ತರಕಾರಿ ಬೆಲೆ ದಿಢೀರ್ ಏರಿಕೆ, ಕಾರಣವೇನು ಗೊತ್ತಾ
ಬೆಂಗಳೂರಲ್ಲಿ ಏಕಾಏಕಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಹಲವು ತರಕಾರಿಗಳ ಬೆಲೆ ಗಗನಮುಖಿಯಾಗಿದೆ. ಅಷ್ಟೇ ಅಲ್ಲ ಸಾಲು ಸಾಲು ಹಬ್ಬಗಳಿದ್ದು, ಈ ಸಂದರ್ಭದಲ್ಲಿ ಧಾರಾಕಾರ ಮಳೆಯಾಗುತ್ತಿರುವುದು ವ್ಯಾಪಾರಿಗಳನ್ನೂ ಕಂಗಾಲಾಗಿಸಿದೆ.
ರಾಜ್ಯದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಅಲ್ಲದೇ ಬಿಟ್ಟು ಬಿಡದೆ ಮಳೆಯಾಗುತ್ತಿರುವುದರಿಂದ ವ್ಯಾಪಾರ ಕುಸಿತ ಕಂಡಿದೆ. ಬೆಂಗಳೂರಿನ ಕೆಲವು ಪ್ರಮುಖ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಇನ್ನೂ ನೀರು ನಿಂತಿದ್ದು, ವಾಹನ ಸವಾರರು ಹಾಗೂ ಜನ ಸಂಕಷ್ಟ ಎದುರಿಸುತ್ತಿದ್ದಾರೆ. ಇಷ್ಟೆಲ್ಲ ಸಂಕಷ್ಟಗಳ ನಡುವೆ ಇದೀಗ ಹಲವು ತರಕಾರಿಗಳ ಬೆಲೆ ಏಕಾಏಕಿ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಕಳೆದ ಹತ್ತು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಇತಂಹ ಸಂದರ್ಭದಲ್ಲಿ ಧಾರಾಕಾರ ಮಳೆಯಾಗುತ್ತಿರುವುದು ಜನರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಹಬ್ಬದ ಸೀಸನ್‌ಗಳಲ್ಲಿ ತರಕಾರಿ ಹಾಗೂ ಹೂವು ಹೆಚ್ಚು ಮಾರಾಟವಾಗುತ್ತದೆ.
ದೀಪವಾವಳಿ ಹಿಂದೂಗಳ ಪಾಲಿಗೆ ವಿಶೇಷವಾದ ಹಬ್ಬವಾಗಿದೆ. ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಅಕ್ಟೋಬರ್ 27ರ ವರೆಗೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಆತಂಕವೂ ಎದುರಾಗಿದೆ.
ಇನ್ನು ಬೆಂಗಳೂರಿನಲ್ಲಿ ನಿರಂತರ ಮಳೆಯ ಪ್ರಭಾವದಿಂದಾಗಿ ಹಲವು ತರಕಾರಿಗಳ ಬೆಲೆಯು ಗಗಮುಖಿಯಾಗಿದೆ. ನಿರಂತರ ಮಳೆಯಿಂದಾಗಿ ತರಕಾರಿ ಬೆಲೆ ಹೆಚ್ಚಳವಾಗಿದೆ. ಮಳೆಯಿಂದಾಗಿ ತರಕಾರಿ ಪೂರೈಕೆ ವ್ಯತ್ಯಾಸವಾಗಿದೆ. ಅಲ್ಲದೇ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ಬೇಡಿಕೆ ಹೆಚ್ಚಿದ್ದರೂ, ಪೂರೈಕೆ ಕಡಿಮೆಯಾಗಿದೆ. ತರಕಾರಿ ಪೂರೈಕೆ ಹಾಗೂ ಬೇಡಿಕೆ ನಡುವಿನ ವ್ಯತ್ಯಾಸದಿಂದಾಗಿ ಸಹಜವಾಗಿಯೇ ಬೆಲೆ ಏರಿಕೆಯಾಗಿದೆ.

ಮಳೆಯಿಂದಾಗಿ ಈರುಳ್ಳಿ, ಟೊಮೆಟೊ ಹಾಗೂ ಆಲೂಗಡ್ಡೆ ಸೇರಿದಂತೆ ಅಗತ್ಯ ತರಕಾರಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಬೆಳ್ಳುಳ್ಳಿ ಹಾಗೂ ಶುಂಠಿ ಬೆಲೆ ಹೆಚ್ಚಳವಾಗಿದೆ. ಬೆಳ್ಳುಳ್ಳಿ ಬೆಲೆ ಕೆಜಿಗೆ 320 ರೂಪಾಯಿಯಿಂದ 440 ರೂಪಾಯಿಗೆ ಹೆಚ್ಚಳವಾಗಿದೆ. ಶುಂಠಿ ಬೆಲೆಯು 75ರಿಂದ 100 ರೂಪಾಯಿ ಆಗಿದೆ. ಅಲ್ಲದೇ, ಈರುಳ್ಳಿ ಬೆಲೆ ಪ್ರತಿ ಕೆಜಿಗೆ 70 ರೂಪಾಯಿಯಿಂದ 80 ರೂಪಾಯಿಗೆ ಏಕಾಏಕಿ ಹೆಚ್ಚಳವಾಗಿದೆ.
ಆಲೂಗಡ್ಡೆ ಬೆಲೆ 50 ರೂಪಾಯಿಯಿ 70 ರೂಪಾಯಿ ಆಗಿದ್ದರೆ, ಟೊಮೆಟೊ ಬೆಲೆ ಪ್ರತಿ ಕೆಜಿಗೆ 60ರಿಂದ 85 ರೂಪಾಯಿ ಆಗಿದೆ. ಹಸಿಮೆಣಸಿನಕಾಯಿ ಬೆಲೆ 50ರೂಪಾಯಿಂದ 70 ರೂಪಾಯಿ ಆಗಿದೆ. ಬೀಟ್‌ರೂಟ್ ಬೆಲೆ 45 ರೂಪಾಯಿಯಿಂದ 60 ರೂಪಾಯಿ ತಲುಪಿದೆ. ಕ್ಯಾಪ್ಸಿಕಂ (ದೊಡ್ಡ ಮೆಣಸಿನಕಾಯಿ) 50 ರೂಪಾಯಿಯಿಂದ 65 ರೂಪಾಯಿ, ಹಾಗಲಕಾಯಿ ಪ್ರತಿ ಕೆಜಿಗೆ 45ರಿಂದ 65 ರೂಪಾಯಿ ಆಗಿದೆ.
ಇನ್ನು ಸೌತೆಕಾಯಿ ಬೆಲೆ 45ರಿಂದ 55 ರೂಪಾಯಿ ಆಗಿದೆ. ಡಬಲ್ ಬೀನ್ಸ್ 35ರಿಂದ 50 ರೂಪಾಯಿ, ಬದನೆಕಾಯಿ 40ರಿಂದ 55 ರೂಪಾಯಿ ತಲುಪಿದೆ. ಇದರೊಂದಿಗೆ ವಿವಿಧ ತರಕಾರಿಗಳ ಬೆಲೆಯೂ ಹೆಚ್ಚಳವಾಗಿದೆ.
ಚಿಲ್ಲರೆ ಹಣದುಬ್ಬರ: ಇನ್ನು ದೇಶದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಮೊದಲ ಬಾರಿಗೆ, ತರಕಾರಿ ಹಣದುಬ್ಬರವು ಹೆಚ್ಚಳವಾಗಿದೆ. ತರಕಾರಿ ಹಣದುಬ್ಬರವು ಶೇಕಡಾ 9.24ಕ್ಕೆ ಏರಿಕೆಯಾಗಿದೆ. ಈ ಎಲ್ಲಾ ಕಾರಣಗಳಿಂದ ತರಕಾರಿ ಬೆಲೆಯು ಏಕಾಏಕಿ ಹೆಚ್ಚಳವಾಗಿದೆ.












Click it and Unblock the Notifications