ಬೆಂಗಳೂರಿನ ಪ್ರಮುಖ ರಸ್ತೆ ಅಗಲೀಕರಣ: ಈ ಭಾಗದ ಆಸ್ತಿದಾರರಿಗೆ ಸಂಕಷ್ಟ!

ಬೆಂಗಳೂರಿನ ಕೆಲವು ಆಸ್ತಿದಾರರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಶಾಕ್ ನೀಡುವುದಕ್ಕೆ ಮುಂದಾಗಿದೆ. ಬೆಂಗಳೂರಿನಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸೇರಿದಂತೆ ಕೆಲವೊಂದು ಸಮಸ್ಯೆಗಳು ಎದುರಾಗುತ್ತಿವೆ. ಈ ಹಿಂದೆ ಮಾಡಲಾಗಿದ್ದ ರಸ್ತೆಗಳು ಕಿರಿದಾಗುತ್ತಿದ್ದು. ಜನ ಓಡಾಡುವುದಕ್ಕೆ ಹಾಗೂ ವಾಹನ ಸವಾರರ ಪ್ರಯಾಣಕ್ಕೆ ಸಮಸ್ಯೆ ಆಗುತ್ತಿದ್ದು, ಇದನ್ನು ಪರಿಹರಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಆದರೆ ಇದರಿಂದ ಬೆಂಗಳೂರಿನ ಹಲವು ಆಸ್ತಿದಾರರಿಗೆ ಸಂಕಷ್ಟವಾಗಲಿದೆ ಎಂದು ಹೇಳಲಾಗಿದೆ.

ಜೂನ್ 18 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಭೂಸ್ವಾಧೀನಕ್ಕಾಗಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಇದಾದ ನಂತರ ಐಟಿಪಿಎಲ್ - ಹೂಡಿ ಮುಖ್ಯ ರಸ್ತೆ ಸೇರಿದಂತೆ ಬೆಂಗಳೂರಿನ ವಿವಿಧ ಭಾಗದಲ್ಲಿ ಆಸ್ತಿ ಮಾಲೀಕರಿಂದ ವಿರೋಧ ವ್ಯಕ್ತವಾಗುತ್ತಿದೆ. ಆಸ್ತಿ ಮಾಲೀಕರು ತಮ್ಮ ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಬಿಬಿಎಂಪಿಯು ತನ್ನ ಅಧಿಸೂಚನೆಯಲ್ಲಿ ಬಾಡಿಗೆ ಮತ್ತು ಬೆಲೆಗಳ ದಾಖಲೆಗಳಲ್ಲಿ (ಆರ್‌ಟಿಸಿ) ಮಾಲೀಕರ ಹೆಸರುಗಳನ್ನು ಪಟ್ಟಿ ಮಾಡಿದೆ. ಈ ಆಸ್ತಿಗಳನ್ನು ದಶಕಗಳಿಂದ ನವೀಕರಿಸಲಾಗಿಲ್ಲ, ಆಸ್ತಿ ಮಾಲೀಕತ್ವವು ಬದಲಾಗಿದ್ದರೂ ಹಳೆ ಮಾಲೀಕರ ಹೆಸರಿನಲ್ಲೇ ಇದೆ ಎಂದು ಹೇಳಲಾಗಿದೆ. ಬಿಬಿಎಂಪಿ 2017ರಲ್ಲಿ ರಸ್ತೆ ಅಗಲೀಕರಣಕ್ಕಾಗಿ ಈಗ ಇರುವ ಮಾಲೀಕರಿಗೆ ನೋಟಿಸ್‌ಗಳನ್ನು ನೀಡಿದೆ. ಇದು ಆಸ್ತಿದಾರರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Widening of major roads in Bengaluru Trouble for property owners in this area

ಬಿಬಿಎಂಪಿಯು ಖಾತಾ ನೀಡುವಾಗ ಹಾಗೂ ಆಸ್ತಿ ತೆರಿಗೆ ಪಾವತಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ನಮ್ಮ ಮಾಲೀಕತ್ವವನ್ನು ಒಪ್ಪಿಕೊಂಡಿದೆ. ಆದರೆ, ಇದೀಗ ಸಮಸ್ಯೆ ಎದುರಾಗಿದೆ ಎಂದು ಇಲ್ಲಿನ ಸ್ಥಳೀಯ ನಿವಾಸಿಗಳು ಹಾಗೂ ಆಸ್ತಿದಾರರು ಹೇಳಿದ್ದಾರೆ ಎಂದು TH ವರದಿ ಮಾಡಿದೆ. ನ್ಯಾಯಯುತ ಪರಿಹಾರಕ್ಕಾಗಿ ಕಾನೂನುಬದ್ಧ ಆಸ್ತಿ ಮಾಲೀಕರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಬಿಎಂಪಿ ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದೆ. 2017 ರಲ್ಲಿ ಬಿಬಿಎಂಪಿ ಈ ರಸ್ತೆಯನ್ನು ಎರಡೂ ಬದಿಗಳಲ್ಲಿ 1.5 ಮೀಟರ್ ರಸ್ತೆ ಅಗಲೀಕರಣಕ್ಕೆ ಮುಂದಾಗಿತ್ತು. ಆಗ ಭೂ ಸ್ವಾಧೀನಕ್ಕಾಗಿ ನಮಗೆ ನೋಟಿಸ್ ನೀಡಿತ್ತು ಎಂದು ಇಲ್ಲಿನ ಆಸ್ತಿದಾರರು ಹೇಳಿದ್ದಾರೆ.

ಆಸ್ತಿ ಮಾಲೀಕರ ವಿಚಾರದಲ್ಲಿ ಗೊಂದಲ ಮುಂದುವರಿದಿರುವುದರಿಂದ ಟಿಡಿಆರ್ ಹಗರಣ ನಡೆಯಬಹುದು ಎಂದು ಕೆಲವು ಆಸ್ತಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಟಿಡಿಆರ್ ಹಗರಣವನ್ನು ಪುನರಾವರ್ತಿಸಲು ಈ ಅಧಿಸೂಚನೆಯನ್ನು ತರಾತುರಿಯಲ್ಲಿ ಮಾಡಲಾಗಿದೆ. ಅಧಿಕಾರಿಗಳು ನಕಲಿ ಭೂ ಮಾಲೀಕರ ಹೆಸರಿನಲ್ಲಿ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಲಾಭ ಗಳಿಸಿದ್ದಾರೆ. ಅಲ್ಲದೇ ಈ ಮೂಲಕ ಕಾನೂನುಬಾಹಿರವಾಗಿ ಟಿಡಿಆರ್ ನೀಡಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿದೆ. ಒಟ್ಟಾರೆ ಈ ಪ್ರಕ್ರಿಯೆಯು ಭಾರೀ ಗೊಂದಲವನ್ನು ಸೃಷ್ಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+