• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೈಸ್ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂದ ಕುಮಾರಸ್ವಾಮಿ

|

ಬೆಂಗಳೂರು, ನವೆಂಬರ್ 17: ನೈಸ್ ವಿಚಾರದಲ್ಲಿ ಕೆಲವರು ಕುಮಾರಸ್ವಾಮಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ ಆದರೆ ಯಾವ ರಾಜಿಯೂ ಇಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ಸಂಚಾರಕ್ಕೆ ಮುಕ್ತ

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ವಿಚಾರವನ್ನು ಸದನ ಸಮಿತಿ ಇನ್ನೂ ಕೂಡ ಸ್ವೀಕಾರ ಮಾಡಿಲ್ಲ, ವರದಿ ಸ್ವೀಕಾರವಾದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಆದರೆ ನಮ್ಮ ಮಧ್ಯೆ ಯಾವುದೇ ಹೊಂದಾಣಿಕೆಗೂ ಅವಕಾಶವಿಲ್ಲ ಸುಮ್ಮನೇ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.

ನೈಸ್ ಒಪ್ಪಂದ ರದ್ದುಗೊಳಿಸುವಂತೆ ಕಾನೂನು ಇಲಾಖೆ ಸಿಫಾರಸ್ಸು

ಮೈತ್ರಿ ಸರ್ಕಾರ ಬಂದು ಕೆಲವೇ ತಿಂಗಳುಗಳು ಕಳೆದಿವೆ ಎಲ್ಲವನ್ನೂ ಒಟ್ಟಿಗೆ ಅನುಷ್ಠಾನ ಮಾಡಲು ಸಾಧ್ಯವಿಲ್ಲ ಸ್ವಲ್ಪ ಸಮಯ ಹಿಡಿಯುತ್ತದೆ. ಒಂದೊಂದೇ ಕೆಲಸವನ್ನು ಮಾಡಿಕೊಂಡು ಬರು್ತಿದ್ದೇವೆ, ನೈಸ್ ವಿಚಾರವನ್ನೂ ಗಮನಿಸಿದ್ದೇವೆ, ನೈಸ್ ವಿಚಾರ ಕುರಿತು ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಅದನ್ನು ನನಗೆ ಕಲಿಸಿದ್ದೇ ಬಿಜೆಪಿ ಎಂದು ಟೀಕಿಸಿದರು.

2006ರಲ್ಲಿ ನೈಸ್ ವಿಚಾರವಾಗಿ ಯೋಜನೆ ರದ್ದುಗೊಳಿಸುವ ಸಂಬಂಧ ಸಂಪುಟ ಸಭೆ ಮುಂದಿಟ್ಟಾಗ, ಆಗಿನ ಡಿಸಿಎಂ ಆದಿಯಾಗಿ 16 ಮಂತ್ರಿಗಳು ಸಭೆಯಿಂದ ದೂರ ಉಳಿದಿದ್ದರು. ಈ ವಿಚಾರದಲ್ಲಿ ಅವರ ಬದ್ಧತೆ ಏನು ಎಂಬುದು ತೋರಿಸುತ್ತದೆ ಎಂದರು. ಮುಂದಿನ ದಿನಗಳಲ್ಲಿನ ನಮ್ಮ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಉತ್ತರ ಕೊಡುತ್ತೇನೆ. ನನಗೆ ಹೊಂದಾಣಿಕೆ ರಾಜಕಾರಣ ಮಾಡುವ ಅಗತ್ಯ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.

ನೈಸ್ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಬಿಎಂಟಿಸಿ ಬಸ್

ನೈಸ್ ಸದನ ಸಮಿತಿ ವರದಿಯನ್ನು ಸದನ ಇನ್ನೂ ಸ್ವೀಕರಿಸಿಲ್ಲ. ವರದಿ ಸ್ವೀಕಾರವಾದ ಕೂಡಲೇ ಸಮಯಕ್ಕೆ ಸರಿಯಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

English summary
Chief minister HD Kumaraswamy gave assurance that he will look into the NICE report after assembly approval for report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X