ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೇನು ಡಿಸೆಂಬರ್ ಬಂತಲ್ಲ, ಈ ಬಾರಿನೂ ವೈನ್ ಮೇಳ ಇದೆಯಲ್ಲ!

|
Google Oneindia Kannada News

ಬೆಂಗಳೂರು, ನವೆಂಬರ್ 27: ಇನ್ನೇನು ಡಿಸೆಂಬರ್ ತಿಂಗಳು ಬಂದೇ ಬಿಡ್ತು, ಏನೆಪ್ಪಾ ವಿಶೇಷ ಅಂತೀರಾ.. ಬೆಂಗಳೂರಲ್ಲಿ ವೈನ್ ಫೆಸ್ಟಿವಲ್ ಕೂಡ ಬಂದೇ ಬಿಡ್ತು.

ಆರೋಗ್ಯಕ್ಕೆ ಹಿತ ನೀಡುವ ವೈನ್‌ನ ಮತ್ತೇರಿಸಲು ದ್ರಾಕ್ಷಾರಸ ಮಂಡಳಿ ಸಿದ್ಧತೆ ನಡೆಸಿದೆ. ಕ್ರಿಸ್ ಮಸ್ ಸಂದರ್ಭದಲ್ಲಿ ವೈನ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಕಾರವಾರ, ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ವೈನ್ ಮೇಳ ಆಯೋಜಿಸಲು ಚಿಂತನೆ ನಡೆಸಿದೆ.

ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!

ಮೇಳ ನಡೆಸುವ ಕುರಿತು ವೈನ್ ಟೂರಿಸಂಗೆ ಹೊಸ ಆಯಾಮ ನೀಡುವ ಉದ್ದೇಶವನ್ನು ಮಂಡಳಿ ಹೊಂದಿದೆ. ಕಳೆದ ವರ್ಷ ಹಮ್ಮಿಕೊಂಡಿದ್ದ ಮೇಳದ ಮೂಲಕ 60 ಲಕ್ಷ ರೂ ಆದಾಯ ಬಂದಿತ್ತು, ಈ ಬಾರಿ ಕ್ರಿಸ್ ಮಸ್ ಸಂದರ್ಭದಲ್ಲಿ ಮೇಳ ನಡೆಯುವುದರಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ವೈನ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕ ಟಿ ಸೋಮು ತಿಳಿಸಿದ್ದಾರೆ.

Wine mela will keep warm in chilling December

ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!

ಪ್ರತಿ ವರ್ಷ 3.92 ಲಕ್ಷ ಟನ್ ವೈನ್ ದ್ರಾಕ್ಷಿ ಉತ್ಪಾದನೆಯಾಗುತ್ತಿದ್ದು, ಸದ್ಯ 17 ವೈನರಿಗಳು ಕಾರ್ಯ ನಿರ್ವಹಿಸುತ್ತಿವೆ. 190 ವೈನ್ ಟಾವರಿನ್ ಗಳು ಹಾಗೂ 40 ಬೋಟಿಕ್‌ಗಳು ರಾಜ್ಯದಲ್ಲಿ ಸ್ಥಾಪನೆಯಾಗಿದೆ.

English summary
This December may be a warmer for wine lovers as winery board of Karnataka conducting wine mela in Bengaluru, Mangaluru, Karwar and many places of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X