Lok Sabha Results: 310 ಸ್ಥಾನ ಗೆಲ್ಲುತ್ತಾ ಬಿಜೆಪಿ? ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಷ್ಟು ಸ್ಥಾನ?
2024ರ ಲೋಕಸಭೆ ಚುನಾವಣೆ ಫಲಿತಾಂಶ ಇನ್ನೇನು ಹೊರಬೀಳಲಿದೆ. ಹೀಗಾಗಿ ಸಕಲ ಸಿದ್ಧತೆ ಸಾಗಿದೆ. ಜೂನ್ 4ರಂದು ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಸೋಲು & ಗೆಲುವಿನ ಭಾರಿ ಲೆಕ್ಕಾಚಾರ ಶುರುವಾಗಿದೆ. ಹೀಗಿದ್ದಾಗಲೇ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಎಂಬ ಮಾಹಿತಿ ಇದೀಗ ಭರ್ಜರಿ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ 310 ಸ್ಥಾನ ಗೆಲ್ಲಬಹುದು ಎಂದು ಚರ್ಚಿಸಲಾಗುತ್ತಿದ್ದು, ಹಾಗಾದ್ರೆ ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲಬಹುದು? ಆ ಮಾಹಿತಿಗೆ ಮುಂದೆ ಓದಿ.
ಪ್ರಧಾನಿ ಮೋದಿ ನೇತೃತ್ವದಲ್ಲಿ ಭರ್ಜರಿಯಾಗಿ ಹ್ಯಾಟ್ರಿಕ್ ಬಾರಿಸಿ ಕೇಂದ್ರದ ಅಧಿಕಾರ ಹಿಡಿಯೋಕೆ, ಎನ್‌ಡಿಎ ಒಕ್ಕೂಟ ಸಜ್ಜಾಗಿದೆ. ಅದರಲ್ಲೂ ಈ ಬಾರಿ ಕನಿಷ್ಠ 400 ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಹೀಗಾಗಿ ಕರ್ನಾಟಕ ಸೇರಿದಂತೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ನಾಯಕರು ತಮ್ಮ ಮೈಂಡ್ ಫಿಕ್ಸ್ ಮಾಡಿಕೊಂಡಿದ್ದರು. ಹೀಗಾಗಿಯೇ, ಭರ್ಜರಿ ಪೈಪೋಟಿ ಕೂಡ ಏರ್ಪಟ್ಟಿತ್ತು. ಹಾಗಾದ್ರೆ ಬಿಜೆಪಿ ಪಕ್ಷದ 'ಮಿಷನ್ 400' ಸಕ್ಸಸ್ ಆಗುತ್ತಾ?

ಬಿಜೆಪಿಗೆ 310 ಸ್ಥಾನ ಸಿಗುತ್ತಾ?
ಇದೀಗ ಚುನಾವಣೆ ಕೊನೇ ಹಂತಕ್ಕೆ ಬಂದು ನಿಂತಿದ್ದು, ಇನ್ನೇನು ಮಂಗಳವಾರ ಲೋಕಸಭೆಯ ಚುನಾವಣೆ ಫಲಿತಾಂಶ ಹೊರಬೀಳಲಿದೆ. ಹಾಗಾದ್ರೆ ಬಿಜೆಪಿ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಪಕ್ಷಗಳು ಎಷ್ಟು ಸ್ಥಾನ ಪಡೆಯಲಿವೆ? ಎಂಬ ಕುರಿತು ಈಗ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದೆ. ಹಾಗೇ ಮತ್ತೊಂದು ಕಡೆ ಬೆಟ್ಟಿಂಗ್ ಅಡ್ಡೆಗಳಲ್ಲೂ ಈ ಕುರಿತು ಭಾರಿ ಚರ್ಚೆ ಆರಂಭವಾಗಿದೆ. ಹಾಗಾದರೆ, ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಬನ್ನಿ ತಿಳಿಯೋಣ.
ಷೇರು ಮಾರುಕಟ್ಟೆಯಲ್ಲಿ ಕೂಡ ಸಂಚಲನ!
ಜೂನ್ 1ರಂದು ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯಲಿದೆ. ಹೀಗೆ ಲೋಕಸಭೆ ಚುನಾವಣೆ-2024 ಅಂತಿಮ ಹಂತ ತಲುಪಲಿದೆ. ಅದೇ ದಿನ ಸಂಜೆ ಎಕ್ಸಿಟ್ ಪೋಲ್ ಕೂಡ ಹೊರಬೀಳಲಿದೆ. ಯಾರಿಗೆ ಗೆಲುವು? ಯಾರಿಗೆ ಸೋಲು? ಅನ್ನೋದು ಜೂನ್ 4 ರಂದು ಗೊತ್ತಾಗಲಿದೆ. ಹೀಗಿದ್ದಾಗಲೇ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಎಂಬ ಚರ್ಚೆ ಶುರುವಾಗಿದೆ. ಅದರಲ್ಲೂ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುವ ಷೇರು ಮಾರುಕಟ್ಟೆಯಲ್ಲೂ 2024ರ ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಶುರುವಾಗಿದೆ. ಬಿಜೆಪಿಗೆ ಈ ಬಾರಿ 310 ಸ್ಥಾನ ಸಿಗಬಹುದು ಎಂಬ ಮಾತುಗಳು ಚರ್ಚೆ ಮಾಡುವವರಿಂದ ಕೇಳಿಬಂದಿದೆ.
'ಗ್ಯಾರಂಟಿ' ಉತ್ತರ ಯಾವಾಗ ಗುರೂ?
ಷೇರುಪೇಟೆಯ ತಜ್ಞರ ಪ್ರಕಾರ ಬಿಜೆಪಿ ಪಕ್ಷ 310 ಸ್ಥಾನ ಗೆದ್ದು ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಸಾಧ್ಯತೆ ಇದೆ. ಈ ಮೂಲಕ ಪ್ರಧಾನಿ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆಗಲಿದ್ದಾರೆ, ಎಂಬ ಮಾತು ಕೇಳಿಬಂದಿದೆ. ಆದರೆ ಇದು ಅಭಿಪ್ರಾಯ ಮಾತ್ರ, ಹೀಗಾಗಿ ಜೂನ್ 4ಕ್ಕೆ ಪಕ್ಕಾ ಫಲಿತಾಂಶ ಹೊರಬೀಳಲಿದೆ. ಅದೇ ದಿನ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಕಾಂಗ್ರೆಸ್ ಎಷ್ಟು ಸ್ಥಾನ ಗೆಲ್ಲುತ್ತೆ? ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದು ಪ್ರಧಾನಿ ಮೋದಿ ಮತ್ತೊಮ್ಮೆ ಪಿಎಂ ಆಗ್ತಾರಾ? ಎಂಬ ಪ್ರಶ್ನೆಗಳಿಗೆ ಗ್ಯಾರಂಟಿ ಉತ್ತರ ಸಿಗಲಿದೆ.












Click it and Unblock the Notifications