ದರೂ ಕೂಡ ಯಾಮಾರಿಸಿಬಿಡುತ್ತಾರೆ ಅನ್ನೋದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಇಲ್ಲೊಬ್ಬ ವ್ಯಕ್ತಿ ಯಾರೂ ಕೂಡ ಊಹಿಸದ ಕಂತ್ರಿ ಕೆಲಸ ಮಾಡಿದ್ದಾನೆ. ಈತ ಮಾಡಿದ ಕೆಲಸವನ್ನು ನೀವು ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ. ಯಾರಾದರೂ ಮನೆಗೆ ಬಂದರೆ ನಂಬಿಕೆಯನ್ನೇ ಕಳೆದುಕೊಂಡು ಬಿಡೋದು ಪಕ್ಕಾ.
ಹೌದು.. ಮನೆಯಲ್ಲಿ ಗೀಸರ್ ಅಳವಡಿಸಲೆಂದು ಬಂದ ವ್ಯಕ್ತಿ ಆ ಕೆಲಸ ಮಾಡಿ ಹೋಗುವುದನ್ನು ಬಿಟ್ಟು ಕುತಂತ್ರದ ಕೆಲಸ ಮಾಡಿದ್ದಾನೆ. ಈ ಮೂಲಕ ಮಹಿಳೆಯ ಮಾನ ತೆಗೆಯುವ ಕ್ಯಾಮೆ ಮಾಡಿ ಎಸ್ಕೇಪ್ ಆಗಿದ್ದಾನೆ. ಗೀಸರ್ ಅಳವಡಿಕೆಗೆಂದು ಬಂದ ವ್ಯಕ್ತಿಯೊಬ್ಬ ಗೀಸರ್‌ಗೆ ಕ್ಯಾಮಾರವನ್ನು ಅಳವಡಿಸಿ ಮಹಿಳೆಯ ಸ್ನಾನ ಮಾಡುವ ವಿಡಿಯೋವನ್ನು ಮಾಡಿದ್ದಾನೆ. ಅಷ್ಟೇ ಅಲ್ಲ. ಆ ವೀಡಿಯೋವನ್ನು ಮಾಡಿ ಮಹಿಳೆಗೆ ಕರೆ ಮಾಡಿ ಬ್ಲ್ಯಾಕ್ ಮೇಲೆ ಕೂಡ ಮಾಡಿದ್ದಾನೆ. ತನ್ನ ಮಂಚಕ್ಕೆ ಬರದೇ ಇದ್ದರೆ ಈ ವೀಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಇದ್ಯಾವುದು ಅರಿಯದ ಮಹಿಳೆಗೆ ವ್ಯಕ್ತಿಯ ಮಾತು ಕೇಳಿ ಆಕಾಶವೇ ಕಳಚಿ ಬಿದ್ದಂತಾಗಿದೆ. ತಕ್ಷಣ ನಡೆದ ಘಟನೆಯನ್ನು ಮನೆಯವರಿಗೆಲ್ಲ ಮಹಿಳೆ ತಿಳಿಸಿದ್ದಾಳೆ. ಎಚ್ಚೆತ್ತುಕೊಂಡ ಕುಟುಂಬ ಸದಸ್ಯರು, ಗೀಸರ್ ಅಳವಡಿಕೆಗೆಂದು ಬಂದ ವ್ಯಕ್ತಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರಸ್ತೆಯಲ್ಲಿ ಹೋಗುತ್ತಿದ್ದ ಆರೋಪಿಯನ್ನು ಹಿಡಿದು ಹಿಗ್ಗಾಮೊಗ್ಗ ಥಳಿಸಿದ್ದಾರೆ. ಅಲ್ಲದೇ ಮಹಿಳೆ ಕೂಡ ಕಾಮುಕನಿಗೆ ಚಪ್ಪಳಿಯಿಂದ ಹೊಡೆದಿದ್ದಾರೆ. ವ್ಯಕ್ತಿಯನ್ನು ರಸ್ತೆಯಲ್ಲಿ ನಿಲ್ಲಿಸಿ ಮಹಿಳೆ ಹಾಗೂ ಕೆಲ ಪುರುಷರು ಬಾಯಿಗೆ ಬಂದಂತೆ ಉಗಿಯುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಬ್ಲ್ಯಾಕ್ ಮೇಲ್ ಮಾಡಿದ ವ್ಯಕ್ತಿಗೆ ಪ್ರಶ್ನೆ ಮಾಡುವುದನ್ನು ಕೇಳಬಹುದು, ಆರೋಪಿಗೆ ಮದುವೆಯಾಗಿ ಮಕ್ಕಳಿರುವುದು ಇದರಿಂದ ಗೊತ್ತಾಗಿದೆ. ಸಿಕ್ಕಿಬಿದ್ದಾಗ ತಾನು ವೀಡಿಯೋ ಮಾಡಿಲ್ಲ, ಕ್ಯಾಮರಾ ಇಟ್ಟಿಲ್ಲ, ಫೋಟೋ ತೆಗೆದಿಲ್ಲಾ ಎಂದು ಡ್ರಾಮಾ ಮಾಡಿದ್ದಾನೆ ಆರೋಪಿ. ನಾನೇನು ಮಾಡೇ ಇಲ್ಲ ಅಣ್ಣ ನನ್ನ ಬಿಡಿ ಎಂದು ನಾಟಕ ಆಡಿದ್ದಾನೆ.
ಕೋಪಗೊಂಡ ವ್ಯಕ್ತಿ ಆರೋಪಿಯ ಮುಖವನ್ನು ಕ್ಯಾಮಾರಾಕ್ಕೆ ತೋರಿಸಿ, ಇಂತಹ ವ್ಯಕ್ತಿಗಳು ಇರುತ್ತಾರೆ. ಭಯ ಪಡಬೇಡಿ, ಪೊಲೀಸರಿಗೆ ಹಿಡಿದುಕೊಡಿ ಎಂದು ಹೇಳಿದ್ದಾರೆ. ಜೊತೆಗೆ ಇಂತಹ ಕಾಮುಕರು ಮನೆಗೆ ಬಂದರೆ ಎಚ್ಚರಿಕೆಯಿಂದರಲು ಮನವಿ ಕೂಡ ಮಾಡಲಾಗಿದೆ. ಬಳಿಕ ಈ ವ್ಯಕ್ತಿಯ ಬಳಿ ಇದ್ದ ಮೊಬೈಲ್ ಪೋನ್ ಅನ್ನು ಕಿತ್ತುಕೊಂಡು ಪೊಲೀಸರಿಗೆ ಒಪ್ಪಿಸಲಾಗಿದೆ.
ಆದರೆ ಈ ಘಟನೆ ನಡೆದಿದ್ದು ಯಾವ ಸ್ಥಳದಲ್ಲಿ ಎನ್ನುವುದು ಗೊತ್ತಾಗಿಲ್ಲ. ಆದರೆ ಚೇತನ್ ಸೂರ್ಯ ಎಸ್ Chethan Surya S (@Chethan_Surya_S) ಎಂಬುವವರು ತಮ್ಮ ಎಕ್ಸ್ ಖಾತೆಯನ್ನು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿ ಜನ ಬೆಚ್ಚಿಬಿದ್ದಿದ್ದಾರೆ.
ಮಹಿಳೆಯರು ಇಂತಹವರ ವಿಚಾರದಲ್ಲಿ ಎಚ್ಚರಿಕೆಯಿಂದಿರುವುದು ತುಂಬಾ ಮುಖ್ಯ. ಇಂತಹ ವ್ಯಕ್ತಿಗಳ ವಿಚಾರದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡುವುದು ಒಳ್ಳೆಯದು.












Click it and Unblock the Notifications