ನೂರು ಕೋಟಿಯ ಕ್ಲಬ್ ಸೇರಲಿದ್ದಾರಾ ಬೆಂಗಳೂರು ಸಂಚಾರ ಪೊಲೀಸರು!
ಬೆಂಗಳೂರು, ಜೂನ್ 12: ಬೆಂಗಳೂರು ಸಂಚಾರ ಪೊಲೀಸರು ಈ ವರ್ಷ ನೂರು ಕೋಟಿ ಕ್ಲಬ್ ಸೇರುವ ಎಲ್ಲ ಸಾಧ್ಯತೆಯಿದೆ. ಈ ವರೆಗಿನ ವೇಗ ಗಮನಿಸಿದರೆ ಹಾಗಂತ ಖಂಡಿತಾ ಅನ್ನಿಸುತ್ತದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಧಿಸಿದ ಹಾಗೆ ನಾಲ್ಕು ತಿಂಗಳಿನಲ್ಲಿ 33 ಕೋಟಿ ರುಪಾಯಿ ದಂಡದ ಮೊತ್ತ ಸಂಗ್ರಹವಾಗಿದೆ.
ಇನ್ನು ಈ ವರ್ಷದ ಜನವರಿ ಒಂದರಿಂದ ಮೇ ಮೂವತ್ತೊಂದರವರೆಗೆ 37 ಲಕ್ಷ ಪ್ರಕರಣಗಳನ್ನು ಸಂಚಾರ ಪೊಲೀಸರು ದಾಖಲಿಸಿದ್ದಾರೆ. ಇನ್ನು ಹಿಂದಿನ ವರ್ಷದ ಸಂಖ್ಯೆ ಬಗ್ಗೆ ಹೇಳಬೇಕು ಅಂದರೆ, 2016ರಲ್ಲಿ 91.80 ಲಕ್ಷ ಪ್ರಕರಣಗಳು ದಾಖಲಾಗಿ, 67 ಕೋಟಿ ರುಪಾಯಿ ದಂಡ ವಸೂಲಿ ಮಾಡಲಾಗಿತ್ತು.[ಟ್ರಾಫಿಕ್ ನಿಯಮ ಉಲ್ಲಂಘಿಸುವವರ ಮನೆ ಬಾಗಿಲಿಗೆ ಬಂದು ದಂಡ ವಸೂಲಿ]

ಈ ವರ್ಷ ದಾಖಲಾಗುತ್ತಿರುವ ಸಂಚಾರ ನಿಯಮ ಉಲಂಘನೆ ಪ್ರಕರಣಗಳು ಹಾಗೂ ಸಂಗ್ರಹವಾಗುತ್ತಿರುವ ದಂಡದ ಮೊತ್ತ ಗಮನಿಸಿದರೆ ನೂರು ಕೋಟಿ ರುಪಾಯಿ ದಾಟುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಾಲನಾ ಪರವಾನಗಿ ಇಲ್ಲದಿರುವುದು, ವೇಗದ ಚಾಲನೆ, ಟಿಂಟೆಡ್ ಗ್ಲಾಸ್, ವಿಮೆ ಇಲ್ಲದೆ ಚಾಲನೆ, ಹೆಲ್ಮೆಟ್ ಧರಿಸದೆ ಚಾಲನೆ, ನಿರ್ಬಂಧಿತ ಪ್ರದೇಶದಲ್ಲಿ ಹಾರ್ನ್ ಬಳಕೆ ಮಾಡಿರುವುದು ಹೆಚ್ಚಿನ ಪ್ರಕರಣ ದಾಖಲಾಗಿದೆ.[ನೋ ಲೈಸನ್ಸ್ 5 ಸಾವಿರ ದಂಡ, ತುರ್ತು ವಾಹನಕ್ಕೆ ಜಾಗ ಬಿಡದಿರೆ 10 ಸಾವಿರ]
ಮತ್ತು ಅವುಗಳಲ್ಲೇ ಹೆಚ್ಚಿನ ದಂಡ ಕೂಡ ವಸೂಲಾಗಿದೆ. ಹದಿನಾರರಿಂದ ಇಪ್ಪತ್ನಾಲ್ಕು ವರ್ಷದ ಯುವಕ-ಯುವತಿಯರ ಮೇಲೆ ಹೆಚ್ಚಿನ ಪ್ರಕರಣ ದಾಖಲಾಗಿವೆ. ಈ ಬಗ್ಗೆ ಪ್ರಜಾವಾಣಿಯಲ್ಲಿ ವರದಿ ಪ್ರಕಟವಾಗಿದೆ.












Click it and Unblock the Notifications