BMRCL Good News: ಹೆಬ್ಬಾಳ, ಕೆಆರ್ ಪುರಂ ಮಾರ್ಗದಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಮೆಟ್ರೋ ಸಂಚಾರ ಆರಂಭ ಯಾವಾಗ?
BMRCL Good News: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಅದರಲ್ಲೂ ಬಹುನಿರೀಕ್ಷಿತ ಏರ್‌ಪೊರ್ಟ್ ಮಾರ್ಗದಲ್ಲಿ ಈ ನಿಲ್ದಾಣದಿಂದ ಯಾವಾಗ ಮೆಟ್ರೋ ಆರಂಭವಾಗಲಿದೆ ಎನ್ನುವ ಕುತೂಹಲ, ಪ್ರಶ್ನೆ ಕಾಡುತ್ತಿತ್ತು. ಇದೀಗ ಈ ಎಲ್ಲದಕ್ಕೂ ಬಿಎಂಆರ್‌ಸಿಎಲ್ ಉತ್ತರ ನೀಡಿದೆ. ಹಾಗಾದರೆ ಯಾವ ಮಾರ್ಗಗಳಿಂದ ಏರ್‌ಪೋರ್ಟ್‌ಗೆ ಮೊದಲು ಮೆಟ್ರೋ ಸಂಚಾರ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಬಹುತೇಕ ಮಂದಿ ಮೆಟ್ರೋ ಸಾರಿಗೆಯನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಏರ್‌ಪೋರ್ಟ್ ಮಾರ್ಗಕ್ಕೆ ತೆರಳಬೇಕೆಂದರೆ ತುಂಬಾ ಸಮಯ ಬೇಕಾಗುತ್ತಿತ್ತು. ಆದರೆ ಇದೀಗ ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದ್ದು, ಇದರಿಂದ ವಿಮಾನ ನಿಲ್ದಾಣಕ್ಕೆ ತಲುಪುವ ಪ್ರಯಾಣಿಕರಿಗೆ ಯಾವುದೇ ಯಾವುದೇ ಟ್ರಾಫಿಕ್ ಬಿಸಿ ತಟ್ಟುವುದಿಲ್ಲ.

ತುಂಬಾ ವರ್ಷಗಳಿಂದ ಮೆಟ್ರೋಗಾಗಿ ಕಾದಿದ್ದವರಿಗೆ ಕೊನೆಗೂ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ಕೊಟ್ಟಿದೆ. ಇದರೊಂದಿಗೆ ಬೆಂಗಳೂರಿಗರ ತುಂಬಾ ವರ್ಷಗಳ ಕನಸು ನನಸಾಗುವ ಕಾಲ ಸನಿಹವಾಗುತ್ತಿದೆ. ಮುಂದಿನ ಒಂದೂವರೆ ವರ್ಷದೊಳಗೆ ಅಂದರೆ 2026ರ ಜೂನ್‌ನಲ್ಲಿ ಹೆಬ್ಬಾಳದಿಂದ ಏರ್ಪೋರ್ಟ್ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಲ್ ತಿಳಿಸಿದೆ.
ಜೊತೆಗೆ 2026ರಲ್ಲಿಯೇ ಅಕ್ಟೋಬರ್‌ವೊಳಗೆ ಕೆಆರ್ ಪುರಂ-ಏರ್ಪೋರ್ಟ್ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ನಿರ್ಧಾರ ಮಾಡಿದೆ. ಕೆ.ಆರ್ ಪುರಂನಿಂದ ಏರ್ಪೋರ್ಟ್‌ಗೆ 37 ಕಿಲೋ ಮೀಟರ್ ಉದ್ದದ ಮಾರ್ಗ ನಿರ್ಮಾಣ ಮಾಡಲಾಗುತ್ತಿದ್ದು, ಸುಮಾರು 9,616.51 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈ ಮಾರ್ಗದಲ್ಲಿ 17 ಮೆಟ್ರೋ ನಿಲ್ದಾಣಗಳ ನಿರ್ಮಾಣ ಆಗಲಿವೆ.
ಕೆ.ಆರ್ ಪುರಂನಿಂದ ಏರ್ಪೋರ್ಟ್‌ಗೆ ಮೆಟ್ರೋ
* ದೂರ ಎಷ್ಟು? - 37 ಕಿಲೋ ಮೀಟರ್
* ವೆಚ್ಚ ಎಷ್ಟು? - 9,616.51 ಕೋಟಿ ರೂಪಾಯಿ
* ಮೆಟ್ರೋ ನಿಲ್ದಾಣಗಳ ಸಂಖ್ಯೆ - 17
ಕೆ.ಆರ್ ಪುರಂ ನಿಂದ ಏರ್‌ಪೋರ್ಟ್‌ವರೆಗೆ ಎತ್ತರಿಸಿದ ಮತ್ತು ಏರ್ಪೋರ್ಟ್ ಮಾರ್ಗದಲ್ಲಿ ಸುರಂಗ ರಸ್ತೆ ಇರಲಿದ್ದು, ಇಲ್ಲಿಗೆ ತಲುಪಲು ಬಾಕಿಯಿರುವ ಕಾಮಗಾರಿ ಕೆಲಸಗಳಿಗೆ ಬಿಎಂಆರ್‌ಸಿಲ್ ವೇಗ ನೀಡಿದೆ ಎಂದು ತಿಳಿದುಬಂದಿದೆ.
ಈ ಮಾರ್ಗದಲ್ಲಿ ಯಾವೆಲ್ಲಾ ನಿಲ್ದಾಣಗಳು ಬರಲಿವೆ?: ಕಸ್ತೂರಿನಗರ, ಹೊರಮಾವು, ಎಚ್‌ಆರ್‌ಬಿಆರ್ ಲೇಔಟ್, ಕಲ್ಯಾಣ ನಗರ, ಎಚ್‌ಬಿಆರ್ ಲೇಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ ಬಾಗಲೂರು ಕ್ರಾಸ್, ಬೆಟ್ಟಹಲಸೂರು ಅಥವಾ ಚಿಕ್ಕಜಾಲ, ದೊಡ್ಡಜಾಲ, ಏರ್‌ಪೋರ್ಟ್ ಸಿಟಿ, ಕೆಐಎಲ್ ಟರ್ಮಿನಲ್‌ಗಳು ಇರಲಿವೆ.
ತುಮಕೂರು ಮೆಟ್ರೋ: ತುಮಕೂರು ಮೆಟ್ರೋ ನಿರ್ಮಾಣದ ಬಗ್ಗೆ ಸಚಿವ ಜಿ.ಪರಮೇಶ್ವರ್ ಮಹತ್ವದ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆಯ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಅವರು ಮಾತನಾಡಿದರು.
ಜಿಲ್ಲೆಯು ಅಭಿವೃದ್ಧಿಯೆಡೆಗೆ ಸಾಗುತ್ತಿದೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ಘಟಕವನ್ನು ಸ್ಥಾಪಿಸಲು 20,000 ವೆಚ್ಚದ ಭೂಮಿಯನ್ನು ನೀಡಲಾಗಿದೆ. ಇನ್ನು ಜಿಲ್ಲೆಗೆ ಮೆಟ್ರೋ ರೈಲು ಯೋಜನೆ ತರಲು ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಾಗ, ಅದಕ್ಕೆ ಒಪ್ಪಿ ಕಾರ್ಯಸಾಧ್ಯತೆ ವರದಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವನ್ನು ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿದ್ದಾರೆ.
52.41 ಕಿಲೋ ಮೀಟರ್ ಉದ್ದದ ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಮಾರ್ಗದಲ್ಲಿ 19 ಎತ್ತರದ ನಿಲ್ದಾಣಗಳ ನಿರ್ಮಾಣ ಮಾಡಲು ಯೋಜನೆ ಮಾಡಲಾಗಿದೆ. ಮಾದಾವರ ನಿಲ್ದಾಣದಿಂದ ಪ್ರಾರಂಭ ಆಗುವ ಮೆಟ್ರೋ ಮಾರ್ಗವು ತುಮಕೂರು ಬಸ್ ನಿಲ್ದಾಣದವರೆಗೆ ವಿಸ್ತರಣೆ ಮಾಡುವ ಗುರಿ ಹೊಂದಲಾಗಿದೆ. ಬಹು ನಿರೀಕ್ಷಿತ ಈ ಯೋಜನೆಯು ತುಮಕೂರು ಬೆಂಗಳೂರು ನಡುವಿನ ಸಾರಿಗೆ ಸೌಲಭ್ಯವನ್ನು ಮತ್ತಷ್ಟು ಸುಲಭ ಆದಂತಾಗಲಿದೆ.












Click it and Unblock the Notifications